ಶಕ್ತಿ ಯೋಜನೆಗೆ ಹೊಡೆತ ಕೊಡಲಿದೆಯಾ RTO ರೂಲ್ಸ್

0

ಬೆಂಗಳೂರು: ಶಕ್ತಿ ಯೋಜನೆ ಅನುಷ್ಠಾನ ಮಾಡಿ ಅದರ ಸಕ್ಸೆಸ್ ಗೆ ತಲೆ ಕೆಡಿಸಿಕೊಂಡು ಕೆಲಸ ಮಾಡುತ್ತಿದೆ ಸರ್ಕಾರ. ಸಾರಿಗೆ ನಿಗಮಗಳು ಕೂಡ ಇದಕ್ಕಾಗಿ ಅಹಿರ್ನಿಷಿ ದುಡೀತಿವೆ. ಆದರೆ ಶಕ್ತಿ ಎಫೆಕ್ಟ್ ಎನ್ನುವಂತೆ ಬಹುತೇಕ ಬಸ್ ಗಳು ಪ್ರಯಾಣಿಕರಿಂದ ತುಂಬಿ ತುಳುಕಲಾರಂಬಿಸಿವೆ.ಆದರೆ ಶಕ್ತಿ ಯೋಜನೆಗೆ ಮರ್ಮಾಘಾತ ನೀಡುವಂತ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ.ಅದು ಆರ್ ಟಿ ಓ ಗೆ ಸಂಬಂಧಿಸಿದ ವಿಚಾರ.ಅಂದ್ಹಾಗೆ ಅದು ಯಾವ ವಿಷಯ..ಶಕ್ತಿಗೂ ಅದಕ್ಕೂ ಸಂಬಂಧವೇನು..?ಇದರಿಂದ ಯೋಜನೆಗೆ ಯಾವ್ ರೀತಿಯಲ್ಲಿ ಪೆಟ್ಟು ಬೀಳ್ತಿದೆ ಎನ್ನುವುದರ ಡೀಟೈಲ್ಸ್ ಇಲ್ಲಿದೆ.

ರಾಜ್ಯದಲ್ಲಿ ಶಕ್ತಿ ಯೋಜನೆಯ ಹವಾ ಸಿಕ್ಕಾಪಟ್ಟೆ ಹೆಚ್ಚಾಗಿದೆ.ಯೋಜನೆ ಬಹುತೇಕ ಯಶಸ್ವಿಯು ಆಗಿದೆ.ಬಸ್ ಗಳೆಲ್ಲಾ ಮಹಿಳಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ.ಆದರೆ ಇದೆಲ್ಲದರ ನಡುವೆಯೇ ಶಾಕಿಂಗ್ ಎನ್ನುವಂತ ಸುದ್ದಿಯೊಂದು ಹೊರಬಿದ್ದಿದೆ. ಅಗತ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿರುವುದು ಮೋಟಾರ್ ವೆಹಿಕಲ್ ಆಕ್ಟ್ ನ ಸ್ಪಷ್ಟ ಉಲ್ಲಂಘನೆ.ಹಾಗಾಗಿ ಸಾರಿಗೆ ನಿಗಮಗಳಿಗೆ ನೊಟೀಸ್ ನೀಡಲು,ಅದಕ್ಕೂ ಎಚ್ಚೆತ್ತುಕೊಳ್ಳದಿದ್ದರೆ ದಂಡ ವಿಧಿಸುವ ಚಿಂತನೆ ನಡೆಸಿದೆಯಂತೆ.

ಅಂದ್ಹಾಗೆ ಮೊಟಾರ್ ವೆಹಿಕಲ್ ಆಕ್ಟ್ ಬಸ್ಗ ಳಲ್ಲಿ ಇಂತಿಷ್ಟೆ ಪ್ರಯಾಣಿಕರನ್ನು ಹೊತ್ತೊಯ್ಯಬೇಕೆನ್ನುವ ನಿಯಮವನ್ನು ಉಲ್ಲೇಖಿಸುತ್ತದೆ.ಅದರ ಪ್ರಕಾರ ಹೆಚ್ಚೆಂದರೆ 55 ಸಿಟ್ಟಿಂಗ್ ಹಾಗು 15 ಸ್ಟ್ಯಾಂಡಿಂಗ್ ನಲ್ಲಿ ಪ್ರಯಾಣಿಕರು ಸಂಚರಿಸಲು ಅವಕಾಶ ನೀಡಿದೆ.ಆದರೆ ಶಕ್ತಿ ಯೋಜನೆ ಎಫೆಕ್ಟ್ ಎನ್ನುವಂತೆ ಬಸ್ ಗಳೆಲ್ಲಾ ತುಂಬಿ ತುಳುಕುತ್ತಿವೆ.ಹಾಗಾಗಿ ಹೆಚ್ಚುವರಿಯಾಗಿ ಸಂಚರಿಸುವ ಪ್ರಯಾಣಿಕರಿಗೆ ಸೆಕ್ಷನ್ 194-ಎ ನ ಅನ್ವಯ ಪ್ರತಿ ಪ್ರಯಾಣಿಕರಿಗೆ 200 ರು ದಂಡ ವಿಧಿಸಬಹುದಾಗಿದೆ.

ಶಕ್ತಿ ಯೊಜನೆ ಜಾರಿ ಬಂದ್ಮೇಲೆ ಬಸ್ ಗಳಲ್ಲಿ ನೂರಾರು ಪ್ರಯಾಣಿಕರು ಸಂಚರಿಸುತ್ತಿದ್ದಾರೆ,ಆಕ್ಟ್ ನ ಅನ್ವಯ ಪ್ರಯಾಣಿಕರ ಮೇಲೆ ದಂಡ ಪ್ರಯೋಗ ಮಾಡಿದ್ರೆ ಅದು ನೇರವಾಗಿ ಸರ್ಕಾರಕ್ಕೆ ಕೆಟ್ಟ ಹೆಸರನ್ನು ತರುವ ಸಾಧ್ಯತೆಗಳಿವೆ.ಶಕ್ತಿ ಯೋಜನೆ ಮೇಲೆನೇ ದುಷ್ಪರಿಣಾಮವನ್ನೂ ಬೀರಬಹುದು..ಇದೆಲ್ಲದರ ಎಫೆಕ್ಟ್ ಸರ್ಕಾರಕ್ಕೆ ಉಂಟಾಗುವುದರಿಂದ ಆರ್ ಟಿ ಓ ದಂಡ ಪ್ರಯೋಗಿಸುವ ದುಸ್ಸಾಹಸಕ್ಕೆ ಕೈ ಹಾಕುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಆಕ್ಟ್ ಉಲ್ಲಂಘನೆಯಾಗುತ್ತಿರುವುದರಿಂದ ದಂಡಕ್ಕೆ ಕೇವಲ ಪ್ರಯಾಣಿಕರಷ್ಟೇ ಭಾಜನವಾಗೊಲ್ಲ.ಅವರನ್ನು ಹೊತ್ತೊಯ್ಯುವ ಡ್ರೈವರ್-ಕಂಡಕ್ಟರ್ ಗೂ ದಂಡ ಪ್ರಯೋಗವಾಗುವ ಆತಂಕವಿದೆ.ಇಂಥಾ ಸಂದಿಗ್ಧ ಸನ್ನಿವೇಶದಲ್ಲಿ ಸರ್ಕಾರ ಎಂಥಾ ತೀರ್ಮಾನಕ್ಕೆ ಬರಲಿದೆ.ಆರ್ ಟಿಐ ತನ್ನ ನಿಯಮಗಳನ್ನು ಪಾಲಿಸುತ್ತೋ ಅಥವಾ ಅದರಲ್ಲಿ ರಿಯಾಯತಿ ನೀಡುತ್ತೋ ಕಾದುನೋಡಬೇಕಿದೆ.

About Author

Leave a Reply

Your email address will not be published. Required fields are marked *

You may have missed