ಮತದಾನ ಆರಂಭ, ಉತ್ಸಾಹದಿಂದ ಮತಗಟ್ಟೆಗಳತ್ತ ಬರುತ್ತಿರುವ ಜನ

0

ಬೆಂಗಳೂರು: ರಾಜ್ಯದಾದ್ಯಂತ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಆರಂಭಗೊಂಡಿದೆ. ಸಿದ್ದಲಿಂಗ ಸ್ವಾಮೀಜಿ, ನಟ ಪ್ರಕಾಶ್ ರಾಜ್ , ಹಾಸನದಲ್ಲಿ ಅಭ್ಯರ್ಥಿ ಪ್ರೀತಂ ಗೌಡ, ಸಚಿವ ಅಶ್ವಥ್ ನಾರಾಯಣ್ ಈಗಾಗಲೇ ಮತ ಚಲಾವಣೆ ಮಾಡಿದ್ದಾರೆ.

ಇನ್ನು ಮತಗಟ್ಟೆ ಸಂಖ್ಯೆ 23, ಮೈಸೂರಿನ ಚಾಮುಂಡಿಪುರಂನಲ್ಲಿ 96 ವರ್ಷದ ಅಜ್ಜಿ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ಇನ್ನು ವಚನಾನಂದ ಸ್ವಾಮೀಜಿ ಬೆಂಗಳೂರಿನ ಭೂಪಸಂದ್ರದಲ್ಲಿ ಮತ ಚಲಾವಣೆ ಮಾಡಿದ್ದಾರೆ.

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಸರ್ಕಾರಿ ಕನ್ನಡ – ಆಂಗ್ಲ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮತದಾನ ಆರಂಭಗೊಂಡಿದೆ. ಮತದಾನಕ್ಕೆ ಸರದಿಯ ಸಾಲಲ್ಲಿ ಬಂದು ಮತದಾರರು ನಿಂತಿದ್ದಾರೆ. ಮೊಮ್ಮಗನ ಜೊತೆ ಬಂದು ಅಜ್ಜಿ, ಮೀನಾ ಬಾಯಿ 76 ವರ್ಷದವರು ಮತಚಲಾಯಿಸಿದರು.

ಜನಪ್ರತಿನಿಧಿಗಳಿಂದಮತಚಲಾವಣೆ
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಶಿವಮೊಗ್ಗದ ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಹಾಗೂ ವಿಜಯೇಂದ್ರ, ಸಚಿವರಾದ ಆರಗ ಜ್ಞಾನೇಂದ್ರ, ಸುಧಾಕರ್, ಮತಚಲಾವಣೆ ಮಾಡಿದ್ದಾರೆ.

ಮತಚಲಾಯಿಸಿದರಾಜಮಾತೆಪ್ರಮೋದಾದೇವಿ
ಬೆಳಗ್ಗೆಯೇ ಬಂದು, ಸರತಿ ಸಾಲಲ್ಲಿ ನಿಂತು ಮೈಸೂರಿನ ರಾಜಮಾತೆ ಪ್ರಮೋದಾದೇವಿ ಒಡೆಯರ್‌ ಮತದಾನಕ್ಕೆನಕಾಯುತ್ತಿದ್ದಾರೆ. ಮತಗಟ್ಟೆಯಲ್ಲಿದ್ದ ಸಾರ್ವಜನಿಕರು ಖುಷಿಯಿಂದ ನಮಸ್ಕರಿಸಿದರು. ಪ್ರಮೋದಾದೇವಿ ಎಲ್ಲರಿಗೂ ಪ್ರತಿವಂದನೆ ಮಾಡಿದರು.

ಮತಚಲಾಯಿಸಿದತುಂಬುಗರ್ಭಿಣಿ
ಇಂದು 9 ಗಂಟೆಗೆ ಹೆರಿಗೆಯ ಸಮಯವನ್ನು ವೈದ್ಯರು ಕೊಟ್ಟಿದ್ದರೂ, ಅದಕ್ಕಿಂತ ಮೊದಲೇ ಮತಚಲಾವಣೆ ಮಾಡಬೇಕೆಂದು ತುಂಬು ಗರ್ಭಿಣಿಯೊಬ್ಬರು ಇನ್ನು ಯಶವಂತಪುರದಲ್ಲಿ 7 ಗಂಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರು.
ಕೊಪ್ಪಳಜಿಲ್ಲೆಯಲ್ಲಿಮತಯಂತ್ರದೋಷ
ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಮತಯಂತ್ರದಲ್ಲಿ ದೋಷ ಕಂಡುಬಂದಿದ್ದು, ಮತದಾನ ವಿಳಂಬವಾಗಿದೆ. ಯಂತ್ರ ಬದಲಾವಣೆ ಮಾಡಲು
ಸಿಬ್ಬಂದಿಗಳು ಪ್ರಯತ್ನಿಸುತ್ತಿದ್ದಾರೆ.

About Author

Leave a Reply

Your email address will not be published. Required fields are marked *

You may have missed