ಮುಸ್ಲಿಂ ಯುವತಿಯರು ಐಬ್ರೋ ಮಾಡಬಾರದು: ದರ್ಗಾ ಅಲಾ ಹಜರತ್ ಫತ್ವಾ ಆದೇಶ

0

ಕ್ನೋ: ಮುಸ್ಲಿಂ ಯುವತಿಯರು ಐಬ್ರೋ (Eyebrow) ಮಾಡಬಾರದು ಎಂದು ಉತ್ತರ ಪ್ರದೇಶದ (Uttar Pradesh) ದರ್ಗಾ ಅಲಾ ಹಜರತ್ ಫತ್ವಾ (Fatwa) ಹೊರಡಿಸಿದೆ. ಮುಸ್ಲಿಂ (Muslim) ಯುವಕರು ತಮ್ಮ ಗುರುತನ್ನು ಮರೆ ಮಾಚುವ ಮತ್ತು ಮಸ್ಲಿಮೇತರ (Non-Muslim) ಹುಡುಗಿಯರನ್ನು ಮಾದುವೆಯಾಗಬಾರದು ಎಂದು ಇನ್ನೊಂದು ಫತ್ವಾ ಹೊರಡಿಸಿದೆ.

ಪುರುಷರು ಕೂದಲು ಕಸಿ ಮಾಡುವುದು ಹಾಗೂ ಮಹಿಳೆಯರು ತಮ್ಮ ಹುಬ್ಬುಗಳಿಗೆ ಆಕಾರ ನೀಡುವುದು ಷರಿಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ.

ದಾರುಲ್ ಇಫ್ತಾ (Darul Ifta) ಸಂಸ್ಥೆಯು ಹೊರಡಿಸಿದ ಈ ಫತ್ವಾದಲ್ಲಿ ಮುಸ್ಲಿಂ ಯುವಕರು ತಮ್ಮ ಗುರುತನ್ನು ಮರೆಮಾಚಿ ಅನ್ಯಧರ್ಮದ ಹುಡುಗಿಯರ ಪ್ರೀತಿಯಲ್ಲಿ ಬೀಳುವುದು ‘ಹರಾಮ್’ (Haram) ಎಂದು ಹೇಳಿದೆ. ಮುಸ್ಲಿಂ ಯುವಕರು ಇಸ್ಲಾಮೇತರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಲ್ಲದೆ ಅನ್ಯ ಧರ್ಮದ ಯುವತಿಯರೊಂದಿಗೆ ಪ್ರೀತಿಯಲ್ಲಿ ಬಿದ್ದು ಅವರನ್ನು ಮದುವೆಯಾಗುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಬರೇಲಿಯಿಂದ ಫತ್ವಾವನ್ನು ಹೊರಡಿಸಲಾಗಿದೆ ಎಂದು ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನ ಶಹಾಬುದ್ದಿನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಇಸ್ಲಾಮೇತರ ಕೃತ್ಯಗಳಲ್ಲಿ ಮುಸ್ಲಿಂ ಹುಡುಗರು ತಮ್ಮ ಕೈಗೆ ಖಡಗ, ಹಣೆಗೆ ತಿಲಕವನ್ನು ಇಟ್ಟುಕೊಳ್ಳುವುದು, ತಮ್ಮ ಗುರುತನ್ನು ಮರೆಮಾಚಿ ಅನ್ಯ ಧರ್ಮದ ಯುವತಿಯರೊಡನೆ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುವಂತಹ ಚಟುವಟಿಕೆಗಳು ಕಾನೂನು ಬಾಹಿರ ಮತ್ತು ಹರಾಮ್ ಎಂದು ಫತ್ವಾದಲ್ಲಿ ಉಲ್ಲೇಖಿಸಲಾಗಿದೆ. ಇದೇ ತರಹ ಪತಿಯು ತನ್ನ ಪತ್ನಿಗೆ ಮೆಸ್ಸೇಜ್ ಮುಖಾಂತರ ಹಲವು ಬಾರಿ ತಲಾಖ್ (Talaq) ನೀಡಿ ಪತ್ನಿಯು ಅದನ್ನು ಸ್ವೀಕರಿಸಿದರೆ ಷರಿಯಾ ಪ್ರಕಾರ ತಲಾಖ್ ಮಾನ್ಯವಾಗಿರುತ್ತದೆ ಎಂದು ಹೇಳಿದೆ.

About Author

Leave a Reply

Your email address will not be published. Required fields are marked *

You may have missed