ರಾಜ್ಯ ರಾಜಕಾರಣದಲ್ಲಿ ಆಸಕ್ತಿ ಇಲ್ಲ:10 ಕಡೆಯಿಂದ ನನಗೆ ಆಹ್ವಾನವಿತ್ತು,: ಡಿ.ಕೆ.ಸುರೇಶ್

0

ಬೆಂಗಳೂರು: ನನಗೆ ರಾಜ್ಯ ರಾಜಕಾರಣ (Politics) ಮಾಡುವ ಆಸಕ್ತಿಯಿಲ್ಲ. ನಾನು ಚುನಾವಣೆಗೆ (Election) ಸ್ಪರ್ಧೆ ಮಾಡುವ ಆಸಕ್ತಿಯನ್ನೂ ಹೊಂದಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ (D.K.Suresh) ಹೇಳಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಬೇರೆ ಬೇರೆ ಕ್ಷೇತ್ರಗಳಿಂದ ಚುನಾವಣೆ ಸ್ಪರ್ಧೆಗೆ ಆಹ್ವಾನ ನೀಡುತ್ತಿದ್ದಾರೆ.

ಚನ್ನಪಟ್ಟಣ, ರಾಜರಾಜೇಶ್ವರಿ ನಗರ ಸೇರಿದಂತೆ ನನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 6 ಕ್ಷೇತ್ರಗಳು, ಹೊರಗಿನ 4 ಕ್ಷೇತ್ರಗಳು ಸೇರಿದಂತೆ ಒಟ್ಟು 10 ಕ್ಷೇತ್ರಗಳಿಂದ ನನ್ನ ಸ್ಪರ್ಧೆಗೆ ಆಹ್ವಾನವಿದೆ. ಆದರೆ ನನಗೆ ರಾಜ್ಯ ರಾಜಕಾರಣದಲ್ಲಿ ಆಸಕ್ತಿಯಿಲ್ಲ. ನಾನು ಚುನಾವಣೆಗೆ ಸ್ಪರ್ಧೆ ಮಾಡುವ ಆಸಕ್ತಿಯನ್ನು ಹೊಂದಿಲ್ಲ ಎಂದು ಸ್ಪಷ್ಟನೆ ನೀಡಿದರು.

ರಾಮನಗರದಲ್ಲಿ (Ramnagar) ನಮ್ಮ ಅಭ್ಯರ್ಥಿ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ನಾಯಕರು ಹೇಳಿದ ಕೂಡಲೇ ಸ್ಪರ್ಧೆ ಮಾಡುವುದಲ್ಲ. ಸ್ಥಳೀಯವಾಗಿ ಕಾರ್ಯಕರ್ತರ ಜೊತೆ ಚರ್ಚೆ ಮಾಡಬೇಕು. ಅವರ ಜೊತೆ ಮಾತನಾಡಿ ತೀರ್ಮಾನ ಮಾಡಬೇಕಾಗುತ್ತದೆ. ನಾನು ಏಕೈಕ ಸಂಸದನಾಗಿದ್ದೇನೆ. ಕಳೆದ 20 ವರ್ಷಗಳಲ್ಲಿ ಉಪಚುನಾವಣೆಗಳನ್ನು ಮಾಡಿ ರೋಸಿ ಹೋಗಿದ್ದೇನೆ. ಎಲ್ಲಾ ಉಪಚುನಾವಣೆಗಳನ್ನು ನಾವು ಮಾಡಿದ್ದೇವೆ. ಈಗ ಉಪಚುನಾವಣೆ (By Election) ಬಗ್ಗೆ ನನಗೆ ಆಸಕ್ತಿಯಿಲ್ಲ ಎಂದರು.

ಗೌಡ ನಂಜೇಗೌಡರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಉರಿಗೌಡ ನಂಜೇಗೌಡ ಅವರು ಅಶ್ವಥ್ ನಾರಾಯಣ್ (C.N.Ashwath Narayan) ಅಸ್ವಸ್ಥರಾಗಿದ್ದಾಗ ಸಿಕ್ಕಿರಬೇಕು. ಅಲ್ಲದೇ ಉರಿಗೌಡ ನಂಜೇಗೌಡರ ವಿಚಾರದಲ್ಲಿ ಒಕ್ಕಲಿಗರು ಜಾಗೃತರಾಗಬೇಕು ಎಂಬ ಕುಮಾರಸ್ವಾಮಿ (H.D.Kumaraswamy) ಹೇಳಿಕೆ ಬಗ್ಗೆ, ಈ ಚುನಾವಣಾ ಸಂದರ್ಭದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

About Author

Leave a Reply

Your email address will not be published. Required fields are marked *

You may have missed