14 ತಿಂಗಳ ಮಗುವಿನ ನೇತ್ರದಾನ ಮಾಡಿ ಮಾದರಿಯಾದ ಪೋಷಕರು

0

ರಾಯಚೂರು : ಹುಟ್ಟು ಉಚಿತ ಸಾವು ಖಚಿತ ಅನ್ನೊ ಮಾತಿದೆ.ಅದು ಸತ್ಯ ಕೂಡ ಹೌದು.ಮನುಷ್ಯನು ಬದುಕಿದ್ದಾಗ ಇನ್ನೊಬ್ಬರ ಒಳಿತಾಗಿ ಬದುಕುವುದು ನಿಸ್ವಾರ್ಥಕ ಬದುಕು. ಸತ್ತಾಗ ಇನ್ನೊಬ್ಬರಿಗೆ ಬಾಳಿಗೆ ಬೆಳಕಾದರೆ ಅದು ಮಾನವೀಯತೆ ಬದುಕು.ಇದಕ್ಕೆ ರಾಯಚೂರು ಜಿಲ್ಲೆಯ 14 ತಿಂಗಳ ಮಗು ಸಾಕ್ಷಿಯಾಗಿದೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಹಟ್ಟಿಚಿನ್ನದಗಣಿ ಸಮೀಪದ ಗೆಜ್ಜಲಗಟ್ಟಾ ಗ್ರಾಮದ ಕುಟುಂಬವೊಂದು ತಮ್ಮ 14 ತಿಂಗಳ ಮಗುವಿನ ನೇತ್ರದಾನ ಮಾಡೋ ಮೂಲಕ ಇನ್ನೊಬ್ಬರ ಅಂಧರ ಬಾಳಿಗೆ ಬೆಳಕಾಗಿ ಮಾನವೀಯತೆ ಮೆರೆದಿದ್ದಾರೆ. ಗೆಜ್ಜಲಗಟ್ಟಾ ಗ್ರಾಮದ ಅಮರೇಗೌಡ ಎನ್ನುವರು ಹಟ್ಟಿಚಿನ್ನದಗಣಿಯಲ್ಲಿ ಕಾರ್ಯವನಿರ್ಹವಹಿಸುತ್ತಿದ್ದಾರೆ.

ಇವರು 2016 ರಲ್ಲಿ ಕರಡಕಲ್ ಗ್ರಾಮದ ತಮ್ಮ ಸಂಬಂಧಿಯಾಗಿದ್ದ ವಾಣಿ ಅನ್ನೋರನ್ನ ಮದುವೆಯಾಗಿದ್ದರು.ಇವರಿಗೆ ಜನಿಸಿದ ಮೊದಲು ಗಂಡು ಮಗು ಕಾಯಿಲೆಯೊಂದಕ್ಕೆ ತುತ್ತಾಗಿ 9 ದಿನಗಳಲ್ಲಿ ತೀರಿ ಹೋಗಿತ್ತು. ನಂತರ ಎರಡನೇ ಹೆಣ್ಣು ಮಗು ಜನಿಸಿದೆ ಆ ಮಗು ಈಗ 3 ವರ್ಷದ್ದಾಗಿದೆ. ಅಮರೇಗೌಡ ಹಾಗೂ ವಾಣಿ ದಂಪತಿಗೆ ಜನಿಸಿದ ಮೂರನೇ ಮಗು ಕೂಡ ಖಾಯಿಲೆಗೆ ತುತ್ತಾಗಿದೆ.ಆ ಗಂಡು ಮಗು ಬಸವಪ್ರಭು ಕೂಡ ಅನಾರೋಗ್ಯಕ್ಕೆ ತುತ್ತಾಗಿದೆ.ಈ ಮಗುವಿಗೆ ಹುಟ್ಟುತ್ತಲೇ ಒಂದು ಕಾಯಿಲೆ ಕಾಣಿಸಿಕೊಂಡಿದೆ. ಈ ಮಗುವನ್ನು ಬೆಂಗಳೂರ, ಬೆಳಗಾವಿ ಸೇರಿದಂತೆ ಬೇರೆ ಬೇರೆ ನಗರ ಪಟ್ಟಣಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಆ ಮಗುವಿಗೆ ಇರುವ ರೋಗದ ಬಗ್ಗೆ ವೈದ್ಯರು ತಿಳಿಸಿದಾಗ ಕುಟುಂಬದವರು ಬೆರಗಾಗಿದ್ದಾರೆ.

ಈ ಮಗುವಿಗೆ ಇರುವದು ಅನುವಂಶೀಕ ರೋಗವಂತೆ. ಅಂದರೆ ಯಾರು ಸಂಬಂಧಿಕರದಲ್ಲಿ ಮದುವೆಯಾಗುತ್ತಾರೋ ಅಂಥವರಲ್ಲಿ ಕಾಣುವ ರೋಗವಿದು. ವಂಶಪರಂಪರೆಯಿಂದ ಬರುವ ರೋಗವಾಗಿದೆ. 6 ಸಾವಿರ ಮಕ್ಕಳಲ್ಲಿ ಒಂದು ಮಗುವಿಗೆ ಇಂತಹ ವಿಚಿತ್ರ ಕಾಯಿಲೆ ಗಂಡು ಮಕ್ಕಳಿಗೆ ಮಾತ್ರ ಬರುತ್ತದೆ. ಈ ಕಾಯಿಲೆಯನ್ನು ವಾಸಿ ಮಾಡಲು ಅಸಾಧ್ಯ ಎಂದು ವೈದ್ಯರು ತಿಳಿಸಿದ್ದಾರೆಂದು ಮಗುವಿನ ತಂದೆ ಹೇಳಿದ್ದಾರೆ.ಇನ್ನೊಂದು ವಿಚಿತ್ರವೆಂದರೆ ಪುನೀತ್‌ರಾಜಕುಮಾರ ನಿಧನದ ನಂತರ ನವೆಂಬರ್ 6 ರಂದು ಜನಿಸಿದ ಈ ಮಗುವ ಪುನೀತ್(ಅಪ್ಪು) ಸಿನಿಮಾದ ಹಾಡುಗಳನ್ನು ಕೇಳಿಸಿದರೆ ಸುಮ್ಮನಾಗುತ್ತಿತ್ತಂತೆ. ಇಲ್ಲದಿದ್ದರೆ ಆ ಮಗು ಖಾಯಿಲೆಯ ಭೀಕರತೆಗೆ ಹಗಲು-ರಾತ್ರಿ ನಿದ್ರೆ ಇಲ್ಲದೇ ಅಳುತ್ತಿತ್ತಂತೆ. ಹೀಗಾಗಿ ಅಪ್ಪುವಿನ ಹಾಡನ್ನ ಆ ಮಗುವಿಗೆ ಕೇಳಿಸುತ್ತಿದ್ದರು.

ಇನ್ನು ತಮ್ಮ ಮಗು ಉಳಿಯಲ್ಲ ಅಂತ ವೈದ್ಯರೇ ಖಚಿತಪಡಿಸಿದ ಮೇಲೆ ಆ ಕುಟುಂಬದವರು ನಮ್ಮ ಮಗು ಇನ್ನೂ ಬದುಕಲು ಸಾದ್ಯವಿಲ್ಲ ಅಂತ ಸುಮ್ಮನಾಗಿದ್ದರು.ಆದರೆ ನಮ್ಮ ಮಗುವಿನ ಕಣ್ಣಾದರೂ(ನೇತ್ರಗಳು) ಇನ್ನೊಬ್ಬರ ಅಂಧರ ಬಾಳಿಗೆ ಬೆಳಕಾಗಲಿ ಎಂದು ನಿರ್ಧರಿಸಿದ್ದರು.ಈಗ ಮಗು ಅಸುನೀಗಿದ ಬಳಿಕ ಮಗುವಿನ ಸಾವಿನ ನೋವಿನಲ್ಲೂ ಅಮರೇಗೌಡ ಹಾಗೂ ವಾಣಿ, ಮಗುವಿನ ದಂಪತಿ ನೇತ್ರ(ಕಣ್ಣು)ದಾನ ಮಾಡಿದ್ದಾರೆ. ಇದಕ್ಕಿಂತ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮುಂದಿನ ದಿನಗಳಲ್ಲಿ ನಮ್ಮ ಕುಟುಂಬ ಸದಸ್ಯರೆಲ್ಲರೂ ದೇಹದಾನ ಮಾಡಲು ನಿರ್ಧರಿಸಿದ್ದೇವೆಂದು ಮಗುವಿನ ತಂದೆ ಅಮರೇಗೌಡ ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed