ನಿದ್ದೆಗೆ ಭಂಗ ಆರೋಪ: ಹಲವು ವರ್ಷಗಳಿಂದ ಮುಂಜಾನೆ ಹಾಕುತ್ತಿದ್ದ ಸುಪ್ರಭಾತ ಬಂದ್

0

ತುಮಕೂರು: ತುಮಕೂರಿನ ಕ್ಯಾತ್ಸಂದ್ರದ ಪ್ರಸಿದ್ದ ಸಿದ್ಧಗಂಗಾ ಮಠದಲ್ಲಿ ಹಲವು ವರ್ಷಗಳಿಂದ ಮುಂಜಾನೆ ಹಾಕುತ್ತಿದ್ದ ಸುಪ್ರಭಾತವನ್ನು ಇದೀಗ ನಿಲ್ಲಿಸಲಾಗಿದೆ. ಬೆಳಗ್ಗಿನ ಸುಪ್ರಭಾತ ನಿದ್ದೆಗೆ ಭಂಗ ಉಂಟುಮಾಡುತ್ತಿದೆ ಎಂಬ ಆರೋಪ ಕೇಳಿಬಂದಿರೋ ಹಿನ್ನಲೆ ಶ್ರೀಮಠದ ಸ್ವಾಮೀಜಿ ಸುಪ್ರಭಾತ ಹಾಕದಂತೆ ಸೂಚಿಸಿದ್ದಾರೆ ಎನ್ನಲಾಗಿದೆ.ಮುಂಜಾನೆಯ ಸುಪ್ರಭಾತದ ವಿರುದ್ಧ ಕ್ಯಾತ್ಸಂದ್ರ ಪೊಲೀಸ್ ಠಾಣೆ ಮೆಟ್ಟಿಲೇರಿದ ವ್ಯಕ್ತಿ ತುಮಕೂರಿನ ಗಿರಿನಗರ ನಿವಾಸಿಯಾಗಿದ್ದು,ಬೆಂಗಳೂರಿನ ವಿಧಾನಸೌಧದಲ್ಲಿ ಸರ್ಕಾರಿ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ.ಈತನ ವಿರುದ್ಧ ಶ್ರೀಮಠದ ಭಕ್ತರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.

 

ಸಿದ್ದಗಂಗಾ ಮಠದಲ್ಲಿ ಬೆಳಗಿನ ಜಾವ ಪ್ರತಿ ದಿನ ಬೆಳಗಿನ ಜಾವ ಹಾಕುತ್ತಿದ್ದ ಸುಪ್ರಭಾತವೂ ಈಗ ನಿದ್ರೆ ಮಾಡಲು ತೊಂದೆಯಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ಬೆಳಗಿನ ಜಾವ 4.45 ರಿಂದ 5 ಗಂಟೆವೆರೆಗೂ ಹಾಕಲಾಗುವ ಸುಪ್ರಭಾತದ ಧ್ವನಿವರ್ದಕ ನಿದ್ರೆಗೆ ತೊಂದರೆಯಾಗಿ ಕಿರಿಕಿರಿ ಉಂಟು ಮಾಡುತ್ತಿದೆ.ಇದನ್ನ ನಿಲ್ಲಿಸುವಂತೆ ಆ ವ್ಯಕ್ತಿ ಕ್ಯಾತ್ಸಂದ್ರ ಪೊಲೀಸ್ ಠಾಣೆ ಹಾಗೂ ತುಮಕೂರು ಎಸ್​ಪಿ ಕಚೇರಿಗೆ ಮೇಲ್ ಮೂಲಕ ದೂರು ನೀಡಿದ್ದಾರೆ ಎನ್ನಲಾಗಿದೆ.

ಈ ಬಳಿಕ ಕ್ಯಾತ್ಸಂದ್ರ ಪೊಲೀಸರು ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗ ಶ್ರೀಗಳ ಗಮನಕ್ಕೆ ತಂದಿದ್ದಾರೆ.ಮಠದ ಸುಪ್ರಭಾತ ಜನರಿಗೆ ತೊಂದರೆಯಾಗುತ್ತಿದ್ದರೆ ಸುಪ್ರಭಾತ ಹಾಕುವುದು ಬೇಡ ಅಂತಾ ಸ್ವಾಮೀಜಿ ಹೇಳಿದ್ದಾರೆ ಎನ್ನಲಾಗಿದೆ..ಪೊಲೀಸರು ಈ ಬಗ್ಗೆ ಹೇಳಿದ ಕೂಡಲೇ ಶ್ರೀಗಳು ಸರಿ ಆಯ್ತು ಅಂತಾ ಹೇಳಿದ್ದಾರೆ ಎನ್ನಲಾಗಿದೆ. ದೂರು ನೀಡಿರುವ ವ್ಯಕ್ತಿ ಯಾರು,ಏನು,ಅಂತಾ ಮಾಹಿತಿ ‌ನೀಡಿಲ್ಲ.ಸದ್ಯ ವ್ಯಕ್ತಿಯೋರ್ವನ ದೂರಿನ ಹಿನ್ನೆಲೆ ಹಲವು ವರ್ಷಗಳಿಂದ ಕೇಳಿಸುತ್ತಿದ್ದ ಸುಪ್ರಭಾತ ಇದೀಗ ನಿಲ್ಲಿಸಲಾಗಿದೆ.

About Author

Leave a Reply

Your email address will not be published. Required fields are marked *

You may have missed