ಭೋಪಾಲ್-ಉಜ್ಜೈನಿ ರೈಲು ಸ್ಫೋಟ ಕೇಸ್: 7 ಅಪರಾಧಿಗಳಿಗೆ ಮರಣದಂಡನೆ

0

ಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ರೈಲು ಸ್ಫೋಟ ಪ್ರಕರಣದಲ್ಲಿ ಉತ್ತರ ಪ್ರದೇಶದ ವಿಶೇಷ ಎನ್‌ಐಎ ಕೋರ್ಟ್ ನ ತೀರ್ಪು ಇಂದು ಹೊರಬಿದ್ದಿದ್ದು ಎಂಟು ಅಪರಾಧಿಗಳ ಪೈಕಿ ಏಳು ಮಂದಿಗೆ ಮರಣದಂಡನೆ ವಿಧಿಸಲಾಗಿದ್ದು, ಒಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಆರು ವರ್ಷಗಳ ಹಿಂದೆ ಶಾಜಾಪುರ ಸಮೀಪದ ಜಬ್ಡಿ ರೈಲು ನಿಲ್ದಾಣದಲ್ಲಿ ಭೋಪಾಲ್-ಉಜ್ಜಯಿನಿ ಪ್ಯಾಸೆಂಜರ್ ರೈಲಿನಲ್ಲಿ ಸ್ಫೋಟ ಸಂಭವಿಸಿತ್ತು.

ಇದರಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದರು.

ಮಾಹಿತಿಯ ಪ್ರಕಾರ, ಆರು ವರ್ಷಗಳ ಹಿಂದೆ ಮಧ್ಯಪ್ರದೇಶದ ಶಾಜಾಪುರ ಬಳಿಯ ಜಬ್ರಿ ರೈಲು ನಿಲ್ದಾಣದಲ್ಲಿ ಬೆಳಿಗ್ಗೆ 9.38ಕ್ಕೆ ಭೋಪಾಲ್-ಉಜ್ಜಯಿನಿ ಪ್ಯಾಸೆಂಜರ್ ರೈಲಿನಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ 9 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ರೈಲಿನಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಜನರು ರೈಲಿನಿಂದ ಜಿಗಿದಿದ್ದು, ಅನೇಕ ಪ್ರಯಾಣಿಕರು ಗಾಯಗೊಂಡಿದ್ದರು. ಈ ಘಟನೆಯ ತನಿಖೆಯನ್ನು ಎನ್‌ಐಎಗೆ ವಹಿಸಲಾಗಿತ್ತು.

ಈ ಪ್ರಕರಣ ವಿಚಾರಣೆ ಲಖನೌದ NIA ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಕಳೆದ ಶುಕ್ರವಾರವೇ, ಎನ್‌ಐಎ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ವಿವೇಕಾನಂದ ಶರಣ್ ಪಾಂಡೆ ಅವರು ಎಲ್ಲಾ ಎಂಟು ಆರೋಪಿಗಳನ್ನು ದೋಷಿ ಎಂದು ಘೋಷಿಸಿದ್ದು ಶಿಕ್ಷೆ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಲಾಗಿತ್ತು. ಅಪರಾಧಿಗಳನ್ನು ಮೊಹಮ್ಮದ್ ಫೈಸಲ್, ಗೌಸ್ ಮೊಹಮ್ಮದ್, ಅಜರ್, ಅತೀಫ್ ಮುಜಾಫರ್, ಡ್ಯಾನಿಶ್, ಮೀರ್ ಹುಸೇನ್, ಆಸಿಫ್, ಇಕ್ಬಾಲ್ ಮತ್ತು ಅತೀಫ್ ಇರಾನಿ ಸೇರಿದ್ದಾರೆ.

About Author

Leave a Reply

Your email address will not be published. Required fields are marked *

You may have missed