ಎಕ್ಸ್‌ಪ್ರೆಸ್‌ ರೈಲಿನ ಟಿಕೆಟ್ ದರದಲ್ಲಿ ಪರಿಷ್ಕರಣೆ

0

ಬೆಂಗಳೂರು ಹಾಗೂ ಧಾರವಾಡ ನಡುವಿನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರವಷ್ಟೇ ಹಸಿರು ನಿಶಾನೆ ತೋರಿದ್ದಾರೆ. ಆದರೆ, ರೈಲು ಟಿಕೆಟ್‌ ದರವನ್ನು ಭಾರೀ ಏರಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಟಿಕೆಟ್‌ ದರವನ್ನು ನೈರುತ್ಯ ರೈಲ್ವೇ ಪರಿಷ್ಕರಣೆ ಮಾಡಿದೆ.

ಮೊದಲು ಬೆಂಗಳೂರಿನ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಯಶವಂತಪುರ ರೈಲ್ವೇ ನಿಲ್ದಾಣಕ್ಕೆ 410 ರೂ. ನಿಗದಿ ಪಡಿಸಲಾಗಿತ್ತು. ಆದರೆ, ಈಗ ಅದನ್ನು 365 ರೂ.ಗೆ ಇಳಿಕೆ ಮಾಡಲಾಗಿದೆ. ಧಾರವಾಡದಿಂದ ಹುಬ್ಬಳ್ಳಿಗೂ ಕೂಡ 410 ರೂ. ನಿಗದಿಯಾಗಿತ್ತು. ಅದನ್ನು ಕೂಡ 365 ರೂ.ಗೆ ಇಳಿಸಲಾಗಿದೆ. ಆದರೆ, ಈ ನಿಲ್ದಾಣಗಳ ನಡುವೆ ಸಂಚರಿಸಲು ಈ ಮೊದಲು ನಿಗದಿ ಮಾಡಿದ್ದ 545 ರೂ. ಬದಲು 690 ರೂ.ಗೆ ಟಿಕೆಟ್‌ ದರವನ್ನು ಏರಿಕೆ ಮಾಡಲಾಗಿದೆ. ಜೊತೆಗೆ ಪ್ರತಿ ನಿಲ್ದಾಣಗಳ ನಡುವಿನ ಪ್ರಯಾಣ ದರವನ್ನು 20 ರೂ. ಏರಿಸಲಾಗಿದೆ.

ಬೆಂಗಳೂರು – ಧಾರವಾಡ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಟಿಕೆಟ್‌ ದರ : ಪರಿಷ್ಕೃತ

ಮಾರ್ಗ ಎಸಿ ಚೇರ್ಕಾರ್‌ ಎಕ್ಸಿಕ್ಯೂಟಿವ್‌ ಕ್ಲಾಸ್‌
ಬೆಂಗಳೂರು ಕೆಎಸ್‌ಆರ್‌ – ಯಶವಂತಪುರ 365 ರೂ. 690 ರೂ.
ಬೆಂಗಳೂರು – ದಾವಣಗೆರೆ 935 ರೂ. 1760 ರೂ.
ಕೆಎಸ್‌ಆರ್‌ ಬೆಂಗಳೂರು – ಹುಬ್ಬಳ್ಳಿ 1155 ರೂ. 2200 ರೂ.
ಬೆಂಗಳೂರು – ಧಾರವಾಡ 1185 ರೂ. 2265 ರೂ.
ಯಶವಂತಪುರ – ದಾವಣಗೆರೆ 920 ರೂ. 1730 ರೂ.
ಯಶವಂತಪುರ – ಹುಬ್ಬಳ್ಳಿ 1155 ರೂ. 2200 ರೂ.
ಯಶವಂತಪುರ – ಧಾರವಾಡ 1185 ರೂ. 2265 ರೂ.
ದಾವಣಗೆರೆ – ಹುಬ್ಬಳ್ಳಿ 520 ರೂ. 1005 ರೂ.
ದಾವಣಗೆರೆ – ಧಾರವಾಡ 555 ರೂ. 1075 ರೂ.
ಹುಬ್ಬಳ್ಳಿ – ಧಾರವಾಡ 365 ರೂ. 690 ರೂ.

About Author

Leave a Reply

Your email address will not be published. Required fields are marked *

You may have missed