ಕಾಂಗ್ರೆಸ್ ನ ಪಟ್ಟಿ ಬಿಡುಗಡೆ: 6 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್

0

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election 2023) ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್‌, 6 ಮಹಿಳಾ ಅಭ್ಯರ್ಥಿಗಳಿಗೆ (Congress Women Candidates) ಟಿಕೆಟ್‌ ನೀಡಿದೆ.

124 ಅಭ್ಯರ್ಥಿಗಳಲ್ಲಿ ಮಹಿಳೆಯರಿಗೆ ಸಿಕ್ಕಿದ್ದು ಮಾತ್ರ ಕೇವಲ 6 ಸ್ಥಾನ. 6 ಅಭ್ಯರ್ಥಿಗಳ ಪೈಕಿ 5 ಮಹಿಳಾ ಅಭ್ಯರ್ಥಿಗಳು ಹಾಲಿ ಶಾಸಕಿಯರಾಗಿದ್ದಾರೆ. ಉಳಿದ ಒಬ್ಬರು ಅಭ್ಯರ್ಥಿ ಕುಸುಮಾ ರಾಜರಾಜೇಶ್ವರಿನಗರದಲ್ಲಿ ಕಣಕ್ಕಿಳಿಯಲಿದ್ದಾರೆ. 2020ರಲ್ಲಿ ನಡೆದ ಉಪಚುನಾವಣೆಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಬಿಜೆಪಿಯ ಮುನಿರತ್ನ ವಿರುದ್ಧ ಸ್ಪರ್ಧಿಸಿ ಕುಸುಮಾ ಅವರು ಸೋಲನುಭವಿಸಿದ್ದರು. ಈಗ ಮತ್ತೆ ಕುಸುಮಾ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ.

ಯಾವಕ್ಷೇತ್ರದಿಂದಯಾರುಕಣಕ್ಕೆ?
ಲಕ್ಷ್ಮಿ ಹೆಬ್ಬಾಳ್ಕರ್ – ಬೆಳಗಾವಿ ಗ್ರಾಮಿಣ
ಡಾ. ಅಂಜಲಿ ನಿಂಬಾಳ್ಕರ್ – ಖಾನಾಪುರ
ಕನೀಝ್ ಫಾತಿಮ – ಕಲಬುರಗಿ ಉತ್ತರ
ರೂಪಕಲಾ ಶಶಿಧರ್ – ಕೆಜಿಎಫ್
ಸೌಮ್ಯ ರೆಡ್ಡಿ – ಜಯನಗರ
ಕುಸುಮಾ – ರಾಜರಾಜೇಶ್ವರಿನಗರ

About Author

Leave a Reply

Your email address will not be published. Required fields are marked *

You may have missed