ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಕಳ್ಳತನ ಮಾಡಿ ಸಿಕ್ಕಿಬಿದ್ದ ಆರೋಪಿ..!

0

ಬೆಂಗಳೂರು: ಬೆಂಗಳೂರಿನ ಮೈಸೂರು ರಸ್ತೆಯ BHEL ಎದುರಿನ ಕಂಪವಿಯೊಂದರಲ್ಲಿ ಸೇಲ್ಸ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಿಂದಲೇ ಗೋಡೌನ್ ನಲ್ಲಿದ್ದ ವಿವಿಧ ಮಾಡಲ್ ನ ಮೊಬೈಲ್ ಗಳನ್ನು ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ಈ ಸಂಬಂಧ ಕಂಪನಿಯ ಮಕ್ ಬೂಲ್ ಅಹಮದ್ ಎಂಬ ವ್ಯಕ್ತಿ ಕೊಟ್ಟ ದೂರಿನ ಅನ್ವಯ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದೂರಿನ ಅನ್ವಯ ತನಿಖೆ ಕೈಗೊಂಡ ಪೊಲೀಸರು 40 ವರ್ಷದ ರಾಜೇಶ್ ಎಂಬ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದೆ. ಇನ್ನೂ ಬಂಧಿತ ವ್ಯಕ್ತಿಯಿಂದ ಆರು ಲಕ್ಷದ 40 ಸಾವಿರ ಮೌಲ್ಯದ 64 ಮೊಬೈಲ್ ಗಳನ್ನು ಜಪ್ತಿ ಮಾಡಲಾಗಿದ್ದು, ಆರೋಪಿ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About Author

Leave a Reply

Your email address will not be published. Required fields are marked *

You may have missed