ಕಾಂಗ್ರೆಸ್ ನಾಯಕರು ಈಶಾನ್ಯವನ್ನು ಎಟಿಎಂ ಆಗಿ ಬಳಸುತ್ತಿದ್ದಾರೆ: ಪ್ರಧಾನಿ ಮೋದಿ

0

ಕೊಹಿಮಾ: ಈಶಾನ್ಯ ರಾಜ್ಯಗಳನ್ನು ಕಾಂಗ್ರೆಸ್ ಪಕ್ಷ ಮತ ಎಟಿಎಂಗಳಾಗಿ ಬಳಕೆ ಮಾಡಿದ್ದು, ಬಿಜೆಪಿ ಈ ರಾಜ್ಯಗಳನ್ನು ಅಷ್ಟಲಕ್ಷ್ಮಿಯಾಗಿ ನೋಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ನಾಗಾಲ್ಯಾಂಡ್ ದಿಮಾಪುರದ ಚುಮುಕೆಡಿಮಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ,

‘ಕಾಂಗ್ರೆಸ್ ಈಶಾನ್ಯವನ್ನು ದೆಹಲಿಯಿಂದ ದೂರದಿಂದಲೇ ನಿಯಂತ್ರಿಸಿದರೆ, ಬಿಜೆಪಿ ಎಂಟು ರಾಜ್ಯಗಳನ್ನು ‘ಅಷ್ಟ ಲಕ್ಷ್ಮಿ’ ಎಂದು ಪರಿಗಣಿಸುತ್ತದೆ ಎಂದು ಅವರು ಹೇಳಿದರು. ಕಾಂಗ್ರೆಸ್ ನಾಯಕರು ಈಶಾನ್ಯವನ್ನು ಎಟಿಎಂ ಆಗಿ ಬಳಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಆರೋಪಿಸಿದರು. ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಹಣವನ್ನು ಕಬಳಿಸಿದ್ದಾರೆ ಎಂದು ಕಿಡಿಕಾರಿದರು.

‘ನಾಗಾಲ್ಯಾಂಡ್‌ನ ಸಾಂಸ್ಕೃತಿಕ ವೈವಿಧ್ಯತೆಯಿಂದ ನಾನು ಯಾವಾಗಲೂ ಪ್ರಭಾವಿತನಾಗಿದ್ದೇನೆ. ನಾಗಾಲ್ಯಾಂಡ್‌ನಲ್ಲಿ ಅಭಿವೃದ್ಧಿಯ ಅಲೆ ಮತ್ತು ವಿಶ್ವಾಸವಿದೆ ಎಂದ ಪ್ರಧಾನಿ ಮೋದಿ ಬಿಜೆಪಿ-ಎನ್‌ಡಿಪಿಪಿ ಸರ್ಕಾರವನ್ನು ಶ್ಲಾಘಿಸಿದರು. ಈಶಾನ್ಯ ರಾಜ್ಯಗಳ ತ್ವರಿತ ಅಭಿವೃದ್ಧಿಗಾಗಿ ನಾವು ಹಗಲಿರುಳು ಶ್ರಮಿಸುತ್ತಿರುವ ಕಾರಣ ಇಂದು ಇಷ್ಟೊಂದು ಬೆಂಬಲವಿದೆ ಎಂದು ಹೇಳಿದರು.

About Author

Leave a Reply

Your email address will not be published. Required fields are marked *

You may have missed