ಬಿಜೆಪಿ ಸೋಲಿಸಿ ಕನ್ನಡ ಅಸ್ಮಿತೆ ಉಳಿಸಿ: ಕಮಲ ಪಕ್ಷದ ವಿರುದ್ಧ `ನಂದಿನಿ’ ಅಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ

0

ಕೋಲಾರಕೆಎಂಎಫ್ ಮತ್ತು ಅಮುಲ್ ವಿವಾದದ ವಿರುದ್ಧ ಕಿಡಿಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸರಕಾರವನ್ನು ಕೆಳಗಿಳಿಸಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೇರಿಸುವ ಮೂಲಕ ಕನ್ನಡ, ಕರ್ನಾಟಕದ ಅಸ್ಮಿತೆಯನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ.

 

ಕೋಲಾರ ನಗರದಲ್ಲಿ ಭಾನುವಾರ ನಡೆದ ಜೈ ಭಾರತ್ ರ‍್ಯಾಲಿಯಲ್ಲಿ ಮಾತನಾಡಿ., ಬ್ಯಾಂಕ್ ಗಳನ್ನು ನುಂಗಿ ನೀರು ಕುಡಿದಾಯಿತು. ಈಗ ಕೆಎಂಎಫ್ ಅನ್ನು ನುಂಗಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಇಂದು ಒಂದು ದಿನಕ್ಕೆ 99 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿ ಬೆಂಗಳೂರು ಮತ್ತು ಬೇರೆ ಬೇರೆ ಪಟ್ಟಣಗಳಲ್ಲಿ ಮಾರಾಟ ಮಾಡುವ ವ್ಯವಸ್ಥೆಯಿದೆ. ಲಕ್ಷಾಂತರ ರೈತರು ಹಾಲು ಮಾರಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ ಎಂದರು.

ಆದರೆ ಅಮಿತ್ ಶಾ ಅವರು ಸಹಕಾರಿ ಮಂತ್ರಿಯಾದ ಮೇಲೆ ಕೆಎಂಎಫ್ ಅನ್ನು ಅಮುಲ್ ಜೊತೆ ವಿಲೀನ ಮಾಡಲು ಪ್ರಯತ್ನ ಮಾಡಿದರು. ಈಗ ಅಮುಲ್ ಅನ್ನು ಕರ್ನಾಟಕದ ಮಾರುಕಟ್ಟೆಗೆ ತೆಗೆದುಕೊಂಡು ಬಂದು ಮಾರಲು ಪ್ರಯತ್ನಿಸುತ್ತಿದ್ದಾರೆ. ಕರ್ನಾಟಕದಲ್ಲಿ ನಂದಿನಿ ಹಾಲಿನ ಕೃತಕ ಅಭಾವ ಸೃಷ್ಟಿಸಿ ಅಮುಲ್ ಉತ್ಪನ್ನಗಳನ್ನು ರಾಜ್ಯಕ್ಕೆ ತರಲು ಪ್ರಯತ್ನಿಸಿದ್ದಾರೆ. ಹೀಗಾಗಿ ಹಾಲಿನ ಉತ್ಪಾದನೆ 91 ಲಕ್ಷ ಲೀಟರ್ ನಿಂದ 81 ಲಕ್ಷ ಲೀಟರ್ ಗೆ ಇಳಿಯುವ ಹಾಗೆ ಮಾಡಿದ್ದಾರೆ.

ನಾವೆಲ್ಲರೂ ಕನ್ನಡಿಗರು. ಅಮುಲ್ ಅನ್ನು ಕೊಳ್ಳದೆಯೇ ನಂದಿನಿಯನ್ನು ಮಾತ್ರ ಕೊಂಡುಕೊಳ್ಳೋಣ. ಕರ್ನಾಟಕದ ಜನ ಈ ಬಗ್ಗೆ ಒಂದು ತೀರ್ಮಾನ ಮಾಡಲೇಬೇಕು. ಶಪಥ ಮಾಡಬೇಕು. ಹೀಗೆ ಮಾಡಿದರೆ ಕೆಎಂಎಫ್ ಉಳಿಯುತ್ತದೆ. ಅದೇ ರೀತಿ ಕನ್ನಡಗಿರ, ನಮ್ಮ ರೈತರ ಅಸ್ಮಿತೆಯೂ ಉಳಿಯುತ್ತದೆ. ಈ ಮೂಲಕ ಕೇಂದ್ರ ಸರಕಾರ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಹುನ್ನಾರವನ್ನು ತಡೆಗಟ್ಟಲು ಸಾಧ್ಯ ಎಂದು ಸಲಹೆ ನೀಡಿದರು. ಎಂದರು.

About Author

Leave a Reply

Your email address will not be published. Required fields are marked *

You may have missed