ರಾಜ್ಯದಲ್ಲಿ 1,316 ಅನಧಿಕೃತ ಶಾಲೆಗಳ ಪತ್ತೆ ಹಚ್ಚಿದ ಶಿಕ್ಷಣ ಇಲಾಖೆ..!

0

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿನ ಅನಧಿಕೃತ ಶಾಲೆಗಳ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಮಹತ್ವದ ಮಾಹಿತಿ ಬಹಿರಂಗವಾಗಿದೆ. 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಒಟ್ಟು 1,316 ಅನಧಿಕೃತ ಶಾಲೆಗಳಿವೆ ಎಂದು ತಿಳಿಸಲಾಗಿದೆ.ಈ ಶಾಲೆಗಳ ಪೈಕಿ ಬಹುಪಾಲು ಬೆಂಗಳೂರಿನಲ್ಲಿದ್ದು, ಬೆಂಗಳೂರು ಉತ್ತರದಲ್ಲಿ 485, ಬೆಂಗಳೂರು ದಕ್ಷಿಣದಲ್ಲಿ 386 ಹಾಗೂ ತುಮಕೂರಿನಲ್ಲಿ 109 ಶಾಲೆಗಳಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಶಿವಮೊಗ್ಗ, ದಾವಣಗೆರೆ, ರಾಮನಗರ ಸೇರಿದಂತೆ 15 ಜಿಲ್ಲೆಗಳಲ್ಲಿ ಅನಧಿಕೃತ ಶಾಲೆಗಳ ಸಂಖ್ಯೆ ಶೂನ್ಯವಾಗಿದೆ.ಅನಧಿಕೃತ ಶಾಲೆಗಳ ಪೈಕಿ 63 ಶಾಲೆಗಳು ನೋಂದಣಿ ಹಾಗೂ ಅನುಮತಿ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದು,

74 ಶಾಲೆಗಳು ನೋಂದಣಿ ಇಲ್ಲದೆ ಅನಧಿಕೃತವಾಗಿ ಉನ್ನತಿಕರಣ ಶಿಕ್ಷಣವನ್ನು ಬೋಧಿಸುತ್ತಿವೆ. ಇನ್ನು 95 ಶಾಲೆಗಳು ರಾಜ್ಯ ಪಠ್ಯಕ್ರಮದ ಅನುಮತಿ ಪಡೆದು ಬೇರೆ ಪಠ್ಯಕ್ರಮವನ್ನು ಬೋಧನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.294 ಶಾಲೆಗಳು ಅನಧಿಕೃತ ಮಾಧ್ಯಮಗಳಲ್ಲಿ ಕಲಿಕೆ ನೀಡುತ್ತಿದ್ದು, 620 ಶಾಲೆಗಳು ಅನಧಿಕೃತ ವಿಭಾಗಗಳನ್ನು ಹೊಂದಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹಾಗೆ 141 ಶಾಲೆಗಳು ಅನುಮತಿ ಇಲ್ಲದೆಯೇ ಸ್ಥಳಾಂತರಗೊಂಡಿದ್ದು, 8 ಶಾಲೆಗಳು ಅನುಮತಿ ಇಲ್ಲದೆ ಹಸ್ತಾಂತರ ಮಾಡಲಾಗಿದೆ. 21 ಶಾಲೆಗಳು ಕೇಂದ್ರ ಪಠ್ಯಕ್ರಮಕ್ಕೆ ಸಂಯೋಜನೆ ಪಡೆದ ನಂತರ ಅನಧಿಕೃತವಾಗಿ ರಾಜ್ಯ ಪಠ್ಯಕ್ರಮವನ್ನು ಕಲಿಕೆ ಮಾಡಲಾಗುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

About Author

Leave a Reply

Your email address will not be published. Required fields are marked *

You may have missed