ಶಾಸಕ ಕೋನರಡ್ಡಿ ಸಾಮಾಜಿಕ ಕಳಕಳಿ ಶ್ಲಾಘನೀಯ: ಶ್ರೀ ದಿಂಗಾಲೇಶ್ವರ ಸ್ವಾಮೀಜಿ

0

ಹುಬ್ಬಳ್ಳಿ: ಜಗತ್ತಿನಲ್ಲಿ ಅನೇಕ ಪವಾಡ ಪುರುಷರ ತಮ್ಮ ಶಕ್ತಿಯಿಂದ ದೇವಿಯನ್ನು ಒಲಿಸಿಕೊಂಡ ಉದಾಹರಣೆಗಳಿವೆ ಅದರಲ್ಲಿ ಇದೇ ಕ್ಷೇತ್ರದ ನಾಗಲಿಂಗ ಅಜ್ಜನವರು ಹಾಗೂ ಶಿರೀಫ ಸಾಹೇಬರು ದೇವಿಯನ್ನು ಮಾತನಾಡಿಸಿ ಮೂಗನತ್ತನ್ನು ಕೇಳಿ ಪಡೆದರು. ದೇವಿಯ ಆರಾಧಕರಾಗಿ ದೇವಿಯನ್ನು ಒಲಿಸಿಕೊಂಡರು.

ಇದರ ಅರ್ಥ ಇಷ್ಟೇ ಭಕ್ತಿಯಿಂದ ನಾವು ದ್ಯಾಮವ್ವ, ದುರ್ಗವ್ವನ ಪೂಜೆ, ಜಾತ್ರೆಯನ್ನು ಮಾಡಿ ದೇವಿ ಕೃಪಾಕಟಾಕ್ಷಿಯನ್ನು ಪಡೆಯಬೇಕೆಂದು ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನಮಠದ ಶ್ರೀ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು. ಅವರು ಪಟ್ಟಣದ ಗ್ರಾಮದೇವತೆಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವದ 4 ನೇ ದಿನದ ದೇವತಾ ಕಾರ್ಯದ ಧರ್ಮಸಭೆಯಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದರು.

ಸಾವಿರಾರು ರೀತಿಯಲ್ಲಿ ತಮ್ಮ ತಪೋಫಲದಿಂದ ಶ್ರೀದೇವಿ ಪೂಜೆಯನ್ನು ಕೈಗೊಳ್ಳುತ್ತಾರೆ. ಅನೇಕ ಸಾದು ಸಂತರು ದೇವಿಯನ್ನು ಪೂಜೆಸಿ ಮನವೊಲಿಸಿಕೊಂಡು ಜಗತ್ತಿನ ಉದ್ದಾರಕ್ಕಾಗಿ ತಮ್ಮ ಧಾರ್ಮಿಕ ಕಾರ್ಯವನ್ನು ಮಾಡಿದ ಇತಿಹಾಸಗಳು ನಮಗೆ ಸಿಗುತ್ತವೆ. ಸೇರಿದ ಭಕ್ತ ವೃಂದವನ್ನು ನೋಡಿದರೆ ಗ್ರಾಮದ ದೇವತೆಯ ಧರ್ಮ ಕಾರ್ಯದಿಂದ ಭಕ್ತರು ಪಾವನರಾಗಿದ್ದೀರಿ ಇಂತಹ ದೈವದ ಕಾರ್ಯಗಳಲ್ಲಿ ಪಾಲ್ಗೋಂಡ ಸಹಸ್ರಾರು ಭಕ್ತರಿಗೆ ದೇವಿಯ ಕೃಪಾಶೀರ್ವಾದ ಸದಾ ಇರಲಿ ಎಂದು ಹೇಳಿದರು.

ತಂದೆ ತಾಯಿಯಗಳು ನಡೆದುಕೊಂಡಂತೆ ಮಕ್ಕಳು ನಡೆದುಕೊಳ್ಳುಬೇಕು. ಮಕ್ಕಳಿಗೆ ಧಾರ್ಮಿಕ ಕಾರ್ಯದಲ್ಲಿ ಚಿಕ್ಕವರಿಂದಲೇ ನಮ್ಮ ಸಂಸ್ಕ್ರತಿ, ಪರಂಪರೆ ಕುರಿತು ತಿಳಿಸಿ ಹೇಳಿದಾಗ ಮಾತ್ರ ಇಂತಹ ದೈವಿ ಕಾರ್ಯಕ್ರಮ ಯಶ್ವಿಯಾಗಿ ನೆರವೇರಲು ಸಾದ್ಯ 13 ವರ್ಷಗಳ ನಂತರ ಇಂತಹದೊಂದು ಮಹತ್ವದ ದೇವಿಯ ಜಾತ್ರೆಯೊಂದಿಗೆ ಊರಿನ ಒಳಿತಿಗಾಗಿ ಹಮ್ಮಿಕೊಂಡ ಜಾತ್ರೆ ಆದ್ದೂರಿಯಾಗಿ ಮನತುಂಬುವಂತಾಗಿದೆ ಮುಂದಿನ ಯುವ ಪೀಳಿಗೆ ಇದನ್ನು ಮುಂದುವರೆಸಿಕೊಂಡು ಹೋಗವಂತಾಗಬೇಕೆಂಬ ಮಾತನ್ನು ಹೇಳಿದ ಅವರು ಶಾಸಕ ಎನ್ ಎಚ್ ಕೋನರಡ್ಡಿ ಅವರ ಸಾಮಾಜಿಕ ಕಳಕಳಿ ಕುರಿತು ಶ್ರೀ ಗಳ ಶ್ಲಾಘನೀಯ ವ್ಯಕ್ತಪಡಿಸಿದರು.

ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ ,ನಾನು ದ್ಯಾಮವ್ವನ ಗುಡಿಯ ಮುಂದೆ ಮನೆಯಿದ್ದಾಗ ಪ್ರತಿನಿತ್ಯ ದೇವಿಯ ದರ್ಶನ ಪಡೆದು ಹೋಗುತ್ತಿದೆ. ಗ್ರಾಮದ ದ್ಯಾಮವ್ವ ದೇವಿಯ ಸಾಕ್ಷತಾ ಪವಾಡದ ಅನುಭವ ನನಗಾಗಿದೆ. ಸಕಲ ಸುಖ ಸಂತೋಷಕ್ಕಾಗಿ ಗ್ರಾಮದೇವತೆಯ ಆಶೀರ್ವಾದ ಬೇಕೆ ಬೇಕು. ಆದ್ದೂರಿಯಾಗಿ ನಡೆದ ಜಾತ್ರೆ ಇತಿಹಾಸದಲ್ಲಿ ನೆನಪಿಡುವಂತೆಯಾಗಿದೆ. ಐದು ದಿನ ನಿರಂತರವಾಗಿ ಅನ್ನಪ್ರಸಾದ, ಪೂಜೆ ವಿಧಿ ವಿಧಾನಗಳು ಶಾಸ್ತ್ರಕ್ತುವಾಗಿ ನಡೆದುಕೊಂಡು ಬಂದಿರುತ್ತದೆ. ಈ ವರ್ಷ ರೈತರಿಗೆ ಮಳೆ, ಬೆಳೆ ಚನ್ನಾಗಿ ಆಗಲಿ ಎಂದು ದೇವಿಯಲ್ಲಿ ಬೇಡಿಕೊಳ್ಳುತ್ತೇನೆಂದು ಹೇಳಿದರು.

ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಕೆ.ಐ.ಬಳಿಗೇರ ಅವರು ಮಾತನಾಡಿ ಗ್ರಾಮದೇವತೆ ಒಂದು ತಾಯಿಯ ಸಂಕೇತ ತಾಯಿಯಾದವಳು ಶ್ರೇಷ್ಟಳು ಅವಳು ಇಲ್ಲದೇ ಮನೆ, ಮನಸ್ಸು ಜೀವನ ನೆಮ್ಮದಿ ಇರುವುದಿಲ್ಲ. ಅದರಂತೆ ಗ್ರಾಮದೇವತೆಯ ಇಲ್ಲದೇ ಎಲ್ಲರ ಸುಖ ಶಾಂತಿ ಇರುವುದಿಲ್ಲ. ಜೀವನ ಮೌಲ್ಯಗಳನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡು ಇಂತಹ ಧಾರ್ಮಿಕ ಕಾರ್ಯಗಳನ್ನು ಯಶಸ್ವಿಯಾಗಿ ಪೂರೈಸಲು ಆ ದೇವಿಯ ನಿಮಗೆ ಕೈಗೂಡಿಸಿದ ಪರಿಣಾಮ ಕಾರ್ಯಕ್ರಮಗಳು ಯಶಸ್ವಿಯಾಗಿದೆ ಎಂದು ಹೇಳಿದರು.

ಬೆಳಿಗ್ಗೆ ಚಂಡಿಕಾ ಹೋಮ್, ಸುಹಾಸಿನಿ ಪೂಜೆ, ಕುಮಾರಿ ಪೂಜೆ, ಪೂರ್ಣಾಹುತಿ, ಮಹಾಮಂಗಳಾರತಿ ಪೂಜೆ ನಡೆದವು. ರಾತ್ರಿ 9 ಕ್ಕೆ ಅಂತರಾಷ್ಟ್ರೀಯ ಟಿ.ವ್ಹಿ ಹಾಸ್ಯ ಕಲಾವಿದರಾದ ಶರಣು ಯಮನೂರ, ಮಲ್ಲಪ್ಪ ಹೊಂಗಲ ತಂಡದ ವತಿಯಿಂದ ನಗೆ ಹಬ್ಬ ಹಾಸ್ಯ ಸಂಜೆ ಕಾರ್ಯಕ್ರಮ ಜರುಗಿದವು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎ.ಬಿ.ಕೊಪ್ಪದ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಯೋಗಿ ಜಂಗಣ್ಣವರ ನಿರೂಪಿಸಿದರು. ಅಣ್ಣಪ್ಪ ಬಾಗಿ ಸ್ವಾಗತಿಸಿದರು. ಗಣೇಶ ಹೊಳೆಯಣ್ಣವರ ವಂದಿಸಿದರು. ಅಪ್ಪಣ್ಣ ಹಳ್ಳದ ಪ್ರಾರ್ಥಿಸಿದರು.

About Author

Leave a Reply

Your email address will not be published. Required fields are marked *

You may have missed