ಬೊಮ್ಮಾಯಿ ಬಜೆಟ್ ನಿರೀಕ್ಷೆಗಳೇನು? ಏನೆಲ್ಲಾ ಘೋಷಣೆ ಆಗಬಹುದು?

0

ಬೆಂಗಳೂರು: ಇಂದು ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸುತ್ತಿದ್ದಾರೆ. ಇದು ಈ ಸರ್ಕಾರದ ಕೊನೆಯ ಬಜೆಟ್ ಆಗಿದ್ದು, ಕೆಲ ಮಹತ್ವದ ಯೋಜನೆಗಳ ಘೋಷಣೆ ಮಾಡುವ ಸಾಧ್ಯತೆ ಇದೆ. ಸರ್ಕಾರದ ಮೂಲಗಳ ಪ್ರಕಾರ ನಿರೀಕ್ಷೆಯಂತೆ ಬೊಮ್ಮಾಯಿ ಅವರಿಂದ ಕೆಲ ಆಕರ್ಷಕ ಯೋಜನೆಗಳ ಘೋಷಣೆಯಾಗಲಿದೆ (Big Announcements).

ಬಹಳ ಮಹತ್ವದ ನಿರ್ಧಾರದಲ್ಲಿ ಸರ್ಕಾರ ಮಹಿಳೆಯರಿಗೆಂದು ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಬಹುದು.

ರೈತರಿಗೆ ಹೆಚ್ಚು ಸಾಲ ಸೌಲಭ್ಯ, ಗೃಹಿಣಿಯರಿಗೆ ಗೌರವಧನ, ರೈತರಿಗೆ ಡೀಸೆಲ್ ಸಹಾಯಧನದ ವಿಸ್ತರಣೆ, ರಾಜ್ಯದ ಎಲ್ಲಾ ಹೋಬಳಿಗಳಲ್ಲಿ ನಮ್ಮ ಕ್ಲಿನಿಕ್ಗಳ ಸ್ಥಾಪನೆ, 10 ಸಾವಿರ ಶಾಲಾ ಕಟ್ಟಡಗಳ ನಿರ್ಮಾಣ ಇತ್ಯಾದಿ ಘೋಷಣೆಗಳನ್ನು ಬೊಮ್ಮಾಯಿ ತಮ್ಮ ಕೊನೆಯ ಬಜೆಟ್ನಲ್ಲಿ ಮಾಡುವ ನಿರೀಕ್ಷೆ ಇದೆ. ಕುಲಕಸುಬುಗಳನ್ನ ಮುಂದುವರಿಸಲು ಉತ್ತೇಜಿಸುವಂತಹ ಕ್ರಮವನ್ನು ಸರ್ಕಾರ ಕೈಗೊಳ್ಳಬಹುದು ಎನ್ನಲಾಗುತ್ತಿದೆ.
ಬೆಂಗಳೂರು ಅಭಿವೃದ್ಧಿಗೆ 10 ಸಾವಿರ ಕೋಟಿ ರೂ ಮೀಸಲು, ಆಶಾ ಕಾರ್ಯಕರ್ತೆಯರ ಸಂಬಳ ಏರಿಕೆ ಮಾಡಲು ಬಜೆಟ್ನಲ್ಲಿ ನಿರ್ಧರಿಸಬಹುದು. ಸರ್ಕಾರಿ ನೌಕರರ 7ನೇ ವೇತನ ಆಯೋಗ ಜಾರಿಯ ಕನಸು ನೆರವೇರಬಹುದು.

ಈ ಬಜೆಟ್ನಲ್ಲಿ ಏನೆಲ್ಲಾ ಘೋಷಣೆ ಆಗಬಹುದು ಎಂಬ ವಿವರ ಈ ಕೆಳಕಂಡಂತಿದೆ:
• ಗೃಹಲಕ್ಷ್ಮೀ ಯೋಜನೆ: ಇದರಲ್ಲಿ ಗೃಹಿಣಿಯರಿಗೆ 1,500 ರೂ ಸಹಾಯಧನ
• ರೈತರಿಗೆ ಶೂನ್ಯ ಬಡ್ಡಿದರದಲ್ಲಿ ನೀಡಲಾಗುವ ಸಾಲ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ
• ಕಾಯಕ ಯೋಜನೆ: ಕುಲಕಸುಬು ಆಧಾರಿತ ಸಾಂಪ್ರದಾಯಿಕ ವೃತ್ತಿ ಮಾಡುವವರಿಗೆ 50 ಸಾವಿರ ರೂ ಪ್ರೋತ್ಸಾಹ ಧನ
• ರೈತರಿಗೆ ಡೀಸೆಲ್ ಸಹಾಯಧನ ವಿಸ್ತರಣೆ
• ಗಾಣಿಗ, ಮಡಿವಾಳ, ಮೇದಾರ, ನೇಕಾರ, ಕುಂಬಾರ, ಅಕ್ಕಸಾಲಿಗ ಸಮುದಾಯಗಳಿಗೆ ಪ್ರತ್ಯೇಕ ನಿಗಮ
• ನೂತನ ಬೆಂಬಲ ಬೆಲೆ ವಿಧಾನ: ಒಂದು ಎಕರೆಯಲ್ಲಿ ಯಾವುದೇ ಬೆಳೆ ಬೆಳೆಯಲು ಎಷ್ಟು ಖರ್ಚಾಗುತ್ತೆ, ಅದಕ್ಕೆ ಎಷ್ಟು ಲಾಭ ಕೊಡಬೇಕು ಎಂದು ನಿರ್ಧರಿಸಿ ಬೆಂಬಲ ಬೆಲೆ ನಿಗದಿ ಮಾಡಬಹುದು.
• ಅಂಗನವಾಡಿ ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಳ
• ರಾಜ್ಯದ ಎಲ್ಲಾ ಹೋಬಳಿಗಳಲ್ಲೂ ನಮ್ಮ ಕ್ಲಿನಿಕ್ ಸ್ಥಾಪನೆ
• ಮಹಿಳಾ ಸ್ವಸಹಾಯ ಸಂಘಗಳಿಗೆ ಸ್ತ್ರೀ ಶಕ್ತಿ ಯೋಜನೆ ಅಡಿ 5 ಲಕ್ಷ ರೂ ಹಂಚಿಕೆ
• ಸ್ವ ಸಹಾಯ ಸಂಘಗಳ ಬಡ್ಡಿ ಅಥವಾ ಸಾಲಗಳನ್ನು ಮನ್ನಾ ಮಾಡಬಹುದು.
• ಎನ್‌ಇಪಿ ಶಿಕ್ಷಣವನ್ನು ಪ್ರಾಥಮಿಕ ಶಿಕ್ಷಣ ಹಂತದಲ್ಲೂ ಅನುಷ್ಠಾನಕ್ಕೆ ತರುವುದು
• 15 ಸಾವಿರ ಶಾಲಾ ಶಿಕ್ಷಕರ ನೇಮಕ
• ರಾಜ್ಯದಲ್ಲಿ 8-10 ಸಾವಿರ ಶಾಲಾ ಶಿಕ್ಷಕರ ನೇಮಕ
• ವಿವೇಕ ಯೋಜನೆ ಅಡಿ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವುದು
• ನೀರಾವರಿ ಯೋಜನೆಗಳಿಗೆ ಹೆಚ್ಚು ಅನುದಾನ
• ಬೆಂಗಳೂರು ಅಭಿವೃದ್ಧಿಗೆ 10 ಸಾವಿರ ಕೋಟಿ ರೂ
• ಬೆಂಗಳೂರು ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ವಿಶೇಷ ಯೋಜನೆ
• 12 ಕಡೆ ಟ್ರಾಫಿಕ್-ಫ್ರೀ ಕಾರಿಡಾರ್ ನಿರ್ಮಾಣ
• ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ವರದಿ ಅನುಷ್ಠಾನ ಘೋಷಣೆ

About Author

Leave a Reply

Your email address will not be published. Required fields are marked *

You may have missed