ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೇಶವ್ಯಾಪಿ ಭಯೋತ್ಪಾದಕ ಕೃತ್ಯಗಳು ನಡೆದಿತ್ತು: ಶೋಭಾ ಕರಂದ್ಲಾಜೆ

0

ಬೆಂಗಳೂರು: ಅಮಿತ್ ಶಾ ಪರ ಜನಸಾಗರ ಕಂಡು ಕಾಂಗ್ರೆಸ್ ಪಕ್ಷ ಬೆಚ್ಚಿ ಬಿದ್ದಿದೆ ಎಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ( Union Minister Shobha Karandlaje) ಹೇಳಿದ್ದಾರೆ. ಈ ಸಂಬಂಧ ಮಲ್ಲೇಶ್ವರದ ಮಾಧ್ಯಮ ಕೇಂದ್ರದಲ್ಲಿ(Malleshwar Media Centre) ಮಾತನಾಡಿದ ಅವರು, ಸರ್ದಾರ್ ವಲ್ಲಭಭಾಯಿ ಪಟೇಲ್ (Sardar Vallabhbhai Patel)ನಂತರ ದೇಶ ಕಂಡ ಅತ್ಯಂತ ದಕ್ಷ ಗೃಹ ಸಚಿವ ಅಮಿತ್ ಷಾ.

ಭಯೋತ್ಪಾದಕ ಚಟುವಟಿಕೆಗಳನ್ನು ಮಟ್ಡಹಾಕುವ ಜತೆಗೆ ಪಿಎಫ್ ಐ ನಂತಹ ವಿಚ್ಛಿದ್ರಕಾರಿ ಶಕ್ತಿಗಳನ್ನು ಹೆಡೆಮುರಿ ಕಟ್ಟಿದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೇಶವ್ಯಾಪಿ‌ ಭಯೋತ್ಪಾದಕ ಕೃತ್ಯಗಳು ನಡೆದವು.

ಸಿದ್ದರಾಮಯ್ಯ ಅಧಿಕಾರದ ಅವಧಿಯಲ್ಲಿ ಅಶಾಂತಿ, ಗಲಭೆಗಳು ಸೃಷ್ಟಿಯಾಗಿದ್ಸವು. ಪಿಎಫ್ ಐ ವಿರುದ್ಧದ 175 ಕೇಸ್ ಗಳನ್ನು ಹಿಂಪಡೆದು 1,700 ಭಯೋತ್ಪಾದಕರನ್ನು ಬಿಡುಗಡೆ ಮಾಡಿ ಕುಮ್ಮಕ್ಕು ಕೊಟ್ಟಿದ್ದು ಯಾರು ? ಎನ್ನುವುದು ರಾಜ್ಯಕ್ಕೆ ಗೊತ್ರಿದೆ. ಟಿಪ್ಪು ಜಯಂತಿ ಸಂಘರ್ಷ, ಜಾತಿಗಳ ಮಧ್ಯೆ ಜಗಳ ಹುಟ್ಟಿಹಾಕಲಾಗಿತ್ತು ಎಂದು ಆರೋಪಿಸಿದರು. ಈಗಲೂ ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಬಂದರೆ ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ (Prohibition of Conversion Act)ವಾಪಸ್ ಪಡೆಯುವುದಾಗಿ ಹೇಳುತ್ತಿದ್ದು,

ಅಶಾಂತಿಗೆ ಕಾರಣವಾದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಶೋಭಾ ಕರಂದ್ಲಾಜೆ ( Union Minister Shobha Karandlaje)ಹೇಳಿದರು. ಇನ್ನೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾವುದೇ ಜಾತಿ-ವರ್ಗಕ್ಕೆ ಸೀಮಿತರಲ್ಲ. ಅಂತಹ ರಾಜಕಾರಣವನ್ನೂ ಮಾಡಿಲ್ಲ. ಜಗದೀಶ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಟೋಪಿ ಹಾಕಿಕೊಂಡ ನಂತರ ಜಾತಿ ನೆನಪಾಗಿದೆ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಗೆದ್ದಿದ್ದಾರೆಯೇ ಹೊರತು ಜಾತಿ ನಾಯಕರಾಗಿ ಅಲ್ಲವೆಂದು ಶೆಟ್ಟರ್​​ಗೆ ಕುಟುಕಿದರು.

About Author

Leave a Reply

Your email address will not be published. Required fields are marked *

You may have missed