2023ಕ್ಕೆ ಪ್ರಿಯಾಂಕಾ ಗಾಂಧಿ: ಅಜ್ಜಿಯಂತೆ ಶೃಂಗೇರಿ ಮಠಕ್ಕೆ ಮೊಮ್ಮಗಳು ಭೇಟಿ

0

ಚಿಕ್ಕಮಗಳೂರು: ಮಾಜಿ ಪ್ರಧಾನಿ ಇಂದಿರಾಗಾಂಧಿಯವರಂತೆ (Indira Gandhi) ಕಾಂಗ್ರೆಸ್ (Congress) ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಸಹ ಶೃಂಗೇರಿ ಮಠಕ್ಕೆ (Sringeri Sharadamba Temple) ಬುಧವಾರ ಭೇಟಿ ನೀಡಿದ್ದಾರೆ.

 

ಮಠಕ್ಕೆ ಭೇಟಿ ನೀಡಿ ಶಾರದಾಂಬೆ ಹಾಗೂ ಗುರುಗಳ ದರ್ಶನ ಪಡೆದಿರುವ ಅವರು ನರಸಿಂಹವನದಲ್ಲಿರುವ ಕಿರಿಯಶ್ರೀ ವಿಧುಶೇಖರ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಶ್ರೀಗಳು ಪ್ರಿಯಾಂಕಾ ಅವರಿಗೆ ಶಾರದಾಂಬೆಯ ಮೂರ್ತಿ ನೀಡಿ ಹಾರೈಸಿದ್ದಾರೆ. ಬಳಿಕ ದೇವಾಲಯದ ಎರಡೂ ಆನೆಗಳಿಗೂ ಹಣ್ಣು ನೀಡಿದ ಪ್ರಿಯಾಂಕಾ ಗಾಂಧಿ ಪ್ರೀತಿಯಿಂದ ಆನೆಗಳ ಹಣೆ ಸವರಿದ್ದಾರೆ.

ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೆ ಭೇಟಿ ನೀಡಲಿರುವ ಪ್ರಿಯಾಂಕಾ ಅವರು, ಬಹಿರಂಗ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಪರ ಮತಯಾಚನೆ ಮಾಡಿದರು.

About Author

Leave a Reply

Your email address will not be published. Required fields are marked *

You may have missed