ಉದ್ಯಮಿ ಮನೆಯನ್ನು ದೋಚಿದ್ದ ಮೂವರು ಆರೋಪಿಗಳು ಅರೆಸ್ಟ್..!

0

ಬೆಂಗಳೂರು: ಕೋರಮಂಗಲ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ, ಉದ್ಯಮಿ ಮನೆಯನ್ನು ದೋಚಿದ್ದ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಪ್ರಫುಲ್ಲಾ ಮಲ್ಲಿಕ್, ಭಕ್ತ ಹರಿ‌ ಮಲ್ಲಿಕ್ ಹಾಗೂ ನಬೀನ್ ಸೊನಾರಿ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಒಡಿಶಾ ಭಾಗದ ಕುಖ್ಯಾತ ದರೋಡೆಕೋರರ ಸಹೋದರರಿಬ್ಬರ ಹಿನ್ನೆಲೆಯಿಂದ ಪ್ರೇರೇಪಿತರಾಗಿದ್ದ ಆರೋಪಿಗಳು‌, ಅದೇ ಮಾದರಿ ತಾವೂ ಸಹ ದರೋಡೆ ಮಾಡಿ ದಿಢೀರ್ ಶ್ರೀಮಂತರಾಗುವ ಕನಸು‌ ಕಂಡಿದ್ದರು. ಅದರಂತೆ ಕೋರಮಂಗಲದ 3ನೇ ಬ್ಲಾಕ್‌ನ ಉದ್ಯಮಿಯೊಬ್ಬರ ಕುಟುಂಬ ಅನ್ಯ ರಾಜ್ಯಕ್ಕೆ ಪ್ರವಾಸಕ್ಕೆ ಹೋಗಿದ್ದ ಸಮಯ‌ ಬಳಸಿಕೊಂಡು ಮನೆಗೆ ಆರೋಪಿಗಳು ನುಗ್ಗಿದ್ದರು. ಸೆಕ್ಯುರಿಟಿ ಗಾರ್ಡ್,

ಸಿಸಿಟಿವಿ ಕ್ಯಾಮೆರಾಗಳಿಲ್ಲದಿದ್ದರಿಂದ ಮನೆಯಲ್ಲಿದ್ದ ಡೈಮೆಂಡ್ ಚಿನ್ನಾಭರಣ ಬೆಳ್ಳಿ ನಾಣ್ಯಗಳು 3 ಲಕ್ಷ ಮೌಲ್ಯದ ಒಮೇಗಾ ವಾಚ್, ಲ್ಯಾಪ್ ಟ್ಯಾಪ್ ಕ್ಯಾಮರಾ ಹಾಗೂ ಟ್ಯಾಬ್ ದೋಚಿ ಪರಾರಿಯಾಗಿದ್ದರು. ಇತ್ತ ಮನೆಯಲ್ಲಿ ದರೋಡೆ ಆಗಿರುವುದನ್ನ ತಿಳಿದ ಮಾಲೀಕರು ಕೋರಮಂಗಲ ಠಾಣೆಗೆ ದೂರು‌ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಪೊಲೀಸರು ಆರಂಭಿಸಿದ್ದರು. ಬರೋಬ್ಬರಿ 300 ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ಶೋಧಿಸಿದ್ದ ಪೊಲೀಸರು ಅಂತಿಮವಾಗಿ ಒಡಿಶಾದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಚಿನ್ನಾಭರಣ ಸೇರಿದಂತೆ ಬರೋಬ್ಬರಿ 70 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು ತೀವ್ರ ವಿಚಾರಣೆ ಮುಂದುವರಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed