ಮತ್ತೆ ಸದ್ದು ಮಾಡ್ತಿದೆ ಜೆಸಿಬಿ ಘರ್ಜನೆ: ಗಡವು ಮೀರಿದರೂ ತೆರವಾಗದ ರಾಜಕಾಲುವೆ ಒತ್ತುವರಿ ತೆರವು

0

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ರಾಜಕಾಲುವೆ ಒತ್ತುವರಿ ಮಾಡಲು ಜೆಸಿಬಿ ಮತ್ತೆ ಘರ್ಜಿಸಲಿದೆ. ಒತ್ತುವರಿ ತೆರವು ರಿಪೋರ್ಟ್ ನೀಡಲು ತಹಶಿಲ್ದಾರಗಳು ನಕಾರ ಮಾಡಿದ್ದು, ತಹಶಿಲ್ದಾರ್ ನಡೆ ಬಗ್ಗೆ ಬಿಬಿಎಂಪಿ SWD ವಿಭಾಗದ ಅಧಿಕಾರಿಗಳು ಗರಂ ಆಗಿದ್ದಾರೆ.

ಈ ಹಿನ್ನೆಲೆ ಮಾರ್ಚ್ 10 ರಿಂದ ಒತ್ತುವರಿ ತೆರವಿಗೆ ಬಿಬಿಎಂಪಿ ಸಜ್ಜಾಗಿದೆ. ಮಹದೇವಪುರ ವಲಯದಲ್ಲಿ 146 ಕಡೆ ಒತ್ತುವರಿ ಮಾರ್ಕಿಂಗ್ ಆಗಿದ್ದರೂ, ಇನ್ನೂ ತೆರವಾಗಿಲ್ಲ.

ದಾಸರಹಳ್ಳಿ 124, ಪೂರ್ವ ವಲಯದಲ್ಲಿ 88, ಯಲಹಂಕದಲ್ಲಿ 79, RR ನಗರದಲ್ಲಿ 33, ಬೊಮ್ಮನಹಳ್ಳಿ ವಲಯದಲ್ಲಿ 8, ಪಶ್ಚಿಮ ವಲಯದಲ್ಲಿ 4, ದಕ್ಷಿಣ ವಲಯದಲ್ಲಿ 3 ಕಡೆ ಒತ್ತುವರಿ ಕಾರ್ಯಾಚರಣೆ ಬಾಕಿ ಇದ್ದು, ಇದೀಗ ಒಟ್ಟು 485 ಕಡೆ ಒತ್ತುವರಿ ತೆರವಿಗೆ ಪಾಲಿಕೆ ಸಜ್ಜಾಗಿದೆ. ಆದರೆ ಒತ್ತುವರಿ ತೆರವಿಗೆ ಕಂದಾಯ ಅಧಿಕಾರಿಗಳು, ಸಹಕಾರ ನೀಡದ ಕಾರಣ ಬಿಬಿಎಂಪಿ ಬೇಸರ ಹೊರ ಹಾಕಿದೆ. ಹೀಗಾಗಿ ಕಂದಾಯ ಇಲಾಖೆ ಅಧಿಕಾರಿಗಳು ಸಾತ್ ಕೊಡ್ತಿದ್ದಂಗೆ ಕಾರ್ಯಾಚರಣೆ ಆರಂಭವಾಗಲಿದೆ.

About Author

Leave a Reply

Your email address will not be published. Required fields are marked *

You may have missed