ನಸ್ರುಲ್ಲಾಗಂಜ್ ಪಟ್ಟಣದ ಹೆಸರನ್ನು ಭೈರುಂಡಾ ಎಂದು ಬದಲಾಯಿಸಿದ ಸರ್ಕಾರ

0

ಧ್ಯಪ್ರದೇಶ: ಇತ್ತೀಚಿಗೆ ಒಂದೆರಡು ಸ್ಥಳಗಳಿಗೆ ಮರುನಾಮಕರಣ ಮಾಡಿದ ನಂತರ, ಮಧ್ಯಪ್ರದೇಶ ರಾಜ್ಯ ಸರ್ಕಾರ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಬುಧ್ನಿ ವಿಧಾನಸಭಾ ಕ್ಷೇತ್ರದಲ್ಲಿರುವ ನಸ್ರುಲ್ಲಾಗಂಜ್ ಎಂಬ ಮತ್ತೊಂದು ಪಟ್ಟಣದ ಹೆಸರನ್ನು ಬದಲಾಯಿಸಿದೆ.

ಪಟ್ಟಣಕ್ಕೆ ಭೇರುಂಡ ಎಂದು ಹೆಸರಿಡಲಾಗಿದೆ. ಇದು ಸೆಹೋರ್ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತದೆ. ಈ ಕುರಿತು ಕಳೆದ ವರ್ಷ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಗೃಹ ವ್ಯವಹಾರಗಳ ಸಚಿವಾಲಯ(MHA) ಪ್ರಸ್ತಾವನೆಯನ್ನು ಅನುಮೋದಿಸಿದ ನಂತರ,

ರಾಜ್ಯವು ಅದಕ್ಕೆ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿತು. ಫೆಬ್ರವರಿ 2022 ರಲ್ಲಿ, ಮಧ್ಯಪ್ರದೇಶ ಸರ್ಕಾರವು ಹೋಶಂಗಾಬಾದ್ ಜಿಲ್ಲೆಯ ಹೆಸರನ್ನು ನರ್ಮದಾಪುರ ಎಂದು ಮತ್ತು ಬಾಬಾಯಿ ಪಟ್ಟಣದ ಹೆಸರನ್ನು ಮಖನ್ ನಗರ ಎಂದು ಬದಲಾಯಿಸಿತು. ಬಾಬಾಯಿ ಖ್ಯಾತ ಕವಿ ಮಖನ್‌ಲಾಲ್ ಚತುರ್ವೇದಿಯವರ ಜನ್ಮಸ್ಥಳವಾಗಿದೆ.ನವೆಂಬರ್ 2021 ರಲ್ಲಿ, ಭೋಪಾಲ್‌ನ ಹಬೀಬ್‌ಗಂಜ್ ರೈಲು ನಿಲ್ದಾಣಕ್ಕೆ ಬುಡಕಟ್ಟು ರಾಣಿ ಕಮಲಾಪತಿ ಅವರ ಹೆಸರನ್ನು ಮರುನಾಮಕರಣ ಮಾಡಲಾಯಿತು.

About Author

Leave a Reply

Your email address will not be published. Required fields are marked *

You may have missed