ಬೈಕ್ ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಕಳ್ಳ ಅರೆಸ್ಟ್

0

ಬೆಂಗಳೂರು: ಬೆಂಗಳೂರಿನ ಜಯನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಭಾರೀ ಬೈಕ್​ ಕಳ್ಳತನ ಕೇಸ್​​​ ಬೆಳಕಿಗೆ ಬಂದಿವೆ. ಈ ಬೆನ್ನಲ್ಲೇ ಎಚ್ಚೆತ್ತು ಕಾರ್ಯಪ್ರವೃತ್ತರಾದ ಜಯನಗರ ಪೊಲೀಸ್ರು ಖತರ್ನಾಕ್​​ ಬೈಕ್​ ಕಳ್ಳನನ್ನು ಅರೆಸ್ಟ್​ ಮಾಡಿದ್ದಾರೆ.ಮುರುಳಿ ಅರೆಸ್ಟ್​ ಆದ ಖತರ್ನಾಕ್​ ಕಳ್ಳ.

ಈತನಿಂದ ಬರೋಬ್ಬರಿ 22 ಲಕ್ಷ ಮೌಲ್ಯದ 26 ಬೈಕ್​​ಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಕಳ್ಳನ ವಿರುದ್ಧ ಜಯನಗರ ಪೊಲೀಸ್​ ಠಾಣೆಯಲ್ಲಿ 8 ಕೇಸ್​​, ಸಿದ್ದಾಪುರ ಪೊಲೀಸ್​ ಸ್ಟೇಷನ್​​ನಲ್ಲಿ 4, ತಿಲಕನಗರ ಪೊಲೀಸ್​​ ಠಾಣೆಯಲ್ಲಿ 3 ಕೇಸ್​ ದಾಖಲಾಗಿವೆ. ಇನ್ನು, ಬನಶಂಕರಿ ಪೊಲೀಸ್​​ ಠಾಣೆಯಲ್ಲೂ ಒಂದು ಕೇಸ್​ ಆಗಿದೆ. ಈ ಕೇಸ್​​ಗಳ ಪ್ರಮುಖ ಆರೋಪಿ ಖತರ್ನಾಕ್​​ ಕಳ್ಳ ಮುರುಳಿಯನ್ನು ಜಯನಗರ ಪೊಲೀಸ್ರು ಅರೆಸ್ಟ್​ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed