ಪ್ರೀತಿಯಿಂದ ಸಾಕಿದ್ದ ಗಿಳಿ ಸಾವು: ಹಿಂದೂ ಸಂಪ್ರದಾಯಗಳ ಪ್ರಕಾರ ಅಂತ್ಯಕ್ರಿಯೆ

0

ಕೋಲ್ಕತ್ತಾ: ಪ್ರೀತಿಯಿಂದ ಸಾಕಿದ್ದ ಗಿಳಿ (Parrot) ಮೃತಪಟ್ಟ ಹಿನ್ನೆಲೆಯಲ್ಲಿ ಕೃತಜ್ಞತೆಯ ಸಂಕೇತವಾಗಿ ವ್ಯಕ್ತಿಯೊಬ್ಬ ಹಿಂದೂ ಧಾರ್ಮಿಕ ವಿಧಿಗಳ ಪ್ರಕಾರ ಅಂತಿಮ ವಿಧಿಗಳನ್ನು ನೆರವೇರಿಸಿದ ಘಟನೆ ಪಶ್ಚಿಮ ಬಂಗಾಳದಲ್ಲಿ (West Bengal) ನಡೆದಿದೆ.

ಪಶ್ಚಿಮ ಬಂಗಾಳದ ಹೆಬ್ರಾದ ಆಯ್ರಾ ಗ್ರಾಮದ ನಿವಾಸಿ ಮಜುಂದಾರ್ ಎಂಬಾತ ಕಳೆದ 25 ವರ್ಷಗಳಿಂದ ಗಿಳಿಯೊಂದನ್ನು ಸಾಕಿದ್ದ. ಅದಕ್ಕೆ ಪ್ರೀತಿಯಿಂದ ಭಕ್ತೋ ಎಂದು ಹೆಸರಿಟ್ಟು, ಅದನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದ. ಆದರೆ ಅದು ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಸಾವನ್ನಪ್ಪಿದೆ.

ಪ್ರೀತಿಯ ಗಿಳಿಯನ್ನು ಮಗುವಿನಂತೆ ನೋಡಿಕೊಂಡಿದ್ದ ಹಿನ್ನೆಲೆಯಲ್ಲಿ ಮಜುಂದಾರ್ ಕುಟುಂಬವು ಹಿಂದೂ ಸಂಪ್ರದಾಯಗಳ ಪ್ರಕಾರ ಅದರ ಅಂತ್ಯಕ್ರಿಯೆಯನ್ನು ನಡೆಸಲು ನಿರ್ಧರಿಸಿತ್ತು. ಅಂತ್ಯಸಂಸ್ಕಾರ ನಡೆಸಲು ಸ್ಥಳೀಯರು ಸಹಾಯ ಮಾಡಿದ್ದರು. ಅದಾದ ಬಳಿಕ ಮಜುಂದಾರ್ ಕುಟುಂಬವು ಅರ್ಚಕರನ್ನು ಕರೆದು ಹಿಂದೂ ಸಂಪ್ರದಾಯದಂತೆ ಮನೆಯಲ್ಲಿ ತಮ್ಮ ಪ್ರೀತಿಯ ಸಾಕು ಗಿಳಿಯ ಅಂತಿಮ ವಿಧಿಗಳನ್ನು ನೆರವೇರಿಸಿದರು. ನಂತರ, ಪಾರ್ಥಿವ ಶರೀರವನ್ನು ನೈಹಟಿಯ ಹೂಗ್ಲಿ ನದಿ ಘಾಟ್‍ಗೆ ಕೊಂಡೊಯ್ಯಲಾಯಿತು. ಅಲ್ಲಿ ಧಾರ್ಮಿಕ ವಿಧಿಗಳನ್ನು ನಡೆಸಲಾಯಿತು. ಈ ವೇಳೆ 25 ಜನರನ್ನು ಕರೆಸಿ ಊಟ ಹಾಕಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed