ಮೋದಿ ಬೆಂಗಳೂರು ರೋಡ್‌ ಶೋ: ಪುಷ್ಪವೃಷ್ಟಿಗೆ ಬರೋಬ್ಬರಿ ಎಷ್ಟು ಕೆಜಿ ಹೂವು ಬಳಕೆ ಗೊತ್ತಾ?

0

ಬೆಂಗಳೂರು :. ಬೆಂಗಳೂರಿನ ಮಾಗಡಿ ರೋಡ್‌ ನೈಸ್‌ ರಸ್ತೆ ಜಂಕ್ಷನ್‌ನಿಂದ ಆರಂಭಗೊಂಡು, ಸುಮನಹಳ್ಳಿ ಜಂಕ್ಷನ್ ವರೆಗೂ ರೋಡ್ ಶೋ ನಡೆಯಲಿದೆ. ಈ ರೋಡ್‌ ಶೋನಲ್ಲಿ ಪ್ರಧಾನಿ ಮೇಲೆ ಪುಷ್ಪವೃಷ್ಟಿ ಮಾಡಲು 25 ಟನ್ (25,000 ಕೆಜಿ) ಚೆಂಡು ಹೂವನ್ನು ಆಯೋಜಕರು ಖರೀದಿ ಮಾಡಿದ್ದಾರೆ.

 

ಪ್ರಧಾನಿ ನರೇಂದ್ರ ಮೋದಿ 5.5 ಕಿ.ಮೀ ರಸ್ತೆಯಲ್ಲಿ ರೋಡ್ ಶೋ ಮಾಡಲಿದ್ದಾರೆ. ದಾರಿ ಉದ್ದಕ್ಕೂ ಅವರಿಗೆ ಭರ್ಜರಿ ಸ್ವಾಗತ ಕೋರಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸುಮಾರು ಎರಡು ಲಕ್ಷ ಜನರನ್ನು ಸೇರಿಸಲು ಬಿಜೆಪಿ ಸಚಿವರು ಶಾಸಕರು ಸಿದ್ಧತೆ ಮಾಡಿಕೊಂಡಿದ್ದಾರೆ.

ಪ್ರಧಾನಿ ರೋಡ್ ಶೋ ಸಾಗುವ ರಸ್ತೆಯುದ್ಧವೂ ಅವರ ಮೇಲೆ ಹೂವಿನ ಮಳೆ ಸುರಿಸಿ ಸ್ವಾಗತ ಕೋರಲು ಸಿದ್ಧತೆ ಕೈಗೊಳ್ಳಲಾಗಿದೆ. 25 ಟನ್ ಹೂವನ್ನು ಕರ್ನಾಟಕ ಮತ್ತು ಹೊರ ರಾಜ್ಯದಿಂದ‌ ಖರೀದಿಸಲಾಗಿದ್ದು, ಹೂವನ್ನು ಬಿಡಿಸಿ ಬುಟ್ಟಿಗಳಲ್ಲಿ ತುಂಬಿಸಿ ಸೂಕ್ತ ಸ್ಥಳಗಳಿಗೆ ಸಾಗಾಣಿಕೆ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ಎಲ್ಲಾ ಕಡೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಈಗಾಗಲೇ ಸಾಕಷ್ಟು ಜನರು ಸ್ಥಳಕ್ಕೆ ಆಗಮಿಸುತ್ತಿದ್ದು, ಕಾರ್ಯಕ್ರಮ ಸುತೂತ್ರವಾಗಿ ನಡೆಯಲು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಮಾಗಡಿ ರಸ್ತೆ ನೈಸ್‌ ರಸ್ತೆ ಜಂಕ್ಷನ್‌ನಿಂದ ಆರಂಭವಾಗಿ ಸುಮನಹಳ್ಳಿ ಮೇಲ್ಸೇತುವೆವರೆಗೂ ರೋಡ್‌ ಶೋ ನಡೆಯಲಿದೆ. ಈ ಹಿನ್ನೆಲೆ ಸಂಜೆ ಎಂಟು ಗಂಟೆವರೆಗೂ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದ್ದು, ಬದಲಿ ಮಾರ್ಗವನ್ನು ನೀಡಲಾಗಿದೆ. ಬೆಂಗಳೂರಿನ ರ್ಯಾಲಿ ಬಳಿಕ ಪ್ರಧಾನಿ ಮೋದಿ ಮೈಸೂರಿಗೆ ತೆರಳಿದ್ದು, ಭಾನುವಾರ ಮೈಸೂರು ರೋಡ್‌ ಶೋ, ಚನ್ನಪಟ್ಟಣ ಸಮಾವೇಶದಲ್ಲಿ ಭಾಗಿಯಾಗಿ ರಾಜ್ಯ ಬಿಜೆಪಿ ಪರ ಮತಯಾಚನೆ ಮಾಡಲಿದ್ದಾರೆ.

About Author

Leave a Reply

Your email address will not be published. Required fields are marked *

You may have missed