ಗುತ್ತಿಗೆದಾರರ ಬಿಲ್ ಪಾವತಿಗೆ ಸಾಲ ಪಡೆಯಲು ಬಿಬಿಎಂಪಿಗೆ ರಾಜ್ಯ ಸರ್ಕಾರ ಅನುಮತಿ

0

ಬೆಂಗಳೂರು: ಗುತ್ತಿಗೆದಾರರ ಬಿಲ್ ಪಾವತಿಗೆ 400 ಕೋಟಿ ರೂಪಾಯಿಗಳ ಬ್ಯಾಂಕ್ ಸಾಲ ಪಡೆಯಲು ಬಿಬಿಎಂಪಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಒಂದು ವಿನೂತನ ಯೋಜನೆ ತರುತ್ತಿದೆ. ಅದರಿಂದಲೇ ಎರಡು ವರ್ಷಗಳವರೆಗೆ ಬಾಕಿ ಬಿಲ್ ಪಾವತಿಗೆ ಕಾಯುತ್ತಿರುವ ಗುತ್ತಿಗೆದಾರರಿಗೆ ಹಣ ಪಾವತಿಯಾಗಲಿದೆ.

 

ಗುತ್ತಿಗೆದಾರರು ಬ್ಯಾಂಕ್ ಬಡ್ಡಿದರ ಪಾವತಿಸಲು ಈ ಹೊ ವ್ಯವಸ್ಥೆ ಸಹಕಾರಿಯಗಲಿದೆ. ಒಟ್ಟಾರೆ ಗುತ್ತಿಗೆದಾರರಿಗೆ 2020-2021, 2021-2022 ಹಾಗೂ 2022-2023 ವರ್ಷಗಳಲ್ಲಿನ ಕಾಮಗಾರಿ ಹಣ 2,782 ಕೋಟಿ ರೂ. ಬರಬೇಕಿದೆ. ಗುತ್ತಿಗೆದಾರರ ಬಾಕಿ ಬಿಲ್‌ಗಳ ತೆರವು ಮಾಡಲು ಹೊಸ ಯೋಜನೆಯಲ್ಲಿ ನಗದು ಕೊರತೆ ಇತ್ತು. ಹೀಗಾಗಿಯೇ ರಾಜ್ಯ ಸರ್ಕರ ಹಣ ಪಡೆಯಲು ಬಿಬಿಎಂಪಿ ಸಮ್ಮತಿಸಿದೆ. ಅದಕ್ಕಾಗಿ ವಿನೂತನ ಯೋಜನೆ ಹೊರತರಲು ಬ್ಯಾಂಕ್ ಅನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಬಿಬಿಎಂಪಿಗೆ ಸೂಚಿಸಿದೆ.

About Author

Leave a Reply

Your email address will not be published. Required fields are marked *

You may have missed