ಫ್ಲ್ಯಾಟ್‌ನ 10ನೇ ಮಹಡಿಯಿಂದ ಜಿಗಿದು ನೀಟ್ ವಿದ್ಯಾರ್ಥಿ ಆತ್ಮಹತ್ಯೆ!

0

ಜೈಪುರ: ಬೆಂಗಳೂರು ಮೂಲದ ನೀಟ್ (NEET) ವಿದ್ಯಾರ್ಥಿಯೊಬ್ಬ ರಾಜಸ್ಥಾನದ (Rajasthan) ಕೋಟಾ ವಿಜ್ಞಾನ ನಗರ ಪ್ರದೇಶದ ಬೃಹತ್ ಕಟ್ಟಡದ 10ನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

 

ಮೊಹಮ್ಮದ್ ನಾಸಿರ್ (22) ಪ್ರಾಯ ಮೃತಪಟ್ಟ ವಿದ್ಯಾರ್ಥಿ. ಈತ ಕಳೆದ ಒಂದು ವರ್ಷದಿಂದ ಕೋಟಾದ (Kota) ಕೋಚಿಂಗ್ ಸಂಸ್ಥೆಯಲ್ಲಿ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಎಂದು ತಿಳಿದು ಬಂದಿದ್ದು. ಭಾನುವಾರ ರಾಜಸ್ಥಾನದ ಜೈಪುರ (Jaipur) ಪರೀಕ್ಷಾ ಕೇಂದ್ರದಲ್ಲಿ ನೀಟ್ ಪರೀಕ್ಷೆಗೆ ಹಾಜರಾಗಿ ಮರುದಿನ ಕೋಟಾಗೆ ಮರಳಿದ್ದು, ತಡರಾತ್ರಿ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ. ಇದನ್ನು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದ್ದು ಎಲ್ಲೋ ಒಂದು ಕಡೆ ಕೊಲೆಯ ಶಂಕೆ ಕೂಡ ವ್ಯಕ್ತವಾಗಿದೆ.

ನಾಸಿರ್ ತನ್ನ ಸ್ನೇಹಿತರೊಂದಿಗೆ ಫ್ಲಾಟ್‌ನಲ್ಲಿ ವಾಸಿಸುವಿದ್ದ ಎನ್ನಲಾಗಿದ್ದು, ಘಟನೆ ನಡೆದ ಸಂದರ್ಭದಲ್ಲಿ ಈತನೊಂದಿಗೆ ಯಾರು ಇರಲಿಲ್ಲ. ನಾಸಿರ್ ಸೋಮವಾರ ರಾತ್ರಿ 11 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು, ಮೃತದೇಹವನ್ನು ಎಂ.ಬಿ.ಎಸ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ನಾಸಿರ್ ಪೋಷಕರು ಬೆಂಗಳೂರಿನಿಂದ ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ವಿಜ್ಞಾನನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ದೇವೇಶ್ ಭಾರದ್ವಾಜ್ ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed