ಯಡಿಯೂರಪ್ಪರನ್ನ ಯಾಕೆ ಎರಡು ವರ್ಷ ಇಳಿಸಿದ್ರು ಹೈಕಮಾಂಡ್ ಹೇಳಲಿ: ಜಗದೀಶ್ ಶೆಟ್ಟರ್

0

ಬೆಂಗಳೂರು: ಬಿ.ಎಸ್ ಯಡಿಯೂರಪ್ಪ (BS Yediyurappa) ರನ್ನು ಸೈಡ್ ಲೈನ್ ಮಾಡಿದ್ರು. ಕಣ್ಣೀರು ಹಾಕಿ ರಾಜೀನಾಮೆ ಕೊಟ್ಟು ಬಂದಾಗಿನಿಂದ ಈ ಇಂಪ್ಯಾಕ್ಟ್ ಆಯ್ತು. ಪಾರ್ಟಿ ಸೂಚನೆ ಮೇರೆಗೆ ಯಡಿಯೂರಪ್ಪ ನನ್ನ ವಿರುದ್ಧ ಮಾತಾಡಿದ್ದಾರೆ.

ಯಾರಿಗೆ ಲೀಡರ್ ಶಿಪ್ ಕೊಟ್ಟಿದ್ದೇವೆ ಅನ್ನೋದು ಮುಖ್ಯ. ಯಡಿಯೂರಪ್ಪರನ್ನ ಎರಡು ವರ್ಷ ಇಳಿಸಬಾರದಿತ್ತು. ಯಾಕೆ ಯಡಿಯೂರಪ್ಪ ಅವರನ್ನು ಇಳಿಸಿದ್ರು ಹೈಕಮಾಂಡ್ ಹೇಳಲಿ. ಇದನ್ನ ನಾನು ಕೇಂದ್ರ ನಾಯಕರಿಗೂ ಹೇಳಿದ್ದೆ ಎಂದು ಜಗದೀಶ್ ಶೆಟ್ಟರ್ (Jagadeesh Shettar) ಹೇಳಿದ್ರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ಕಾಂಗ್ರೆಸ್ (Congress) ಗೆ ಬಂದ ಮೇಲೆ ದೊಡ್ಡ ಇಂಪ್ಯಾಕ್ಟ್ ಆಗಿದೆ. ಉತ್ತರ ಕರ್ನಾಟಕ ಭಾಗದ ಲಿಂಗಾಯತ ಬ್ಯಾಂಕ್ ಕಾಂಗ್ರೆಸ್ ಗೆ ಬೆಂಬಲ ಕೊಟ್ಟಿದೆ. ರಿಸಲ್ಟ್ ನೋಡಿದ್ರೆ ನಿಮಗೆ ಅದು ಗೊತ್ತಾಗುತ್ತೆ. ಬಿಜೆಪಿಯಲ್ಲಿನ ಬೆಳವಣಿಗೆಗೆ ಬಿಜೆಪಿಗೆ ಹೀಗೆ ಆಗಿದೆ. ಒಂದು ಶಾಸಕ ಸ್ಥಾನಕ್ಕೆ ನನಗೆ ಮಾಡಿದ್ದು ಸರಿಯಲ್ಲ. ಒಬ್ಬರ ಮಾತು ಕೇಳಿ ಲಿಂಗಾಯತರಿಗೆ ಕಿರಿಕಿರಿ ಕೊಟ್ಟರು. ಇದನ್ನ ಲಿಂಗಾಯತರು ಸಹಿಸಲಿಲ್ಲ ಎಂದು ಎಚ್ಚರಿಕೆ ನೀಡಿದರು.

ಬಣಕಾರ್, ತಮ್ಮಯ್ಯ, ಸವದಿ, ಓಖ ಸಂತೋಷ್ ಹೀಗೆ ಅನೇಕ ಲಿಂಗಾಯತರು ಬಿಟ್ಟರು. ಯಾರು ಸಮಾಧಾನ ಮಾಡುವ ಕೆಲಸ ಯಾರಿಗೂ ಮಾಡಿಲ್ಲ. ಹೀಗಾಗಿ ಲಿಂಗಾಯತ ನಾಯಕರು ಕಾಂಗ್ರೆಸ್ ಗೆ ಸೆರಿದ್ರು. ನಾನು ಮಾಜಿ ಸಿಎಂ ನನಗೂ ಅಪಮಾನ ಮಾಡಿದ್ರು. ನನ್ನ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿತ್ತು. ಬಿಜೆಪಿ (BJP) ಮೇಲೆ ಲಿಂಗಾಯತರಿಗೆ ಇದ್ದ ನಂಬಿಕೆ ಹೋಗಿದೆ ಎಂದು ವಾಗ್ದಾಳಿ ನಡೆಸಿದರು.

ಯಡಿಯೂರಪ್ಪರನ್ನ ಯಾಕೆ ಎರಡು ವರ್ಷ ಇಳಿಸಿದ್ರು ಹೈಕಮಾಂಡ್ ಹೇಳಲಿ. ಅಲ್ಲಿಂದ ಪ್ರಾರಂಭ ಆಗಿ ಈ ರಿಸಲ್ಟ್ ಬಂದಿದೆ. ಯಡಿಯೂರಪ್ಪ ಕಣ್ಣೀರು ಹಾಕಿದ್ರು. ನನಗೆ ಹೀಗೆ ಮಾಡಿದ್ರು. ಇದೆಲ್ಲ ಒಂದೊಂದು ಸೇರಿ ಹೀಗೆ ಆಯ್ತು. ಸಂತೋಷ್ ಅಂತಹವರು ಪಕ್ಷವನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳಲು ನೋಡಿದರು. ನನ್ನನ್ನ ಟಾರ್ಗೆಟ್ ಮಾಡಿದ್ರು. ಯಾಕೆ ನನ್ನ ಒಬ್ಬರನ್ನ ಟಾರ್ಗೆಟ್ ಮಾಡಿದ್ರು. ನಮ್ಮ ಕಡೆ ಬಂದವರು ಜಗದೀಶ್ ಶೆಟ್ಟರ್ ಸೋಲಿಸಿ ಅಂತ ಬಿಜೆಪಿ ಅವರು ಪ್ರಚಾರ ಮಾಡಿದ್ರು. ನನ್ನನ್ನ ಟಾರ್ಗೆಟ್ ಮಾಡಿ ಬಿಜೆಪಿಯನ್ನ ಸೋಲಿಸಿದ್ರು. ಸಂತೋಷ ವಿರುದ್ದ ಮತ್ತೆ ಆಕ್ರೋಶ ಹೊರಹಾಕಿದರು.

About Author

Leave a Reply

Your email address will not be published. Required fields are marked *

You may have missed