ಹಿಂಡೆನ್‌ಬರ್ಗ್ ರಿಪೋರ್ಟ್ – ಅದಾನಿ ಕಂಪನಿಗಳ ತನಿಖೆಗೆ ಸಮಿತಿ ರಚಿಸಿದ ಸುಪ್ರೀಂ

0

ವದೆಹಲಿ: ಅದಾನಿ ಗ್ರೂಪ್ ಆಫ್ ಕಂಪನಿಗಳ ವಿರುದ್ಧ ಹಿಂಡೆನ್‌ಬರ್ಗ್ (Hindenburg) ಸಂಶೋಧನಾ ವರದಿ ಮಾಡಿರುವ ಆರೋಪಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ (Supreme Court), ನಿವೃತ್ತ ನ್ಯಾಯಾಧೀಶ ಎ.ಎಂ ಸಪ್ರೆ ನೇತೃತ್ವದಲ್ಲಿ ಆರು ಮಂದಿಯ ಸಮಿತಿಯನ್ನು ರಚಿಸಿದೆ.

 

ಸಮಿತಿಯೂ ಒ.ಪಿ. ಭಟ್, ನ್ಯಾಯಮೂರ್ತಿ ಜೆ.ಪಿ. ದೇವಧರ್, ಕೆ.ವಿ. ಕಾಮತ್, ನಂದನ್ ನಿಲೇಕಣಿ ಮತ್ತು ಸೋಮಶೇಖರ್ ಸುಂದರೇಶನ್ ಅವರನ್ನು ಒಳಗೊಂಡಿರಲಿದೆ ಎಂದು ಸಿಜೆಐ ಡಿ.ವೈ. ಚಂದ್ರಚೂಡ್ (DY Chandrachud) ನೇತೃತ್ವದ ತ್ರಿ ಸದಸ್ಯ ಪೀಠ ತಿಳಿಸಿದೆ.

ಸಮಿತಿಯೂ ಅದಾನಿ ಕಂಪನಿಗಳಲ್ಲಿ ಅಕ್ರಮ ನಡೆದಿದೆಯೇ? ಷೇರುಗಳ ಮೌಲ್ಯ ಹೆಚ್ಚಿಸಲು ಕೃತಕ ಪ್ರಯತ್ನಗಳು ನಡೆದಿವೆಯೇ? ಸೆಬಿ ನಿಯಮಗಳ ಸೆಕ್ಷನ್ 19 ರ ಉಲ್ಲಂಘನೆಯಾಗಿದೆಯೇ? ಹೂಡಿಕೆದಾರರ ರಕ್ಷಣೆಗೆ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಕೋರ್ಟ್ ಸೂಚಿಸಿದೆ.

ತನಿಖೆಯನ್ನು ನಡೆಸಿ ಎರಡು ತಿಂಗಳೊಳಗೆ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ವರದಿ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ. ಸಮಿತಿಯನ್ನು ರಚಿಸುವುದರಿಂದ ಸೆಬಿಯ ಸ್ವಾತಂತ್ರ್ಯ ಮತ್ತು ಅದರ ತನಿಖಾ ಪ್ರಕ್ರಿಯೆಗಳಿಗೆ ಅಡ್ಡಿಯಾಗುವುದಿಲ್ಲ ಎಂದೂ ಕೋರ್ಟ್ ಸ್ಪಷ್ಟಪಡಿಸಿದೆ.

SEBI ಅಧ್ಯಕ್ಷರು ಎಲ್ಲಾ ಅಗತ್ಯ ಮಾಹಿತಿಯನ್ನು ತಜ್ಞರ ಸಮಿತಿಗೆ ಒದಗಿಸಬೇಕು. ಸಂಬಂಧಪಟ್ಟ ಕೇಂದ್ರ ಸರ್ಕಾರದ ಏಜೆನ್ಸಿಗಳು ಸಮಿತಿಯೊಂದಿಗೆ ಸಹಕರಿಸಬೇಕು. ಸಮಿತಿಯು ತನ್ನ ಕೆಲಸಕ್ಕಾಗಿ ಬಾಹ್ಯ ತಜ್ಞರೊಂದಿಗೆ ಸಮಾಲೋಚನೆಯನ್ನು ಪಡೆಯಬಹುದು. ಸಮಿತಿಯ ಸದಸ್ಯರಿಗೆ ಪಾವತಿಸಬೇಕಾದ ಸಂಭಾವನೆಯನ್ನು ಅಧ್ಯಕ್ಷರು ನಿಗದಿಪಡಿಸುತ್ತಾರೆ. ಕೇಂದ್ರ ಸರ್ಕಾರವು ಭರಿಸಬೇಕು. ಇದಕ್ಕಾಗಿ ಕೇಂದ್ರ ಹಣಕಾಸು ಸಚಿವರು ಹಿರಿಯ ಅಧಿಕಾರಿಯನ್ನು ನಾಮನಿರ್ದೇಶನ ಮಾಡಬೇಕು ಎಂದು ಸುಪ್ರೀಂ ಆದೇಶಿಸಿದೆ.

ಅದಾನಿ ಕಂಪನಿಗಳ ತನಿಖೆಗೆ ಸುಪ್ರೀಂ ಕೋರ್ಟ್ ಸಮಿತಿ ರಚಿಸುವುದನ್ನು ಗೌತಮ್ ಅದಾನಿ (Gautam Adani) ಸ್ವಾಗತಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಮಯ ಕಳೆದಂತೆ ಪ್ರಕರಣ ತಾರ್ಕಿಕ ಅಂತ್ಯ ಕಾಣಲಿದೆ. ಸತ್ಯ ಮೇಲುಗೈ ಸಾಧಿಸಲಿದೆ ಎಂದು ಹೇಳಿದ್ದಾರೆ.

About Author

Leave a Reply

Your email address will not be published. Required fields are marked *

You may have missed