ವಂಚಕ ಸುಕೇಶ್ ಚಂದ್ರಶೇಖರ್ ಜೈಲಿನ ಕೊಠಡಿಯಲ್ಲಿ ಐಷಾರಾಮಿ ವಸ್ತುಗಳು ಪತ್ತೆ

0

ವದೆಹಲಿ: ದೆಹಲಿ ಕಾರಾಗೃಹ ಇಲಾಖೆಯು ಮಂಡೋಲಿ ಜೈಲಿನಲ್ಲಿರುವ ಆರೋಪಿ ಸುಕೇಶ್ ಚಂದ್ರಶೇಖರ್ ಅವರ ಸೆಲ್ ಮೇಲೆ ದಾಳಿ ನಡೆಸಿತು. ದಾಳಿಯಲ್ಲಿ 1.5 ಲಕ್ಷ ರೂಪಾಯಿ ಮೌಲ್ಯದ ಗುಸ್ಸಿ (Gucci) ಚಪ್ಪಲಿ ಮತ್ತು 80,000 ರೂಪಾಯಿ ಮೌಲ್ಯದ ಎರಡು ಜೀನ್ಸ್ ಅನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಇತ್ತೀಚಿನ ಕಾರ್ಯಾಚರಣೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರವಾಗುತ್ತಿವೆ. ವಂಚಕ ಸುಕೇಶ್ ಜೈಲರ್ ದೀಪಕ್ ಶರ್ಮಾ ಅವರ ಮುಂದೆ ಅಳುತ್ತಿರುವುದನ್ನು ತೋರಿಸಿದೆ.ದಾಳಿಯಲ್ಲಿ ಕಾರಾಗೃಹ ಇಲಾಖೆ ಮತ್ತು ಇತರ ಭದ್ರತಾ ಸಿಬ್ಬಂದಿ ಕೂಡ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಗೃಹ ಮತ್ತು ಕಾನೂನು ಕಾರ್ಯದರ್ಶಿಗಳೆಂದು ಹೇಳಿಕೊಳ್ಳುವ ಮೂಲಕ ಮಾಜಿ ರೆಲಿಗೇರ್ ಪ್ರಮೋಟರ್ ಮಲ್ವಿಂದರ್ ಸಿಂಗ್ ಅವರ ಪತ್ನಿಯನ್ನು ವಂಚಿಸಿದ ಹೊಸ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಇತ್ತೀಚೆಗೆ ಸುಕೇಶ್ ಚಂದ್ರಶೇಖರ್ ಅವರನ್ನು ಬಂಧಿಸಿದೆ.

About Author

Leave a Reply

Your email address will not be published. Required fields are marked *

You may have missed