ಕಾವೇರಿ ನೀರು ಮೀಸಲಿಡುವಂತೆ BWSSB ಪತ್ರ

0

ಬೆಂಗಳೂರು: ಬೇಸಿಗೆ ಮುಗೀದು ಮಳೆಗಾಲ ಆರಂಭವಾಗಿದೆ. ಆದ್ರೆ ಇನ್ನೂ ಮಳೆರಾಯ ಕೃಪೆ ತೋರಿಲ್ಲ. ಹೀಗಾಗಿ ರಾಜ್ಯಾದ್ಯಂತ ನೀರಿನ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತ ಕಂಡು,ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಆತಂಕ ಇದೆ.ನಗರದಲ್ಲಿ ನೀರಿನ ಬವಣೆ ಕೂಡ ಹೆಚ್ಚಾಗಿ ಕಾಡಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಜಲಮಂಡಳಿ ಕಾವೇರಿ ನೀರಾವರಿ ನಿಗಮಕ್ಕೆ ನೀರು ಮೀಸಲಿಡುವಂತೆ ಪತ್ರ ಬರೆಯಲಾಗಿದೆ.

 

ಬೆಂಗಳೂರಿನ ನೀರಿನ ಸಮಸ್ಯೆಗೆ ಸರ್ಕಾರವಂತೂ ಶಾಶ್ವತ ಪರಿಹಾರ ಕೊಡಲಿಲ್ಲ. ಹೀಗಾಗಿ ಕಾವೇರಿ ಮೂಲದಿಂದ ಬರುತ್ತಿರುವ ನೀರನ್ನು ಅವಲಂಬಿಸಬೇಕಿದೆ.ನಗರದ ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಗೊಂಡಿರುವ 110 ಹಳ್ಳಿಗಳಿಗಂತೂ ಮಳೆಗಾಲ ಬೇಸಿಗೆ ಎನ್ನದೆ ತೀವ್ರ ನೀರಿನ ಅಭಾವ ಇದೆ.ಜೂನ್ ಆರಂಭವಾದ್ರೂ ಈ ಇನ್ನೂ ಮುಂಗಾರು ಶುರುವಾಗಿಲ್ಲ. ಹೀಗಾಗಿ ಜಲಾಶಯಗಳಲ್ಲಿ ನೀರಿ ಖಾಲಿಯಾಗ್ತಾ ಬರುತ್ತಿದ್ದು, ಬೆಂಗಳೂರು ಜಲಮಂಡಳಿಗೆ ಆತಂಕ ಹೆಚ್ಚಿಸಿದೆ.ಮಳೆ ಬಾರದಿದ್ರೂ ನಗರದಲ್ಲಿ ನೀರಿನ ಅಭಾವ ಹೆಚ್ಚುಗುವ ಭೀತಿ ಹೆಚ್ಚಾಗಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕ್ರಮ ಕೈಗೊಳ್ಳಕ್ಕೆ ಮುಂದಾಗಿದೆ.

ಹೌದು.. ಮಳೆಗಾಲದಲ್ಲಿ ನೀರಿನ ಸಮಸ್ಯೆ ಎದುರಾಗದು ಎಂದು ಹೇಳುತ್ತಿದ್ದಾರಾದರೂ ವಾಸ್ತವ ಇದಕ್ಕೆ ತದ್ವಿರುದ್ಧ. ಇದೆಲ್ಲದರ ಪರಿಣಾಮ ಮಳೆಗಾಲದಲ್ಲೂ ನಗರದ ನಾಗರಿಕರಿಗೆ ನೀರಿನ ಬಿಸಿಯೂ ತಟ್ಟಲಿದೆ.ಹೀಗಾಗಿ ಕಾವೇರಿ ಕಣಿವೆಯಲ್ಲಿ ನೀರಿನ ಪ್ರಮಾಣ ಕುಸಿಯುತ್ತಿರುವ ಕಾರಣ ನಗರಕ್ಕೆ ಮುಂದಿನ ಮೂರು ತಿಂಗಳಿಗೆ ಅಗತ್ಯ ಇರುವ 4.8 ಟಿಎಂಸಿ ಕೆಆರ್‌ಎಸ್ ಜಲಾಯಶದಲ್ಲಿ ನೀರು ಮೀಸಲು ಇಡುವಂತೆ ಕಾವೇರಿ ನೀರಾವರಿ ನಿಗಮಕ್ಕೆ ಜಲಮಂಡಳಿ ಪತ್ರ ಬರೆದಿದೆ.

ನಗರಕ್ಕೆ ಪ್ರತಿದಿನ 135 ಕೋಟಿ ಲೀಟರ್ ನೀರು ಕಾವೇರಿಯಿಂದ ಪೂರೈಕೆ ಮಾಡಲಾಗುತ್ತಿದೆ. ಪ್ರತಿ ತಿಂಗಳು 1.6 ಟಿಎಂಸಿ ನೀರು ಅಗತ್ಯ ಇದೆ.ಈಗಿನಿಂದ ಆಗಸ್ಟ್ ವರಿಗೆ 4.8 ಟಿಎಂಸಿ ನೀರು ಅಗತ್ಯ ಇದೆ.ಕೆಆರ್‌ಎಸ್ ಜಲಾಶಯದಲ್ಲಿ ಸದ್ಯ 11 ಟಿಎಂಸಿ ಅಡಿ ಮಾತ್ರ ನೀರು ಇದೆ. ಕಾವೇರಿ ಜಲಾಶಯದ ನೀರು ಚಾಮರಾಜನಗರ ,ಮೈಸೂರು, ಮಂಡ್ಯ ,ರಾಮನಗರಕ್ಕೆ ,ಕುಡಿಯುವ ನೀರು ಪೂರೈಕೆ ಮಾಡಬೇಕಿದೆ.ಇದಕ್ಕೆ 4 ರಿಂದ 6 ಟಿಎಂಸಿ ಮೀಸಲಿಡಬೇಕಿದೆ..ಉಳಿದ ನೀರನ್ನ ನಗರಕ್ಕೆ ಮೀಸಲಿಡಿ ಅಂತ ಜಲಮಂಡಳಿ ಕೋರಿಕೆ ಸಲ್ಲಿಸಿದೆ.

ಜಲಮಂಡಳಿ ಬೆಂಗಳೂರಿಗೆ 52 ವರ್ಷದಿಂದ ಕಾವೇರಿ ನೀರು ಪೂರೈಕೆ ಮಾಡುತ್ತಿದೆ.2012 ರಲ್ಲಿ ಭೀಕರ ಜಲಕ್ಷಾಮ ತೀವ್ರವಾಗಿ ಕಾಡಿತ್ತು.ಅದೇ ರೀತಿ 2015 ರಲ್ಲಿ ಕೆಆರ್ ಎಸ್ ಜಲಾಶಯ ಖಾಲಿಯಾಗಿ ಹೇಮಾವತಿ ಜಲಾಶಯ ಮೂಲಕ ನೀರನ್ನ ಪೂರೈಕೆ ಮಾಡಲಾಯಿತು.ಈ ವರ್ಷ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ನೀರಾವರಿ ನಿಗಮಕ್ಕೆ ಪತ್ರ ಬರೆಯಲಾಗಿದೆ.:ಒಟ್ಟಿನಲ್ಲಿ ನಗರದಲ್ಲಿ ಈಗಾಗಲೇ ಕೊಳವೆ ಬಾವಿಗಳು ಬತ್ತಿ ಹೋಗಿವೆ.ಇದರಿಂದ ನಗರಕ್ಕೆ ನೀರಿನ ಬವಣೆ ಹೆಚ್ಚಿದ್ದು, ಮಳೆರಾಯ ಕೃಪೆ ಕೊಡದಿದ್ರೆ ಹನಿ ಹನಿಗೆ ನೀರಿನ ಸಮಸ್ಯೆ ಕಾಡಲಿದೆ

About Author

Leave a Reply

Your email address will not be published. Required fields are marked *

You may have missed