ಮಂಡ್ಯ ಜಿಲ್ಲೆಯಲ್ಲಿ ಮುಂದುವರಿದ ಚಿರತೆಗಳ ಹಾವಳಿ

0

ಮಂಡ್ಯ: ಮಂಡ್ಯದಲ್ಲಿ ಚಿರತೆ ದಾಳಿ ಮುಂದುವರೆದಿದ್ದು, 6 ಮೇಕೆಗಳನ್ನು ಚಿರತೆ ಕೊಂದು ತೇಗಿದ ಘಟನೆ ಪಾಂಡವಪುರ ತಾಲೂಕಿನ ಗಿರಿಯಾರಹಳ್ಳಿಯಲ್ಲಿ ನಡೆದಿದೆ. ನಾಗೇಗೌಡ ಎಂಬ ರೈತ ಕೊಟ್ಟಿಗೆಯಲ್ಲಿ 18 ಮೇಕೆಯನ್ನು ಕಟ್ಟಿದ್ದ. ತಡರಾತ್ರಿ ಕೊಟ್ಟಿಗೆಗೆ ದಾಳಿ ನಡೆಸಿರುವ ಚಿರತೆ 6 ಮೇಕೆಗಳನ್ನು ಕೊಂದಿದ್ದು, ನಾಲ್ಕು ಮೇಕೆಗಳನ್ನು ಹೊತ್ತೊಯ್ದಿದೆ. ಇಂದು ಬೆಳಿಗ್ಗೆ ರೈತ ಕೊಟ್ಟಿಗೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಶಾಸಕ ಪುಟ್ಟರಾಜು ಭೇಟಿ ನೀಡಿದ್ದಾರೆ. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

 

About Author

Leave a Reply

Your email address will not be published. Required fields are marked *

You may have missed