ಕರ್ನಾಟಕವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಿದೆ: ಆರ್.ಅಶೋಕ್ ಕಿಡಿ

0

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ಸಿಗರು ಮತಾಂತರದ ರಾಯಭಾರಿಯಾಗಲು ಹೊರಟಿದ್ದಾರೆ ಎಂದು ಕಾಂಗ್ರೆಸ್​ ಸರ್ಕಾರದ ಮತಾಂತರ ನಿಷೇಧ ತಿದ್ದುಪಡಿ ಕಾಯ್ದೆ ರದ್ದು ನಿರ್ಧಾರದ ವಿರುದ್ಧ ಬೆಂಗಳೂರಿನಲ್ಲಿ ಮಾಜಿ ಸಚಿವ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಆರ್ಚ್ ಬಿಷಪ್ ಮಾತ್ರ ಸ್ವಾಗತ ಮಾಡಿದ್ದಾರೆ. ಆದರೆ ಯಾವುದೇ ಸ್ವಾಮೀಜಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರಾ? ರಾಜ್ಯದಲ್ಲಿ ಈವರೆಗೆ 30-40 ಹಿಂದೂಗಳು ಮತಾಂತರ ಆಗಿದ್ದಾರೆ. ಆಸ್ಪತ್ರೆ, ಶಿಕ್ಷಣ, ಲವ್ ಜಿಹಾದ್ ಇವುಗಳಿಗಾಗಿ ಹಿಂದುಗಳು ಮತಾಂತರ ಆಗಿದ್ದಾರೆ. ಕಾಂಗ್ರೆಸ್ ನಿರ್ಧಾರ ಟಿಪ್ಪು ಸಿದ್ಧಾಂತಗಳಿಗೆ ಪೂರಕವಾಗಿದೆ ಎಂದು ಕಿಡಿಕಾರಿದ್ದಾರೆ. ತಮಗೆ ಮತ ಹಾಕಿದ ಒಂದು ವರ್ಗ ಸಂತೃಪ್ತಿಗೊಳಿಸಲು ಈ ನಿರ್ಧಾರ ಕೈಗೊಂಡಿದೆ. ಕಾಂಗ್ರೆಸ್ ವೋಟ್ ಗಾಗಿ ಯಾವ ಮಟ್ಟಕ್ಕಾದರೂ ಹೋಗಬಹುದು ಎಂಬ ಭಾವನೆ ಮೂಡಿದೆ. ಕರ್ನಾಟಕವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ದಾರೆ ಅನ್ನಿಸ್ತಿದೆ. ಅದೇ ನಾವು ಅಧಿಕಾರದಲ್ಲಿದ್ದಾಗ ಈ ಕಾಯ್ದೆ ತಂದಿದ್ದೆವು. ಆಗ ಪಿಎಫ್ ಐ ಅಂತಹವರು ಬಿಟ್ಟು ಬೇರೆ ಯಾರೂ ವಿರೋಧ ಮಾಡಿಲ್ಲ. ಕಾಯ್ದೆ ವಾಪಸ್ ಪಡೆಯದಂತೆ ಬಿಜೆಪಿ ಆಗ್ರಹಿಸುತ್ತದೆ ಎಂದು ಅಶೋಕ್ ಹೇಳಿದರು.

ನಾವು ಎಪಿಎಂಸಿ ಕಾಯ್ದೆ ಜಾರಿ ಮಾಡಿರುವುದರಲ್ಲಿ ಏನು ತಪ್ಪಿದೆ. ನಿಮಗೆ ಎಪಿಎಂಸಿಗೆ ಆದಾಯ ಬರೋದು ಮುಖ್ಯವೋ ರೈತರ ಜೇಬಿಗೆ ಹಣ ಬರೋದು ಮುಖ್ಯವೋ? ಎಪಿಎಂಸಿ ಕಾಯ್ದೆ ವಾಪಸ್ ಪಡೆಯುವ ಹಿಂದೆ ಹುನ್ನಾರ ಇದೆಯಷ್ಟೆ. ನಾವು ತಕ್ಕಡಿಯನ್ನು ರೈತರ ಕೈಗೆ ಕೊಟ್ಟಿದ್ದೆವು. ಕಾಂಗ್ರೆಸ್ ಈಗ ದಳ್ಳಾಳಿಗಳ ರಾಜ್ಯ ಮಾಡಲು ಹೊರಟಿದೆ ಎಂದು ಅಶೋಕ್ ವಿಷಾದಿಸಿದರು.

ಏಕಾಏಕಿ ಶಾಲಾ ಪಠ್ಯ ಪರಿಷ್ಕರಣೆ ಒಳ್ಳೆಯದಲ್ಲ. ಪಠ್ಯ ಪರಿಷ್ಕರಣೆ ಮೂಲಕ ಮಕ್ಕಳಿಗೆ ಕೆಟ್ಟ ಸಂದೇಶ ಕೊಡುತ್ತಿದ್ದಾರೆ. ಏಕಾಏಕಿ ಪಠ್ಯಪುಸ್ತಕ ಪರಿಷ್ಕರಣೆ ಒಳ್ಳೆಯದಲ್ಲ. ಸಮಯ ಇದೆ, ನಿಧಾನವಾಗಿ ಪರಿಷ್ಕರಣೆ ಮಾಡಿ ಎಂದು ಅಶೋಕ್ ಸಲಹೆ ಕೊಟ್ಟರು.

About Author

Leave a Reply

Your email address will not be published. Required fields are marked *

You may have missed