ಮನೆಗೆ ಬಂದ ಪ್ರಿಯಕರ ಮಾಡಿದ್ದ ಮಸಲತ್ತು: ಪೋಸ್ಟ್ ಮಾರ್ಟಮ್ ನಲ್ಲಿ ಬಯಲಾಯ್ತು ಅಸಲಿಯತ್ತು

0

ನೆಯವ್ರಿಗೆ ಮಗಳ ಮದುವೆ ಮಾಡ್ಬೇಕು ಅನ್ನೊ ಆಲೋಚನೆ.ಸಂಬಂದಿಕನನ್ನೆ ಹುಡುಕಿ ಹುಡ್ಗಿಗೆ ಎಂಗೇಜ್ಮೆಂಟ್ ಮಾಡಿದ್ರು. ಈ ಕಡೆ ಪ್ರಿಯಕರ ಬೇರೆಯದ್ದೆ ಪ್ಲಾನ್ ಮಾಡಿಕೊಂಡ.ಹಸೆಮಣೆ ಏರಬೇಕಾದ ಯುವತಿಯನ್ನ ಮಸಣ ಸೇರಿಸಿದ್ದಾನೆ. ಮನೆ ಮುಂದೆ ಶವ ಪೆಟ್ಟಿಗೆ,ಸುತ್ತಲು ದುಃಖದಿಂದ ನಿಂತ ಸಂಬಂದಿಕರು.ಈ ದೃಶ್ಯ ಕಂಡುಬಂದಿದ್ದು ವಿಲ್ಸನ್ ಗಾರ್ಡನ್ ನ ವಿನಾಯಕ ನಗರದಲ್ಲಿ.ಎಂಗೇಜ್ಮೆಂಟ್ ಗೆ ಹಾಕಿದ್ದ ಚಪ್ಪರ ಒಣಗೋ ಮುನ್ನವೆ ಮನೆ ಮುಂದೆ ಶಾಮಿಯಾನ ಹಾಕಲಾಗಿದೆ.ಮುದ್ದಾಗಿ ಬೆಳೆಸಿದ್ದ ಮಗಳ ಮದುವೆ ಕನಸು ಕಾಣ್ತಿದ್ದ ಕುಟುಂಬಕ್ಕೆ ಶಾಕ್ ಕಾದಿತ್ತು.

ಹೊರಗೆ ಹೊಗಿದ್ದ ಕುಟುಂಬ ಮನೆಗೆ ಬಂದು ನೋಡಲಾಗಿ ಮಗಳು ಶವವಾಗಿ ಹೋಗಿದ್ದಳು.

ಯೆಸ್ ..ಈಕೆ ಹೆಸರು ಶಾಲಿನಿ.ಈತನ ಹೆಸ್ರು ಮನೋಜ್.ಇಬ್ಬರು ಪರಸ್ಪರ ಪ್ರೀತಿ ಮಾಡ್ತಿದ್ರು.ಆದ್ರೆ ಮದುವೆ ಅಂತ ಬಂದಾಗ ಪ್ರಿಯಕರನನ್ನು ದೂರ ಮಾಡ್ಕೊಳ್ಳಬೇಕಾದ ಪರಿಸ್ಥಿತಿ ಶಾಲಿನಿಗಿತ್ತು.ಸಂಬಂದಿಕನ ಜೊತೆಯಲ್ಲಿ ಶಾಲಿನಿಗೆ ನಿಶ್ಚಿತಾರ್ಥ ಕೂಡ ಆಗಿತ್ತು.ಆದ್ರೆ ಮನೆಯಲ್ಲಿ ಯಾರು ಇಲ್ಲದಾಗ ಮನೋಜ್ ಎಂಟ್ರಿ ಕೊಟ್ಟಿದ್ದ.ನನ್ನ ಬಿಟ್ಟು ಬೆರೊಬ್ಬನನ್ನು ಮದುವೆ ಆಗ್ತಿಯಲ್ಲ ಎಂದು ಗಲಾಟೆ ಶುರು ಮಾಡಿದ್ದ.ದಿಂಬಿನಿಂದ ಆಕೆಯ ಉಸಿರುಗಟ್ಟಿಸಿ ಕೊಲೆ ಮಾಡಿ ಎಸ್ಕೇಪ್ ಆಗಿ ತಾನು ಆತ್ಮಹತ್ಯೆಗೆ ಯತ್ನಿಸಿದ್ದ.

ಈ ಕಡೆ ಐವತಿಯದ್ದು ಅಸಹಜ ಸಾವು ಎಂದು ದೂರು ಬಂದ ಹಿನ್ನಲೆ ಕೇಸ್ ದಾಖಲಾಗಿತ್ತು. ನಂತರ ಪೋಸ್ಟ್ ಮಾರ್ಟಮ್ ವೇಳೆಯಲ್ಲೆ ಗೊತ್ತಾಗಿದ್ದು ಆಕೆಯ ಜೊತೆ ಮನೋಜ್ ಬಲವಂತವಾಗಿ ಲೈಂಗಿಕ ಕ್ರೀಯೆ ನಡೆಸಿ ಕೊಲೆ ಮಾಡಿದ್ದ ಎಂದು.ಸದ್ಯ ಆತ್ಮಹತ್ಯೆ ಯತ್ನಿಸಿದ್ದ ಮನೋಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿತಿದ್ರೆ ಮತ್ತೊಂದೆಡೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ರೇಪ್&ಮರ್ಡರ್ ಕೇಸ್ ದಾಖಲಾಗಿದೆ. ಒಟ್ಟಾರೆ ಹಸೆಮಣೆ ಏರಲು ಹೊರಟವಳು ಪ್ರಿಯಕರನ ದುಷ್ಟ ಬುದ್ದಿಗೆ ಬಲಿಯಾಗಿದ್ದಾಳೆ.ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಆರೋಪಿ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ..

About Author

Leave a Reply

Your email address will not be published. Required fields are marked *

You may have missed