ದೇಶದಲ್ಲಿ ಹೊಸ ಕೋವಿಡ್ ರೂಪಾಂತರ XBB 1.16: 76 ಪತ್ತೆ..!

0

ವದೆಹಲಿ: ದೇಶದಲ್ಲಿ ಇತ್ತೀಚಿಗೆ ಕೋವಿಡ್ ಪ್ರಕರಣಗಳ ಹೆಚ್ಚಳದ ಬೆನ್ನಲ್ಲೆ, ಹೊಸ ರೂಪಾಂತರ XBB ​​1.16 ನ 76 ಮಾದರಿಗಳು ಪತ್ತೆಯಾಗಿವೆ. ಕರ್ನಾಟಕದಾದ್ಯಂತ 30, ಮಹಾರಾಷ್ಟ್ರ 29, ಪುದುಚೇರಿ 7, ದೆಹಲಿ 5, ತೆಲಂಗಾಣ 2 ಗುಜರಾತ್, ಹಿಮಾಚಾಲ ಪ್ರದೇಶ ಮತ್ತು ಒಡಿಶಾದಲ್ಲಿ ತಲಾ ಒಂದೊಂದು ಮಾದರಿಗಳು ಕಂಡುಬಂದಿವೆ ಎಂದು ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ INSACOG ಡೇಟಾ ಹೇಳಿದೆ.

ಜನವರಿಯಲ್ಲಿ ಮೊದಲ ಬಾರಿಗೆ ಎರಡು ಮಾದರಿಗಳ ಪರೀಕ್ಷೆ ನಡೆಸಿದಾಗ XBB 1.16 ರೂಪಾಂತರ ದೃಢಪಟ್ಟಿತ್ತು. ಫೆಬ್ರವರಿಯಲ್ಲಿ ಒಟ್ಟು 59 ಮಾದರಿಗಳು ಪತ್ತೆಯಾದರೆ,

ಮಾರ್ಚ್ ನಲ್ಲಿ ಇಲ್ಲಿಯವರೆಗೂ ಇದೀಗ 15 ಮಾದರಿಗಳು ಪತ್ತೆಯಾಗಿವೆ ಎಂದು INSACOG ಹೇಳಿದೆ. ಈ ರೂಪಾಂತರದ ಕಾರಣದಿಂದ ಇತ್ತೀಚಿಗೆ ಕೋವಿಡ್-19 ಪ್ರಕರಣಗಳು ಹೆಚ್ಚಿವೆ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. H3N2 ಕಾರಣ ಇನ್ಫ್ಲುಯೆನ್ಸ ಪ್ರಕರಣಗಳು ಹೆಚ್ಚಾದರೆ, XBB 1.16 ರೂಪಾಂತರದ ಪ್ರಭಾವದಿಂದ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ರಾಷ್ಟ್ರೀಯ ಕೋವಿಡ್ ಕಾರ್ಯಪಡೆಯ ನೇತೃತ್ವ ವಹಿಸಿದ್ದ ಮಾಜಿ ಎಐಐಎಂಎಸ್ ನಿರ್ದೇಶಕ ಡಾ ರಂದೀಪ್ ಗುಲೇರಿಯಾ ಹೇಳಿದ್ದಾರೆ. ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದರಿಂದ ಈ ಸೋಂಕು ಹರಡುವಿಕೆಯನ್ನು ತಡೆಯಬಹುದಾಗಿದೆ. ಆದ್ದರಿಂದ ಸದ್ಯಕ್ಕೆ ಭಯಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed