ಪಾಟ್ನಾ ರ್ಯಾಲಿ ಬಾಂಬ್ ಸ್ಫೋಟ ಪ್ರಕರಣ: ನಾಲ್ವರು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ

0

ವದೆಹಲಿ: ಪ್ರಧಾನಿ ನರೇಂದ್ರ ಮೋದಿಯ ಪಾಟ್ನಾ ರ‍್ಯಾಲಿ ಬಾಂಬ್ ಸ್ಫೋಟ ಪ್ರಕರಣ ಸರಿಸುಮಾರು 10 ವರ್ಷ. 2021ರಲ್ಲಿ NIA ವಿಶೇಷ ಕೋರ್ಟ್ 9 ಆರೋಪಿಗಳ ಪೈಕಿ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಇಷ್ಟಕ್ಕೆ ರಾಷ್ಟ್ರೀಯ ತನಿಖಾ ದಳ ಈ ಪ್ರಕರಣವನ್ನು ಅಲ್ಲಿಗೆ ಬಿಟ್ಟಿಲ್ಲ.

ಈ ಘಟನೆ ಹಿಂದಿನ ಎಲ್ಲಾ ಶಕ್ತಿಗಳನ್ನು ಪತ್ತೆ ಹಚ್ಚಿ ಸಂಚು ಬಯಲು ಮಾಡಲು ಕಾರ್ಯಾಚರಣೆ ನಡೆಸುತ್ತಲೇ ಇದೆ. ಮೋದಿ ಪಾಟ್ನಾ ರ‍್ಯಾಲಿ ಬಾಂಬ್ ಸ್ಫೋಟ ಪ್ರಕರಣದ ಮತ್ತೆ ನಾಲ್ವರು ಆರೋಪಿಗಳನ್ನು NIA ಬಂಧಿಸಿದೆ. ಇಂದು NIA ಅಧಿಕಾರಿಗಳು ಈ ಬಾಂಬ್ ಸ್ಫೋಟ ಪ್ರಕರಣಕ್ಕೆ ಆರ್ಥಿಕ ನೆರವು ನೀಡಿದ ನಾಲ್ವರು ಆರೋಪಿಗಳ ಮನೆ ಮೇಲೆ ದಾಳಿ ನಡೆಸಿತ್ತು. ಇಷ್ಟೇ ಅಲ್ಲ ನಾಲ್ವರನ್ನು ಬಂಧಿಸಿದೆ. ಈ ಮೂಲಕ ಇಂತಹ ಘಟನೆಗಳಿಗೆ ಮತ್ತೆ ಆರ್ಥಿಕ ನೆರವು ನೀಡುವ ಮಹಾ ಸಂಚು ತಪ್ಪಿದೆ.

ಬಂಧಿತರನ್ನು ಮೊಹಮ್ಮದ್ ಸಿನನ್, ಇಕ್ಬಾಲ್, ಸರ್ಪಾಜ್ ನವಾಜ್ ಹಾಗೂ ನೌಫಾಲ್ ಎಂದು ಗುರುತಿಸಲಾಗಿದೆ. ಕಳೆದ 9 ವರ್ಷಗಳಿಂದ ತನಿಖೆ ನಡೆಸುತ್ತಿರುವ ಎನ್‌ಐಎ, ಹಲವರ ಮೇಲೆ ಕಣ್ಣಿಟ್ಟಿತ್ತು. ಇದರಲ್ಲಿ ಬಾಂಬ್ ಸ್ಫೋಟಕ್ಕೆ ಆರ್ಥಿಕ ನೆರವು ನೀಡುತ್ತಿರುವವರ ಕುರಿತು ಎನ್‌ಐಎ ನಿಗಾ ಇಟ್ಟಿತ್ತು. ಇಂದು ಬೆಳಗ್ಗೆ ಅಧಿಕಾರಿಗಳ ತಂಡ ನೇರವಾಗಿ ಆರೋಪಿಗಳ ಮನೆ ಮೇಲೆ ದಾಳಿ ಮಾಡಿದೆ. ಬಂಧಿತರನ್ನುತೀವ್ರ ವಿಚಾರಣೆಗೆ ಒಳಪಡಿಸಿದೆ. ಈ ಆರೋಪಿಗಳು ಪಾಟ್ನಾ ಬಾಂಬ್ ಸ್ಫೋಟ ಮಾತ್ರವಲ್ಲ, ದೇಶದಲ್ಲಿ ನಡೆದ ಇತರ ವಿದ್ವಂಸಕ ಕೃತ್ಯಗಳಿಗೂ ಆರ್ಥಿಕ ನೆರವು ನೀಡಿರುವ ಅನುಮಾನಗಳು ವ್ಯಕ್ತವಾಗಿದೆ.

2013ರ ಅಕ್ಟೋಬರ್27 ರಂದು ಈ ಘಟನೆ ಸಂಭವಿಸಿತ್ತು. ಈಗಿನ ಪ್ರಧಾನಿ ಮೋದಿಯನ್ನು ಬಿಜೆಪಿ 2014ರ ಲೋಕಭಾ ಚುನಾಣೆಗೆ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿತ್ತು. ಬಳಿಕ ಮೋದಿ ದೇಶಾದ್ಯಂತ ರ‍್ಯಾಲಿ, ಸಮಾವೇಶ ಸೇರಿದಂತೆ ಹಲವು ಸಭೆಗಳನ್ನು ನಡೆಸಿದ್ದರು. ಇದರಲ್ಲಿ ಬಿಹಾರದ ಪಾಟ್ನದಲ್ಲಿ ಆಯೋಜಿಸಿದ ರ‍್ಯಾಲಿಯಲ್ಲಿ ಉಗ್ರರು ಬಾಂಬ್ ಸ್ಫೋಟಿಸಿದ್ದರು. ಗಾಂಧಿ ಮೈದಾನದಲ್ಲಿ ಪ್ರಧಾನಿ ಅಭ್ಯರ್ಥಿ ಮೋದಿ ಹೂಂಕಾರ್ ರ‍್ಯಾಲಿ ಆಯೋಜಿಸಿದ್ದರು. ಸುಮಾರು 3 ಲಕ್ಷ ಜನ ಸೇರಿದ್ದರು.

ಉಗ್ರರು 8 ಕಡೆಗಳಲ್ಲಿ ಬಾಂಬ್ಸ ಸ್ಫೋಟಿಸಿದ್ದರು. ಇದರಲ್ಲಿ 6 ಮಂದಿ ಮೃತಪಟ್ಟಿದ್ದರೆ, 85ಕ್ಕೂ ಹಚ್ಚು ಮಂದಿ ಗಾಯಗೊಂಡಿದ್ದರು. ಸಿಮಿ ಉಗ್ರ ಸಂಘಟನೆ ಉಗ್ರರು ಹಾಗೂ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಈ ದಾಳಿಯ ಹಿಂದಿನ ಪ್ರವರ್ತಿಸಿತ್ತು ಅನ್ನೋದು ತನಿಖೆಯಿಂದ ಬಯಲಾಗಿತ್ತು. ಅಂದಿನ ಪ್ರಧಾನಿ ಮನ್‌ಮೋಹ್ ಸಿಂಗ್ ಈ ಕುರಿತು ಬಿಹಾರ ಸಿಎಂ ನಿತೀಶ್ ಕುಮಾರ್ ಜೊತೆ ಮಾತುಕತೆ ನಡೆಸಿದ್ದರು. ಬಳಿಕ NIA ತನಿಖೆಗೆ ಆದೇಶಿಸಿದ್ದರು.

About Author

Leave a Reply

Your email address will not be published. Required fields are marked *

You may have missed