ಶಾಲಾ ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಶಿಕ್ಷಣ ಇಲಾಖೆ

0

ಬೆಂಗಳೂರು: ಶಾಲಾ ಮಕ್ಕಳ ಬ್ಯಾಗ್ ಹೊರೆ  ಇಳಿಸುವ ಬಗ್ಗೆ ಶಿಕ್ಷಣ ಇಲಾಖೆ  ಮಹತ್ವದ ಆದೇಶ ಹೊರಡಿಸಿದೆ. 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ಬ್ಯಾಗ್ ತೂಕವನ್ನು ಶಿಕ್ಷಣ ಇಲಾಖೆ ನಿಗದಿ ಮಾಡಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಈ ಮಹತ್ವದ ಆದೇಶವನ್ನು ಹೊರಡಿಸಿದ್ದು, ಈ ನಿಯಮ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಿಗೂ ಅನ್ವಯಿಸುತ್ತದೆ. ಕಡ್ಡಾಯವಾಗಿ ಎಲ್ಲಾ ಶಾಲೆಗಳು ಈ ನಿಯಮವನ್ನು ಪಾಲನೆ ಮಾಡಬೇಕೆಂದು ಶಿಕ್ಷಣ ಇಲಾಖೆ ಆದೇಶಿಸಿದೆ.

ತರಗತಿಮತ್ತುತೂಕದವಿವರ:
1-2ನೇ ತರಗತಿ – 1.5 ರಿಂದ 2 ಕೆಜಿ
3-5ನೇ ತರಗತಿ – 2-3 ಕೆಜಿ
6-8ನೇ ತರಗತಿ – 3-4 ಕೆಜಿ
9-10ನೇ ತರಗತಿ – 4-5 ಕೆಜಿ

ಹೊರೆಇಳಿಸಲುಅಧ್ಯಯನನಡೆಸಿದಡಿಎಸ್ಇಆರ್ಟಿ:
ಎನ್‌ಎಲ್‌ಎಸ್‌ಯುಐ, ಸೆಂಟರ್ ಫಾರ್ ಚೈಲ್ಡ್ ಲಾ ಇವರ ಸಹಯೋಗದೊಂದಿಗೆ ಅಧ್ಯಯನ ಮಾಡಿದ ಡಿಎಸ್‌ಇಆರ್‌ಟಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ವರದಿಯಲ್ಲಿ ವಿದ್ಯಾರ್ಥಿಗಳ ದೇಹದ ತೂಕದ 10-15% ರಷ್ಟು ತೂಕದ ಶಾಲಾ ಬ್ಯಾಗ್ ತೆಗೆದುಕೊಂಡು ಹೋಗಲು ಶಿಫಾರಸ್ಸು ಮಾಡಿದೆ. ಮೂಳೆ ತಜ್ಞರ ಶಿಫಾರಸ್ಸಿನ ಮೇರೆಗೆ ಡಿಎಸ್‌ಇಆರ್‌ಟಿ ಬ್ಯಾಗ್ ತೂಕದ ವರದಿ ನೀಡಿದ್ದು, ಇದನ್ನು ಅನ್ವಯಿಸಿ ಶಿಕ್ಷಣ ಇಲಾಖೆ ಶಾಲಾ ಬ್ಯಾಗ್‌ನ ತೂಕವನ್ನು ಕಡಿಮೆ ಮಾಡಿದೆ.

ಕಡಿಮೆತೂಕದಬ್ಯಾಗ್ನಿಯಮಜಾರಿಹೇಗೆ?
* ಶಾಲಾ ಎಸ್‌ಎಂಸಿ, ಎಸ್‌ಡಿಎಂಸಿ ಹಾಗೂ ಶಾಲ ಮುಖ್ಯಸ್ಥರು ಇಲಾಖೆ ಆದೇಶ ಪಾಲನೆಗೆ ಕ್ರಮವಹಿಸಬೇಕು.
* 1ರಿಂದ 5ನೇ ತರಗತಿಯವರೆಗೆ ಎನ್‌ಸಿಇಆರ್‌ಟಿ ನಿಗದಿಪಡಿಸಿರೋ ಪಠ್ಯಕ್ರಮವನ್ನು ಮಾತ್ರ ಶಾಲೆಗಳು ಬೋಧನೆ ಮಾಡಬೇಕು.
* ಬೇರೆ ಯಾವುದೇ ಪಠ್ಯ ಕ್ರಮ ಬೋಧನೆ ಮಾಡುವಂತೆ ಇಲ್ಲ.
* ಒಂದು ವೇಳೆ ನಿಯಮ ಮೀರಿ ಬೇರೆ ಪಠ್ಯ ಕ್ರಮ ಬೋಧನೆ ಮಾಡಿದರೆ ಶಾಲೆ ಮಾನ್ಯತೆ ರದ್ದು ಮಾಡಲಾಗುತ್ತದೆ.
* ಶಿಕ್ಷಣ ಇಲಾಖೆ ನಿಯಮ ಪಾಲನೆ ಮಾನಿಟರ್ ಮಾಡಲು ವಿಶೇಷ ತಂಡ ರಚನೆ ಮಾಡಿ ತಪಾಸಣೆ ಮಾಡಿಸುವುದು.
* ಕ್ಲಸ್ಟರ್ ಹಂತದಲ್ಲಿ ಸಿಆರ್‌ಪಿ ಮತ್ತು ಇಸಿಒಗಳು, ಬ್ಲಾಕ್ ಹಂತದಲ್ಲಿ ಬಿಆರ್‌ಸಿ ಮತ್ತು ಬಿಇಒಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು.
* ಜಿಲ್ಲಾ ಹಂತದಲ್ಲಿ ಡಿಡಿಪಿಐಗಳು, ಡಯಟ್ ಪ್ರಾಂಶುಪಾಲರು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು.

About Author

Leave a Reply

Your email address will not be published. Required fields are marked *

You may have missed