ಸವಾರರೇ ಗಮನಿಸಿ – ಈ ರಸ್ತೆಗಳಲ್ಲಿ ನಾಳೆ ಸಂಚಾರ ಮಾಡಬೇಡಿ

0

ಬೆಂಗಳೂರು :- ವಾಹನ ಸವಾರರೇ ನಾಳೆ ರಸ್ತೆಯಲ್ಲಿ ಓಡಾಡುವ ಮುನ್ನ ತಪ್ಪದೇ ಸುದ್ದಿ ನೋಡಿ.

ಬಕ್ರೀದ್ ಹಬ್ಬದ ಹಿನ್ನೆಲೆ ರಾಜಧಾನಿ ಬೆಂಗಳೂರಿನ ಹಲವೆಡೆ ನಾಳೆ ಸಂಚಾರ ನಿರ್ಬಂಧ ಇರಲಿದೆ. ಹೀಗಾಗಿ ಬೆಳಗ್ಗೆ 8 ರಿಂದ 11.30ರವರೆಗೆ ಸಂಚಾರ ವ್ಯತ್ಯಯ ಇರಲಿದೆ.

1. ಬಸವೇಶ್ವರ ವೃತ್ತದಿಂದ ಸಿಐಡಿ ಜಂಕ್ಷನ್‌ವರೆಗೆ ಸಂಚಾರವನ್ನು ನಿರ್ಬಂಧಿಸಲಾಗಿರುವುದರಿಂದ ಪ್ರಯಾಣಿಕರು ದೇವರಾಜ ಅರಸು ರಸ್ತೆಯನ್ನು ಬಳಸಲು ಕೋರಲಾಗಿದೆ.

2. ಲಾಲ್‌ಬಾಗ್ ಮುಖ್ಯ ಗೇಟ್‌ನಿಂದ ಕಣ್ಣಪ್ಪ ಪೆಟ್ರೋಲ್ ಬಂಕ್‌ವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಪ್ರಯಾಣಿಕರು ಊರ್ವಶಿ, ಸಿದ್ದಯ್ಯ ರಸ್ತೆ, 34ನೇ ಜಂಕ್ಷನ್, ವಿಲ್ಸನ್ ಗಾರ್ಡನ್ ಮುಖ್ಯರಸ್ತೆ ಮತ್ತು ಹೊಸೂರು ರಸ್ತೆಯನ್ನು ಬಳಸಲು ಸೂಚಿಸಲಾಗಿದೆ.

3. ಟೋಲ್ ಗೇಟ್ ಜಂಕ್ಷನ್‌ನಿಂದ ಶಿರಸಿ ವೃತ್ತದವರೆಗೆ ಸಂಚಾರ ನಿರ್ಬಂಧಿಸಿರುವುದರಿಂದ ಸಿರ್ಸಿ ವೃತ್ತದಿಂದ ಬಲ ತಿರುವು ಪಡೆದು ಬಿನ್ನಿ ಮಿಲ್, ಟ್ಯಾಂಕ್ ಬಂಡ್ ರಸ್ತೆ, ಮಾಗಡಿ ರಸ್ತೆ ಮತ್ತು ವಿಜಯನಗರ ಮಾರ್ಗವಾಗಿ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ.

About Author

Leave a Reply

Your email address will not be published. Required fields are marked *

You may have missed