ಸರ್ಕಾರದ ವಿರುದ್ಧ ಆಟೋ ಸಮರ..! ಇಂದಿನಿಂದ ಆಟೋ ಚಾಲಕರ ಸಾಂಕೇತಿಕ ಪ್ರತಿಭಟನೆ

0

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಾಪಿಡೋ ಸೇರಿದಂತೆ ವಿವಿಧ ಬೈಕ್ ಟ್ಯಾಕ್ಸಿ ನಿಷೇಧ ಮಾಡುವಂತೆ ಒತ್ತಾಯಿಸಿ ಇಂದಿನಿಂದ ಸಾಂಕೇತಿ ಕವಾಗಿ ಆಟೋ ಚಾಲಕರು ತಮ್ಮ ವಾಹನಗಳಿಗೆ ಕಪ್ಪುಬಾವುಟ ಕಟ್ಟಿ ಪ್ರತಿಭಟನೆ ನಡೆಸಲಿದ್ದಾರೆ. ತಮ್ಮ ಬೇಡಿಕೆ ಈಡೇರದಿದ್ದರೆ ಸೋಮವಾರ ಆಟೋ ಸೇವೆ ಬಂದ್ ಮಾಡಲು ನಿರ್ಧರಿಸಿದ್ದಾರೆ.

ಆಟೋ ಚಾಲಕರು ಹಾಗೂ ಬೈಕ್ ಟ್ಯಾಕ್ಸಿ ಕಂಪನಿಗಳ ಮಧ್ಯೆ ಹಲವು ತಿಂಗಳಿಂದಲೂ ಹಗ್ಗಜಗ್ಗಾಟ ನಡೆಯುತ್ತಿದೆ.

“ರಾಪಿಡೋ ಬೈಕ್ ಸಂಚಾರದಿಂದ ಆಟೋ ಚಾಲಕರಿಗೆ ಬಿಸ್ನೆಸ್ ಆಗುತ್ತಿಲ್ಲ. ತಮ್ಮ ಪಾಲಿನ ಗ್ರಾಹಕರು ಸುಲಭವಾಗಿ ವೈಟ್ ಬೋರ್ಡ್ ಬೈಕ್ ಕಂಪನಿಗಳಿಗೆ ಹೋಗುತ್ತಿದ್ದಾರೆ. ನ್ಯಾಯಬದ್ದವಾಗಿ ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿದ್ದೇವೆ. ಆದರೆ ವಾಮಮಾರ್ಗದಿಂದ‌ ಕಾನೂನುಬಾಹಿರವಾಗಿ ಬೈಕ್, ಟ್ಯಾಕ್ಸಿಗಳು ಸೇವೆ ನೀಡುತ್ತಿರುವುದು ಎಷ್ಟು ಸರಿ?. ಹೀಗಾಗಿ ಹೀಗೆ ಬೈಕ್ ಸೇವೆ ನೀಡುತ್ತಿರುವ ಕಂಪನಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು‌” ಎಂದು ಆಟೋ ಸಂಘಟನೆಯ ಮುಖಂಡರು ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed