ಸ್ತ್ರಿ ಶಕ್ತಿ ಸಂಘದ ಸಾಲ ಮನ್ನಾ ಮಾಡುವಂತೆ ಸಿಎಂ ನಿವಾಸದೆದುರು ಪ್ರತಿಭಟನೆ

0

ಬೆಂಗಳೂರು: ಸ್ತ್ರಿ ಶಕ್ತಿ ಸಂಘದ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಸಿಎಂ ನಿವಾಸದ ಬಳಿ ಸ್ತ್ರೀ ಶಕ್ತಿ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಚುನಾವಣಾ ಸಮಯದಲ್ಲಿ ಸ್ತ್ರೀ ಶಕ್ತಿ ಸಂಘದ ಸಾಲ ಮನ್ನಾದ ಭರವಸೆ ನೀಡಿದ್ರಿ, ಅದರಂತೆ ಈಗ ಸಾಲ ಮನ್ನಾ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ.

ಸಿಎಂ ಬರುವವರೆಗೂ ನಾವು ಇಲ್ಲಿಂದ ಕದಲೋದಿಲ್ಲ ಎಂದು ಸಿಎಂ‌ ನಿವಾಸ ಕುಮಾರಕೃಪ ರಸ್ತೆಯಲ್ಲೇ ಕುಳಿತುಕೊಂಡಿದ್ದಾರೆ.

ಐದು ಗ್ಯಾರಂಟಿಗಳ ವ್ಯೂಹದಲ್ಲಿ ಸಿಕ್ಕಿ ಹಾಕಿಕೊಂಡಿರುವ ಕಾಂಗ್ರೆಸ್ ಸರ್ಕಾರಕ್ಕೆ ಈಗ ಹೊಸ ಟೆನ್ಶನ್‌ ಒಂದು ಶುರುವಾಗಿಬಿಟ್ಟಿದೆ. ಕಾಂಗ್ರೆಸ್ ನಾಯಕರು ಪ್ರಚಾರದ ವೇಳೆ ಕೊಟ್ಟಿರುವ ಭರವಸೆಯನ್ನು ಗಂಭೀರವಾಗಿ ತೆಗೆದುಕೊಂಡ ಮಹಿಳೆಯರು ಈಗ ಸಹಕಾರ ಸಂಘಗಳಿಂದ ತೆಗೆದುಕೊಂಡ ಸಾಲವನ್ನು ಮನ್ನಾ ಮಾಡುವಂತೆ ಸಿದ್ದರಾಮಯ್ಯ ನಿವಾಸದೆದುರು ಮಹಿಳೆಯರಿಂದ ಆಗ್ರಹ

ಫ್ರೀ ಬಸ್ ಇರುವುದರಿಂದ ಬಸ್ ಹತ್ತಿ ಕೋಲಾರ, ಚಿಕ್ಕಬಳ್ಳಾಪುರ ಭಾಗದಿಂದ‌ ಬಂದ ನೂರಾರು ಮಹಿಳೆಯರು ಸ್ವತಃ ಸಿದ್ದರಾಮಯ್ಯನವರಿಂದ ನಲವತ್ತು ಸಾವಿರ ಮಹಿಳೆಯರ ಮುಂದೆ ಆಡಿದ ಮಾತಿಗೆ ಈಗ ಸಾಲ ಮನ್ನಾ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಮಹಿಳೆಯರಿಗೆ ಮೋಸ ಮಾಡಬೇಡಿ ಎಂದು ಕೂಗುತ್ತಾ ಮನೆ ಮುಂದೆ ಕುಳಿತು ಧರಣಿ ನಡೆಸುತ್ತಿದ್ದಾರೆ.

About Author

Leave a Reply

Your email address will not be published. Required fields are marked *

You may have missed