ಪ್ರಧಾನಿ ಮೋದಿ ಬಗ್ಗೆ ಹೇಳಿಕೆ ನೀಡಿದ ಪವನ್ ಖೇರಾಗೆ ಮಧ್ಯಂತರ ಜಾಮೀನು

0

ವದೆಹಲಿ: ಕೆಲವೇ ಗಂಟೆಗಳ ಹಿಂದೆ ಅಸ್ಸಾಂ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ ಪವನ್ ಖೇರಾಗೆ ಸುಪ್ರೀಂಕೋರ್ಟ್ (SupremeCourt) ಜಾಮೀನು ನೀಡಿದೆ. ಜಾಮೀನು (Bail) ಕೋರಿ ಅರ್ಜಿ ಸಲ್ಲಿಸುವವರೆಗೂ ಮಧ್ಯಂತರ ಜಾಮೀನು ನೀಡಲು ದ್ವಾರಕ ನ್ಯಾಯಾಲಯಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ದೆಹಲಿ ವಿಮಾನ ನಿಲ್ದಾಣ (Delhi Airport) ದಲ್ಲಿ ಪವನ್ ಖೇರಾ ಅವರನ್ನು ಬಂಧಿಸುತ್ತಿದ್ದಂತೆ ಸುಪ್ರೀಂಕೋರ್ಟ್ ನಲ್ಲಿ ವಿಚಾರವನ್ನು ಪ್ರಸ್ತಾಪಿಸಲಾಯಿತು.

ಸಿಜೆಐ ಚಂದ್ರಚೂಡ್ ಪೀಠದ ಮುಂದೆ ವಿಷಯ ಪ್ರಸ್ತಾಪಿಸಿದ ವಕೀಲ ಅಭಿಷೇಕ್ ಮನುಸಿಂಘ್ವಿ (Abhishek Manu Singhvi) ದೇಶದ್ಯಾಂತ ದಾಖಲಾಗುತ್ತಿರುವ ಎಫ್‍ಐಆರ್‍ಗಳನ್ನು ಒಂದೂಗೂಡಿಸಬೇಕು ಮತ್ತು ಖೇರಾಗೆ ಮಧ್ಯಂತರ ಜಾಮೀನು ನೀಡುವಂತೆ ಮನವಿ ಮಾಡಿದರು. ವಾದ ಆಲಿಸಿದ ಬಳಿಕ ಸಿಜೆಐ ಪೀಠ ಮಧ್ಯಂತರ ಜಾಮೀನು ನೀಡಲು ಸೂಚಿಸಿ, ಎಫ್‍ಐಆರ್ ಗಳನ್ನು ಕ್ಲಬ್ ಮಾಡುವ ಅಭಿಪ್ರಾಯ ತಿಳಿಸುವಂತೆ ಅಸ್ಸಾಂ ಮತ್ತು ಉತ್ತರಪ್ರದೇಶ ಪೊಲೀಸರಿಗೆ ನೋಟಿಸ್ ಜಾರಿ ಮಾಡಿತು. ಮುಂದಿನ ವಿಚಾರಣೆ ವೇಳೆಗೆ ಉತ್ತರಿಸಲು ಪೀಠ ಸೂಚಿಸಿದೆ.

About Author

Leave a Reply

Your email address will not be published. Required fields are marked *

You may have missed