ತಂದೆ ತಾಯಿಯ ಆಶೀರ್ವಾದ ಬಹುಮುಖ್ಯ: ಸಚಿವ ಬಿ.ಸಿ.ಪಾಟೀಲ್

0

ಹಾವೇರಿ 16 ಜನವರಿ: ಬದುಕಿನಲ್ಲಿ ತಂದೆತಾಯಿ ಗುರುಹಿರಿಯರ ಆಶೀರ್ವಾದ ಬಹುಮುಖ್ಯ ಎಂದು ಕೃಷಿಸಚಿವರೂ ಆಗಿರುವ ಗದಗ-ಚಿತ್ರದುರ್ಗ ಉಸ್ತುವಾರಿ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟರು. ಸಚಿವರ ಸ್ವಗ್ರಾಮವಾದ ಸೊರಬ ತಾಲೂಕಿನ ಯಲಿವಾಳ ಗ್ರಾಮದ ತೋಟದಲ್ಲಿಂದು ಬಿ.ಸಿ.ಪಾಟೀಲರು ಕುಟುಂಬಸ್ಥರು ಸಹೋದರರೊಡಗೂಡಿ ತಂದೆ ಚನ್ನವಸವನಗೌಡ ದೊಡ್ಡಮಲ್ಲನಗೌಡ ಪಾಟೀಲ್ ಹಾಗೂ ತಾಯಿ ಶಿವಮ್ಮ ಪಾಟೀಲ್ ಇವರ ಪುತ್ಥಳಿ ಅಬಾವರಣಗೊಳಿಸಿದರು.

 

ತಂದೆತಾಯಿಯರು ನೈಜ ದೈವಗಳಾಗಿದ್ದು,ಬದುಕಿನ ಬಹುದೊಡ್ಡ ಪ್ರೇರಣೆಯಾಗಿದ್ದಾರೆ.ಬಹುದಿನಗಳಿಂದ ತಂದೆತಾಯಿಯ ಪುತ್ತಳಿ ನಿರ್ಮಾಣ ಮಾಡಬೇಕೆಂಬ ಮನದಾಸೆ ಇಂದು ಈಡೇರಿದಂತಾಗಿದೆ.ತಂದೆತಾಯಿಗಳು ಮಕ್ಕಳ ಮೊದಲ ದೈವವಾಗಿದ್ದು,ಅವರ ಮಾರ್ಗದರ್ಶನ ಮಕ್ಕಳ ಬದುಕಿನ ದಾರಿದೀಪವಾಗಿದೆ.

ತಂದೆತಾಯಿಯ ಆಶೀರ್ವಾದವೆನ್ನುವುದು ದೈವದ ಬಲದಂತೆ ಸದಾ ಇರುತ್ತದೆ ಎಂದು ಅವರು ಅಂತರಾಳದ ಮಾತುಗಳನ್ನು ಈ ವೇಳೆ ಬಿಚ್ಚಿಟ್ಟರು. ಪುತ್ಥಳಿ ಅನಾವರಣ ಸಂದರ್ಭದಲ್ಲಿ ಸಚಿವರ ಪತ್ನಿ ವನಜಾಪಾಟೀಲ್, ಪುತ್ರಿಯರಾದ ಸೃಷ್ಟಿ ಪಾಟೀಲ್, ಸೌಮ್ಯಪಾಟೀಲ, ಸಹೋದರ ಅಶೋಕ್ ಪಾಟೀಲ್ ಸೇರಿದಂತೆ ಬಿ.ಸಿ.ಪಾಟೀಲರ ಅಭಿಮಾನಿಗಳು,ಕುಟುಂಬದ ಸದಸ್ಯರು ಮತ್ತಿತರರು ಪಾಲ್ಗೊಂಡಿದ್ದರು.

About Author

Leave a Reply

Your email address will not be published. Required fields are marked *

You may have missed