ವೀಸಾ ವೆರಿಫಿಕೇಶನ್​ಗೆಂದು ಬಂದು ಸುಲಿಗೆ ಮಾಡಿದ್ದ ಗ್ಯಾಂಗ್ ಅರೆಸ್ಟ್

0

ಬೆಂಗಳೂರು: ವೀಸಾ ವೆರಿಫಿಕೇಶನ್​ಗೆಂದು ಮನೆಗೆ ಆಗಮಿಸಿ ಸುಲಿಗೆ ಮಾಡಿದ್ದ ಗ್ಯಾಂಗ್ ಅನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳು, ಕುಮಾರಸ್ವಾಮಿ ಲೇಔಟ್ ನ ಮುರುಳಿದರ್ ಎಂಬುವವರ ಮನೆಗೆ ಕಾಲಿಂಗ್ ಬೆಲ್ ಮಾಡಿ ತಾವು ವೀಸಾ ವೆರಿಫಿಕೇಶನ್​ಗೆ ಬಂದಿದ್ದೆವೆ ಎಂದಿದ್ದರು.

ಬಳಿಕ ಆಧಾರ್ ಕಾರ್ಡ್ ಕೊಡಿ ಎಂದು ಕೇಳಿ, ಆಧಾರ್ ಕಾರ್ಡ್ ತರಲು ಹೋಗುತ್ತಿದ್ದಂತೆ ಕೆಳಗೆ ಬಿಳಿಸಿ, ಕೈಕಾಲು ಕಟ್ಟಿ ಹಾಕಿದ್ದಾರೆ.

ನಂತರ ಮನೆಯಲ್ಲಿದ್ದ ಚಿನ್ನದ ಒಡವೆಗಳು ಹಾಗೂ 1 ಲಕ್ಷ ನಗದು ದೋಚಿ ಪರಾರಿಯಾಗಿದ್ದರು. ಈ ಕುರಿತು ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ದೂರಿನ್ವಯ ತನಿಖೆ ಶುರು ಮಾಡಿದ್ದ ಕುಮಾರಸ್ವಾಮಿ ಲೇಔಟ್ ಪೊಲೀಸರು ಇದೀಗ ಮೂವರನ್ನ ಅರೆಸ್ಟ್ ಮಾಡಿದ್ದಾರೆ. ಸ್ವರೂಪ್, ಅತ್ಮಾನಂದ, ಶಾಲಿಂ ಬಂಧಿತ ಅರೋಪಿಗಳು.

ಪಿಜಿ ಒಂದನ್ನು ನಡೆಸುತಿದ್ದ ಸ್ವರೂಪ್, ಅದೇ ಪಿಜಿಯಲ್ಲಿ ವಾಸ ಮಾಡುತ್ತಿದ್ದ ಶಾಲಿಂ ಮತ್ತು ಅತ್ಮಾನಂದ್​ನನ್ನು ಜೊತೆಗೆ ಸೇರಿಸಿಕೊಂಡು ಕೃತ್ಯ ಎಸಗಿದ್ದರು. ವಿಚಾರಣೆ ವೇಳೆ ಇನ್ನು ಹಲವಾರು ಕಡೆ ಸುಲಿಗೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಅರೋಪಿಗಳ ಅರೆಸ್ಟ್ ಮಾಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಳಿಕವೇ ಇನ್ನಷ್ಟು ಸತ್ಯಾಸತ್ಯತೆ ಗೊತ್ತಾಗಲಿದೆ.

About Author

Leave a Reply

Your email address will not be published. Required fields are marked *

You may have missed