ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪಿಗಳು ಅರೆಸ್ಟ್

0

ಬೆಂಗಳೂರು: ಲೈವ್ ಬ್ಯಾಂಡ್ ನಲ್ಲಿ ಹೆಣ್ಣು ಮಕ್ಕಳ ಕುಣಿತ ನೋಡಲು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬೆಂಗಳೂರಿನ ಸಿಟಿ ಮಾರ್ಕೆಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಹಮದ್ ಆಲಿಂ, ರಿಜ್ವಾನ್ ಖಾನ್, ವಾಸಿಂ ಅಹಮದ್, ಮಹಮದ್ ಫರಸ್, ತಬ್ರೇಜ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.ಕ್ಯಾಬರಿ ಹೆಂಗಸರ ಹುಚ್ಚಿಗೆ ಬಿದ್ದ ಬಂಧಿತ ಆರೋಪಿಗಳು, ಸಿಕ್ಕ ಸಿಕ್ಕದನ್ನು ಕದ್ದು ಬಳಿಕ ಅದನ್ನು ಮಾರಿ ಬಂದಂತಹ ಹಣದಲ್ಲಿ ಶೋಕಿ ಜೀವನ ಮಾಡುತ್ತಿದ್ದರು.

ಇದೇ ರೀತಿ ಸಿಟಿ ಮಾರ್ಕೆಟ್, ಕಾಟನ್ ಪೇಟೆ, ಡಿಜೆಹಳ್ಳಿ ಸುತ್ತಮುತ್ತ ದರೋಡೆಗೆ ಹೊಂಚು ಹಾಕುತ್ತಿದ್ದರು. ಇದರ ಖಚಿತ ಮಾಹಿತಿ ಪಡೆದ ಸಿಟಿ ಮಾರ್ಕೆಟ್ ಪೊಲೀಸರು ಮಾರಕಾಸ್ತ್ರಗಳ ಸಮೇತ ಆರೋಪಿಗಳನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಆರು ಬೈಕ್, ೮ ಮೊಬೈಲ್ ಫೋನ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About Author

Leave a Reply

Your email address will not be published. Required fields are marked *

You may have missed