ಫೋನ್ ನಲ್ಲಿ ಲೊಕೇಶನ್ ಚೆಕ್ ಮಾಡಿ ಮನೆ ಬಿಟ್ಟು ಹೋದ ಬಾಲಕ

0

ಬೆಂಗಳೂರು: ಮಕ್ಕಳಿಗೆ ಸ್ಮಾರ್ಟ್ ಪೋನ್ ಕೊಡುವ ಪೋಷಕರು ನೋಡಲೇಬೇಕಾದ ಸ್ಟೋರಿ. ಅಮ್ಮನ ಫೋನ್​​ನಲ್ಲಿ ಲೊಕೇಶನ್ ಚೆಕ್ ಮಾಡಿ ಬಾಲಕ ಮನೆಬಿಟ್ಟು ಹೋದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಆರ್​.ಟಿ.ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆದಿತ್ಯ ನಾಪತ್ತೆಯಾದ ಬಾಲಕ ಎಂದು ಗುರುತಿಸಲಾಗಿದೆ. ಅಮ್ಮನ ಮೊಬೈಲ್ ಪಡೆದಿದ್ದ ಬಾಲಕ,

ಮಲ್ಪೆ, ಮೈಸೂರಿನ ಕೆಲವು ಭಾಗಗಳ ಬಗ್ಗೆ ಸರ್ಚ್ ಮಾಡಿದ್ದ. ಅದಾದ ನಂತರ ಮೇ 29 ರಂದು ಕಟ್ಟಿಂಗ್ ಶಾಪ್​ಗೆ ಹೋಗ್ತೀನಿ ಎಂದು ಹೋದ ಬಾಲಕ ಮತ್ತೆ ವಾಪಸ್ ಬಂದಿಲ್ಲ. ಕೊನೆಗೆ ಅಪ್ಪ-ಅಮ್ಮ ಹುಡುಕಾಡಿದಾಗ, ಮನೆಯಲ್ಲಿದ್ದ ಒಂದಷ್ಟು ಬಟ್ಟೆಗಳನ್ನೂ ತುಂಬಿಕೊಂಡು ಹೋಗಿರೋದು ಬೇಳಕಿಗೆ ಬಂದಿದೆ.

ಜೊತೆಗೆ ಸಿಸಿಟಿವಿಯಲ್ಲೂ ಕೆಲವು ದೃಶ್ಯಗಳು ಸೆರೆಯಾಗಿದೆ. ಮಗ ಮಿಸ್ಸಿಂಗ್ ಬೆನ್ನಲ್ಲೇ ಪೋಷಕರು ಜ್ಯೋತಿಷಿಯ ಮೊರೆ ಹೋಗಿದ್ದಾರೆ. ಜ್ಯೋತಿಷಿಯು ದಕ್ಷಿಣ ಕರಾವಳಿ ಭಾಗದಲ್ಲಿ ಇದ್ದಾನೆ ಎಂದು ತಿಳಿಸಿದ್ದರಂತೆ.

ಹೀಗಾಗಿ ದಕ್ಷಿಣ ಕನ್ನಡ, ಉಡುಪಿ ಭಾಗಗಳಲ್ಲಿ ಪೋಷಕರು ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ಎಲ್ಲೂ ಮಗನ ಸುಳಿವು ಸಿಗದ ಹಿನ್ನೆಲೆಯಲ್ಲಿ ಬೆಂಗಳೂರಿನ ಆರ್​ಟಿ ನಗರ ಠಾಣೆಗೆ ದೂರು ನೀಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed