ರೆಬೆಲ್ ಸ್ಟಾರ್ ಅಂಬರೀಶ್ ಸ್ಮಾರಕ ಲೋಕಾರ್ಪಣೆ: ಸುಮಲತಾ ಅಂಬರೀಶ್ ಕಣ್ಣೀರು

0

ರೆಬೆಲ್ ಸ್ಟಾರ್ ಅಂಬರೀಶ್ (Rebel Star Ambareesh) ಅವರ ಸ್ಮಾರಕ ಇಂದು (ಮಾ.27) ಕಂಠೀರವ ಸ್ಟುಡಿಯೋದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಲೋಕಾರ್ಪಣೆ ಆಗಿದೆ. ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರು ನಾಮಕರಣ ಮಾಡಿದ ಬಳಿಕ ಅಂಬಿ ಸ್ಮಾರಕ (Memorial) ಉದ್ಘಾಟನೆ ಕಾರ್ಯಕ್ರಮ ನೆರವೇರಿದೆ.

 

12 ಕೋಟಿ ರೂ. ವೆಚ್ಚದಲ್ಲಿ ವಿಶೇಷ ವಿನ್ಯಾಸದಲ್ಲಿ ಅಂಬಿ ಸ್ಮಾರಸ ನಿರ್ಮಾಣವಾಗಿದೆ. ಸ್ಮಾರಕ ಬಳಿ 32 ಅಡಿಯ ಅಂಬಿ ಪ್ರತಿಮೆ ಕೂಡ ಉದ್ಘಾಟನೆ ಆಗಿದೆ. ಒಂದು ಎಕರೆ 37 ಗುಂಟೆ ಜಾಗದಲ್ಲಿ ಅಂಬಿ ಸ್ಮಾರಕ ನಿರ್ಮಾಣ ಆಗಿದೆ. ಈ ವೇಳೆ ಸುಮಲತಾ ಅಂಬರೀಶ್ ಅವರು ಭಾವುಕರಾಗಿದ್ದಾರೆ.

ಅಂಬರೀಶ್ ಅವರನ್ನು 10 ವರ್ಷಗಳಿಂದ ಪ್ರೀತಿಯಿಂದ ಸಾಕಿ ಬೆಳೆಸಿದ ಅಭಿಮಾನಿಗಳಿಗೆ ನನ್ನ ನಮಸ್ಕಾರಗಳು. ಇದು ಅಂಬರೀಶ್ 50 ವರ್ಷ ಪೂರೈಸಿದ ವರ್ಷವಾಗಿದೆ. ಅಭಿಮಾನಿಗಳು ಈ ದಿನ ಯಾವಾಗ ಬರುತ್ತೆ ಅಂತ ಕಾಯ್ತಾ ಇದ್ದರು. ಕರ್ನಾಟಕ ಸರ್ಕಾರದ ಅನುದಾನದ ಅಡಿಯಲ್ಲಿ ಈ ಸುಂದರ ಸ್ಮಾರಕ ನಿರ್ಮಾಣ ಆಗಿದೆ. ನಾನು ಅಭಿಮಾನಿಗಳಿಗೆ ಹೇಳ್ತಾನೇ ಇದ್ದೆ. ಆ ದಿನ ಇಂದು ಬಂದಿದೆ ಎಂದು ಸುಮಲತಾ ಮಾತನಾಡಿದರು.

ಈ ಸಂದರ್ಭದಲ್ಲಿ ನಾನು ಓರ್ವರನ್ನು ಸ್ಮರಿಸೋಕೆ ಇಷ್ಟಪಡ್ತೀನಿ ಅವರೇ ಮಾಜಿ ಸಿಎಂ ಯಡಿಯೂರಪ್ಪನವರು. ನಮ್ಮ ಬೇಡಿಗೆ ಅವರ ಮುಂದೆ ಇಟ್ಟಾಗ ಕೊಂಚವೂ ನಿಧಾನಿಸದೇ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಚಾಲನೆ ಕೊಟ್ಟರು. 12 ಕೋಟಿ ರೂ. ಅನುದಾನದಲ್ಲಿ ನಿರ್ಮಾಣವಾಗಿದೆ. ಅಂಬರೀಶ್ ಅವರು ಯಾವತ್ತೂ ತಮಗಾಗಿ ಏನು ಬೇಕು ಅಂತ ಬಯಸಿದವರಲ್ಲ. ಯಾರ ಬಳಿಯೂ ಕೈಚಾಚಿದವರಲ್ಲ. ಅವರದ್ದು ಕೊಟ್ಟ ಕೈ, ತಗೊಳ್ಳೊ ಕೈ ಅಲ್ಲ. ಅವರು ಮಂತ್ರಿ ಆಗಿದ್ದಾಗ ಸೈರನ್ ರೆಡ್ ಲೈಟ್ ಇರುವ ವೆಹಿಕಲ್ ಕಳಿಸಿದ್ದರು. ಇದನ್ನ ಮೊದಲು ಕಿತ್ತು ಬಿಸಾಕು ಅಂದಿದ್ದರು. ಇವತ್ತು ಇರುತ್ತೆ ನಾಳೆ ಇರಲ್ಲ, ಇದಕ್ಕೆಲ್ಲಾ ನಾನು ಅಡಿಕ್ಟ್ ಆಗಲ್ಲ ಅಂದಿದ್ದರು. ಎಲ್ಲರಿಗೂ ಅವರು ಇದ್ದಾಗ ಪ್ರೀತಿಸಿದ್ದೀರಿ. ನಿಮ್ಮ ಪ್ರೀತಿ ಒಂದೇ ಸಾಕು ಇನ್ನೇನು ಬೇಕಿಲ್ಲ ಎಂದು ಹೇಳ್ತಿದ್ದವರು. ಅಂಬರೀಶ್ ಎಲ್ಲೇ ಇದ್ರೂ ಅವರಿಗೆ ಈಗ ಖುಷಿಯಾಗುತ್ತೆ. ಅವರು ಎಲ್ಲರ ಪ್ರೀತಿ ಪಡೆದಿದ್ದರು. ಅವರು ನಿಜಕ್ಕೂ ದೇವರ ಮಗ ಎಂದು ಸುಮಲತಾ ಕಣ್ಣೀರಿಟ್ಟರು

About Author

Leave a Reply

Your email address will not be published. Required fields are marked *

You may have missed