Johnson ಬೇಬಿ ಪೌಡರ್ ಮಾರಾಟಕ್ಕೆ ಬಾಂಬೆ ಹೈಕೋರ್ಟ್ ಅನುಮತಿ

0

ಮುಂಬೈ: ಜಾನ್ಸನ್ ಅಂಡ್ ಜಾನ್ಸನ ತನ್ನ ಬೇಬಿ ಪೌಡರ್ ಉತ್ಪಾದನೆ ಮತ್ತು ಮಾರಾಟ ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಜಾನ್ಸನ್ ಅಂಡ್ ಜಾನ್ಸನ್ ಬೇಬಿ ಪೌಡರ್ ಉತ್ಪಾದನೆಗೆ ಮಹಾರಾಷ್ಟ್ರ ಸರ್ಕಾರ ಹೇರಿದ್ದ ಮೂರು ಆದೇಶಗಳನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿ, ಬೇಬಿ ಪೌಡರ್ ಉತ್ಪಾದನೆ ಮತ್ತು ಮಾರಾಟಕ್ಕೆ ಅನುಮತಿ ನೀಡಿದೆ.

ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ಎಸ್ ಜಿ ಡಿಗೆ ಅವರ ವಿಭಾಗೀಯ ಪೀಠವು ಡಿಸೆಂಬರ್ 2018 ರಲ್ಲಿ ವಶಪಡಿಸಿಕೊಂಡ ಕಂಪನಿಯ ಬೇಬಿ ಪೌಡರ್‌ನ ಮಾದರಿಯನ್ನು ಪರೀಕ್ಷಿಸಲು ವಿಳಂಬ ಮಾಡಿದ್ದಕ್ಕಾಗಿ ರಾಜ್ಯ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ವಿರುದ್ಧ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.

ಸೌಂದರ್ಯವರ್ಧಕ ಉತ್ಪನ್ನಗಳಿಗೆ ಗುಣಮಟ್ಟ ಮತ್ತು ಸುರಕ್ಷತೆಯ ಮಾನದಂಡಗಳನ್ನು ಕಾಪಾಡಿಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಪೀಠವು ಗಮನಿಸಿದೆ. ಅದೇ ಸಮಯದಲ್ಲಿ ಉತ್ಪನ್ನಗಳಲ್ಲಿ ಸ್ವಲ್ಪ ವಿಚಲನ ಉಂಟಾದಾಗ ಇಡೀ ಉತ್ಪಾದನಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವುದು ಸಮಂಜಸವಾಗಿ ತೋರುತ್ತಿಲ್ಲ. ಅಂತಹ ವಿಧಾನವು ಗಣನೀಯ ಪ್ರಮಾಣದ ‘ವಾಣಿಜ್ಯ ಅವ್ಯವಸ್ಥೆ ಮತ್ತು ವ್ಯರ್ಥತೆಗೆ’ ಕಾರಣವಾಗುತ್ತದೆ ಎಂದು ಅದು ಹೇಳಿದೆ.

About Author

Leave a Reply

Your email address will not be published. Required fields are marked *

You may have missed