ನಕಲಿ ಕೀ ಬಳಸಿ ಬಸ್ ಸ್ಟ್ಯಾಂಡ್ ನಲ್ಲಿದ್ದ ಬಸ್ಸನೇ ಕದ್ದ ಖದೀಮರು!

0

ಲಬುರಗಿ: ಚಾಲಾಕಿ ಕಳ್ಳರು ಬಸ್ ನಿಲ್ದಾಣದಲ್ಲಿ (Bus Stand) ನಿಲ್ಲಿಸಿದ್ದ ಬಸ್ (Bus) ಅನ್ನೇ ರಾತ್ರೋರಾತ್ರಿ ಎಗರಿಸಿರುವ (Theft) ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ.

ಸೋಮವಾರ ತಡರಾತ್ರಿ ಕಲಬುರಗಿ ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ (KSRTC Bus) ಅನ್ನು ನಿಲ್ಲಿಸಲಾಗಿತ್ತು.

ಖದೀಮರು ಬಸ್ ಅನ್ನು ನಸುಕಿನ ಜಾವ 3:30ರ ವೇಳೆಗೆ ಕಳ್ಳತನ ಮಾಡಿದ್ದಾರೆ. ಬಳಿಕ ಮಿರಿಯಾಣ ಮಾರ್ಗವಾಗಿ ತಾಂಡುರ ಮೂಲಕ ತೆಲಂಗಾಣದ ಕಡೆ ತೆಗೆದುಕೊಂಡು ಹೋಗಿದ್ದಾರೆ.

ಕಳ್ಳತನವಾಗಿರುವ ಕೆಸ್‌ಆರ್‌ಟಿಸಿ ಬಸ್ ನಂಬರ್ ಕೆಎ 38 ಎಫ್ 971 ಹೊಂದಿದ್ದು, ಇದು ಬೀದರ್ ಬಸ್ ಡಿಪೋ ನಂಬರ್ 2ಕ್ಕೆ ಸೇರಿದ್ದಾಗಿದೆ. ಕಳ್ಳತನವಾದ ಸ್ಥಳಕ್ಕೆ ಚಿಂಚೋಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೀಗ 2 ಪೊಲೀಸರ ತಂಡ ಬಸ್ ಹುಡುಕಾಟಕ್ಕಾಗಿ ತೆಲಂಗಾಣಕ್ಕೆ ತೆರಳಿದೆ.

About Author

Leave a Reply

Your email address will not be published. Required fields are marked *

You may have missed