ಪಂಚಖಾತ್ರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಬದ್ಧ -ಡಿ.ಕೆ.ಸುರೇಶ್

0

ಬೆಂಗಳೂರು ; ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಿಸಲು ಬಿಜೆಪಿ ಸಹಕಾರ ನೀಡಬೇಕು ಎಂದು ಸಂಸದ ಡಿ.ಕೆ.ಸುರೇಶ್ ಮನವಿ ಮಾಡಿದ್ದಾರೆ.

ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ 25 ಸಂಸದರು ಇರುವುದರಿಂದ 5 ಕೆ.ಜಿ. ಅಕ್ಕಿ ಕೊಡಿಸುತ್ತಿದ್ದೇವೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿರುವುದಕ್ಕೆ ಟಾಂಗ್ ಕೊಟ್ಟಿದ್ದಾರೆ.

ಕಾಂಗ್ರೆಸ್ ಸರ್ಕಾರ ಪಂಚಖಾತ್ರಿ ಯೋಜನೆಗಳನ್ನು ನೀಡಿವೆ. ಅದರಲ್ಲಿ ಅನ್ನಭಾಗ್ಯವೂ ಒಂದು. ಕರ್ನಾಟಕದಿಂದ ಸಂಸದರೂ ಹಾಗೂ ಸಚಿವರಾಗಿರುವ ಬಿಜೆಪಿಯವರು ರಾಜ್ಯದ ಜನರ ನೆರವಿಗೆ ಬರಬೇಕು. ಅನ್ನಭಾಗ್ಯಕ್ಕೆ ನಾವು ಉಚಿತವಾಗಿ ಅಕ್ಕಿ ನೀಡುವಂತೆ ಕೇಳುತ್ತಿಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿರುವ ಹಣ ಪಾವತಿಸಲು ತಯಾರಿದ್ದೇವೆ. ಬಿಜೆಪಿಯವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು

ರಾಜ್ಯಸರ್ಕಾರ ಪಂಚಖಾತ್ರಿ ಯೋಜನೆಗಳಿಗೆ ಬದ್ಧವಾಗಿದೆ. ಕೇಂದ್ರ ಸರ್ಕಾರದ ಸಹಕಾರ ಸಿಗಲಿ, ಸಿಗದೇ ಇರಲಿ ಅದನ್ನು ಈಡೇರಿಸುವ ಬದ್ಧತೆ ಇದೆ. ಎಲ್ಲೆಲ್ಲಿ ಲಭ್ಯವಿರುತ್ತದೆಯೋ ಅಲ್ಲಿಂದೆಲ್ಲಾ ಅಕ್ಕಿ ಖರೀದಿಸಿ ತರುತ್ತೇವೆ ಎಂದು ಸ್ಪಷ್ಟಪಡಿಸಿದರು.

About Author

Leave a Reply

Your email address will not be published. Required fields are marked *

You may have missed