ಬೆಂಗಳೂರಿನಲ್ಲಿ ಚುನಾವಣಾ ಚಾಣಕ್ಯನ ಮತಬೇಟೆ..!

0

ಬೆಂಗಳೂರು: ಕೇಂದ್ರ ಸಚಿವ ಅಮಿತ್ ಶಾ (Amit shah in Bangalore) ಅವರು ಬೆಂಗಳೂರಿನ ಮೂರು ಕಡೆಗಳಲ್ಲಿ ಇಂದು ರೋಡ್ ಶೋ ನಡೆಸಲಿದ್ದಾರೆ.ಕಳೆದ ಎರಡು ದಿನ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ರೋಡ್ ಶೋ ಮೂಲಕ ಮತಬೇಟೆ ನಡೆಸಿದ ಬೆನ್ನಲ್ಲೇ ಇಂದು ಬೆಂಗಳೂರಿಗೆ(Amit shah in Bangalore) ಆಗಮಿಸಲಿರುವ ಅಮಿತ್ ಶಾ ಅವರು, ಇಂದು ಸಂಜೆ 4.50 ರಿಂದ 5.40 ರವರೆಗೆ ಮೊದಲನೇ ರೋಡ್ ಶೋ ನಡೆಸುವರು.

ಆಡುಗೋಡಿ ಸಿಗ್ನಲ್​ನಿಂದ ಮಡಿವಾಳದ ಟೋಟಲ್ ಮಾಲ್​ವರೆಗೂ ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಶೋ ಮೂಲಕ ಪ್ರಚಾರ ನಡೆಸಲಿದ್ದಾರೆ.

ಸಂಜೆ 5.50 ರಿಂದ 6.40 ರವರೆಗೆ ಈಸ್ಟ್ ಎಂಡ್ ಮುಖ್ಯ ರಸ್ತೆಯಿಂದ ಜಯನಗರದ ಶಾಲಿನಿ ಮೈದಾನದವರೆಗೆ ಎರಡನೇ ರೋಡ್ ಶೋ ನಡೆಸುವರು. ಬಿಟಿಎಂ ಲೇಔಟ್ ಹಾಗು ಜಯನಗರ ಕಾಂಗ್ರೆಸ್ ತೆಕ್ಕೆಯಲ್ಲಿದ್ದು ಈ ಬಾರಿ ಮತ ತಪ್ಪಬಾರದೆಂದು ಬಿಜೆಪಿ ಪಣ ತೊಟ್ಟಿದ್ದು ಅಮಿತ್ ಶಾ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಸಂಜೆ 7.00-7.50 ರವರೆಗೆ ಬಸವೇಶ್ವರ ನಗರ ಪೊಲೀಸ್ ಠಾಣೆಯಿಂದ ನಾಗರಬಾವಿ ವೃತ್ತದವರೆಗೂ ರೋಡ್ ಶೋ ನಡೆಯಲಿದೆ. ಗೋವಿಂದರಾಜನಗರದಲ್ಲಿ ಈ ಬಾರಿ ಹೊಸ ಮುಖಕ್ಕೆ ಅವಕಾಶ ನೀಡಿದ್ದು, ವಿಜಯನಗರ ಕಾಂಗ್ರೆಸ್ ತೆಕ್ಕೆಯಲ್ಲಿದೆ. ಹೀಗಾಗಿ ಇಲ್ಲಿ ಅಮಿತ್ ಶಾ ಮತಬೇಟೆ ಮಹತ್ವ ಪಡೆದುಕೊಂಡಿದೆ. ರಾತ್ರಿ 8.30 ಕ್ಕೆ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೊರಟು ರಾತ್ರಿ 11.10 ಕ್ಕೆ ಅಮಿತ್ ಶಾ ನವದೆಹಲಿ ತಲುಪಲಿದ್ದಾರೆ.

About Author

Leave a Reply

Your email address will not be published. Required fields are marked *

You may have missed