ಬೈಯಪ್ಪನಹಳ್ಳಿ – KR ಪುರ ಮಾರ್ಗ ಜುಲೈ 15ರೊಳಗೆ ಕಾರ್ಯಾರಂಭ: ಅಂಜುಮ್ ಪರ್ವೇಜ್

0

ಬೆಂಗಳೂರು: ಬೈಯಪ್ಪನಹಳ್ಳಿ – ಕೆಆರ್ ಪುರ ಮಾರ್ಗ ಜುಲೈ 15ರೊಳಗೆ ಕಾರ್ಯಾರಂಭ ಆಗಲಿದೆ ಎಂದು ಮೆಟ್ರೋ ಎಂಡಿ ಅಂಜುಮ್ ಪರ್ವೇಜ್(Namma metro) ತಿಳಿಸಿದ್ದಾರೆ. ಬೆಂಗಳೂರು ಮೆಟ್ರೋದ ಬಹುನಿರೀಕ್ಷಿತ 2 ಕಿಮೀ ಉದ್ದದ ಬೈಯಪ್ಪನಹಳ್ಳಿ – ಕೆಆರ್ ಪುರ ಮೆಟ್ರೋ ವಿಭಾಗ ಜುಲೈ 15 ರೊಳಗೆ ಕಾರ್ಯನಿರ್ವಹಿಸಲಿದೆ.

ಸದ್ಯ ಬೈಯಪ್ಪನಹಳ್ಳಿ ಮತ್ತು ಜ್ಯೋತಿಪುರ ಎರಡೂ ಕಡೆಯಿಂದ ಟ್ರ್ಯಾಕ್ ಲೇಯಿಂಗ್ ಪ್ರಗತಿಯಲ್ಲಿದೆ. ಈ ತಿಂಗಳ ಅಂತ್ಯದ ವೇಳೆಗೆ ಇದು ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಟ್ರಾಕ್ಷನ್, ಸಿಗ್ನಲಿಂಗ್ ಮತ್ತು ಇತರ ಸಂಬಂಧಿತ ಕೆಲಸಗಳನ್ನು ಜೂನ್ 15 ರೊಳಗೆ ಪೂರ್ಣಗೊಳಿಸಲಾಗುವುದು ಮತ್ತು ಪ್ರಾಯೋಗಿಕ ರನ್‌ಗಳು ನಡೆಯಲಿವೆ. ದೂರವು ಕಡಿಮೆ ಇರುವುದರಿಂದ, ಪ್ರಾಯೋಗಿಕ ರನ್‌ಗಳನ್ನು ತ್ವರಿತವಾಗಿ ಪೂರ್ಣಗೊಳಿಸಬಹುದು. ಇದರ ಕೊನೆಯಲ್ಲಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರನ್ನು ಪರಿಶೀಲನೆಗೆ ಆಹ್ವಾನಿಸಲಾಗುತ್ತದೆ. ಜೂನ್ ತಿಂಗಳಿನಿಂದ ಕೆಆರ್ ಪುರ – ಬೈಯಪ್ಪನಹಳ್ಳಿ ವಿಭಾಗದ ವಾಣಿಜ್ಯ ಕಾರ್ಯಾಚರಣೆಯನ್ನು ಜುಲೈ 15 ರೊಳಗೆ ಪ್ರಾರಂಭಿಸಲಾಗುವುದು” ಎಂದು ಅವರು ಮಾಹಿತಿ ನೀಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed