ಮತದಾನ ಮಾಡಿದವರಿಗೆ ಹೋಟೆಲ್‌ಗಳಲ್ಲಿ ಉಚಿತ ಉಪಹಾರ: ಎಲ್ಲೆಲ್ಲಿ ಇದೆ ನೋಡೋಣ!

0

ಬೆಂಗಳೂರು : ಮೇ 10ರಂದು ಮತದಾನ ಮಾಡಿ ಗುರುತು ತೋರಿಸಿದವರಿಗೆ ಉಚಿತವಾಗಿ ತಿಂಡಿ, ಸಿನಿಮಾ ಟಿಕೆಟ್‌ಗಳನ್ನು ನೀಡಲು ಕೆಲವು ಹೋಟೆಲ್‌ಗಳು ಮುಂದಾಗಿವೆ. ಈ ಮೂಲಕ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಮುಂದಾಗಿವೆ.

ನೃಪತುಂಗ ರಸ್ತೆಯಲ್ಲಿರುವ ಹೋಟೆಲ್‌ ನಿಸರ್ಗ ಗ್ರ್ಯಾಂಡ್‌ ಮತದಾನ ಮಾಡಿ, ಶಾಯಿ ಗುರುತು ತೋರಿಸಿದವರಿಗೆ ಉಚಿತವಾಗಿ ಬೆಣ್ಣೆ ಖಾಲಿ ದೋಸೆ, ಮೈಸೂರು ಪಾಕ್‌ ಮತ್ತು ತಂಪು ಪಾನಕವನ್ನು ನೀಡಲಿಧಿದೆ.

ಜತೆಗೆ ಮೊದಲ 100 ಮಂದಿ ಹೊಸ ಯುವ ಮತದಾರರಿಗೆ ಉಚಿತವಾಗಿ ಸಿನಿಮಾ ಟಿಕೆಟ್‌ಗಳನ್ನು ಕೂಡ ವಿತರಿಸಲಿಧಿದೆ. ಇದು ಸಾಮಾಜಿಕ ಕಳಕಳಿಯುಳ್ಳ ರಾಜಕೀಯೇತರ ಕಾರ್ಯಕ್ರಮವಾಗಿದೆ. ಮತದಾನ ನಮ್ಮ ಹಕ್ಕು. ಇದನ್ನು ಚಲಾಯಿಸಿ, ಸಮೃದ್ಧ ಭಾರತವನ್ನು ನಿರ್ಮಿಸೋಣ ಎಂದು ಹೋಟೆಲ್‌ ಮಾಲೀಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಾಲುಕ್ಯಕೆಫೆಯಲ್ಲಿಉಚಿತಉಪಹಾರ

ಅಶೋಕ ನಗರದ ಸೇಂಟ್‌ ಮಾರ್ಕ್ಸ್‌ ಜಂಕ್ಷನ್‌ನಲ್ಲಿರುವ ಚಾಲುಕ್ಯ ಸಾಮ್ರಾಟ್‌ ಕೆಫೆ, ಅಂದು ಮತ ಚಲಾಯಿಸಿ ಬಂದವರಿಗೆ ಬೆಳಗ್ಗೆ 7.30 ರಿಂದ 11.30ರವರೆಗೆ ಉಚಿತವಾಗಿ ಉಪಹಾರ ನೀಡಲಿದೆ. ‘ಮುಂಚಿತವಾಗಿ ಮತ ಚಲಾಯಿಸಿ ಮತ್ತು ಚಾಲುಕ್ಯ ಸಾಮ್ರಾಟ್‌ ಕೆಫೆಯಲ್ಲಿಉಚಿತ ಉಪಾಹಾರ ಸೇವಿಸಿ’ ಎಂದು ಪ್ರಕಟಣೆ ಮೂಲಕ ತಿಳಿಸಿದೆ. ಮಾಹಿತಿಗೆ ದೂರವಾಣಿ: 080 2226 1446 ಸಂಖ್ಯೆಯನ್ನೂ ನೀಡಿದೆ.

ಮತದಾನನಮ್ಮೆಲ್ಲರಕರ್ತವ್ಯಎಂದಹೋಟೆಲ್‌ ಸಂಘ

‘ಮತದಾನ ನಮ್ಮ ಹಕ್ಕು. ಮೇ 10ರಂದು ನೀವೂ ಮತ ಹಾಕಿ, ನಿಮ್ಮ ಕುಟುಂಬದವರು ಹಾಗೂ ಮಿತ್ರರಿಗೂ ಮತದಾನ ಮಾಡುವಂತೆ ಮನವಿ ಮಾಡಿ. ಜವಾಬ್ದಾರಿಯುತ ಪ್ರಜೆಯಾಗಿ ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ’ ಎಂದು ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ. ರಾವ್‌ ತಿಳಿಸಿದ್ದಾರೆ.

ಉಚಿತಉಪಹಾರಕ್ಕೆನಿಷೇಧಹೇರಿಆದೇಶಹೊರಡಿಸಿದ್ದಬಿಬಿಎಂಪಿ

ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಈ ಬಾರಿ ಹೋಟೆಲ್‌ಗಳು ಮತದಾರರಿಗೆ ಉಚಿತ ಆಹಾರ ನೀಡುವಂತಿಲ್ಲ. ಇದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಬಿಬಿಎಂಪಿ ಚುನಾವಣಾ ಅಧಿಕಾರಿಗಳು ಸುತ್ತೋಲೆ ಹೊರಡಿಸಿದ್ದರು. ಈ ಸುತ್ತೋಲೆ ಪ್ರಶ್ನಿಸಿ ಹೋಟೆಲ್‌ ಮಾಲೀಕರ ಸಂಘ ಹೈಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ಸದ್ಯ ಬಿಬಿಎಂಪಿ ಆದೇಶ ಹಿಂಪಡೆಯಲಾಗಿದೆ. ಈ ಮೂಲಕ ಹೋಟೆಲ್‌ ಉಚಿತ ತಿಂಡಿ ಕಾರ್ಯಕ್ಕೆ ಎದುರಾಗಿದ್ದ ವಿಘ್ನ ನಿವಾರಣೆಯಾಗಲಿದೆ.

About Author

Leave a Reply

Your email address will not be published. Required fields are marked *

You may have missed